ಮೂತ್ರಪಿಂಡವುಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ, ತನ್ನ ಅನಾರೋಗ್ಯದ ಬಗ್ಗೆ ಹಲವು ಸೂಚನೆಗಳನ್ನು ನೀಡುತ್ತದೆ. ಆದರೆ ಅದನ್ನು ಗಮನಿಸುವ ಸೂಕ್ಷ್ಮ ಪ್ರಜ್ಞೆ ನಮಗಿರಬೇಕು ಅಷ್ಟೇ. ಎಷ್ಟೋ ಸಲ ದೇಹದಲ್ಲಿ ಅಸಮತೋಲನ ಗುಣಲಕ್ಷಣಗಳು ಕಂಡುಬಂದರೂ ಅದನ್ನು ನಿರ್ಲಕ್ಷಿಸಿಯೋ ಅಥವಾ ಗೊಂದಲದಲ್ಲೋ ಅದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದರಿಂದ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು.
ಹೀಗಾಗಿ ನೀವು ತಿಳಿದಿರಲೇಬೇಕಾದ ಮೂತ್ರಪಿಂಡ ಕಾಯಿಲೆಯ 10 ಸಾಮಾನ್ಯ ಲಕ್ಷಣಗಳನ್ನು ನಾವು ನಿಮಗಾಗಿ ಪಟ್ಟಿ ಮಾಡಿದ್ದೇವೆ.
ಮಾನವ ದೇಹವು ಎರಡು ಮೂತ್ರಪಿಂಡಗಳನ್ನು ಹೊಂದಿವೆ. ಇವು ಪ್ರಾಥಮಿಕವಾಗಿ ಸಾರಜನಕ ತ್ಯಾಜ್ಯ ಉತ್ಪನ್ನಗಳಿಂದ ಮುಕ್ತವಾದ ರಕ್ತವನ್ನು ಫಿಲ್ಟರ್ ಮಾಡುವ ಜವಾಬ್ದಾರಿ ಹೊಂದಿವೆ. ಇವು ದೇಹದಲ್ಲಿ ಚಯಾಪಚಯ ಕ್ರಿಯೆಯಿಂದ ಉತ್ಪತ್ತಿಯಾಗುವ ಯೂರಿಯಾ, ಕ್ರಿಯೇಟಿನೈನ್, ಆಮ್ಲಗಳನ್ನು ರಕ್ತದಿಂದ ಬೇರ್ಪಡಿಸುವ ಕಾರ್ಯ ಮಾಡುತ್ತವೆ. ಜತೆಗೆ ಮೂತ್ರವನ್ನು ಉತ್ಪಾದಿಸುತ್ತವೆ. ಕಿಡ್ನಿಗಳು ದೇಹದಲ್ಲಿ ನೀರಿನ ಸಮತೋಲನ ಕಾಪಾಡುವುದಲ್ಲದೆ, ರಕ್ತದೊತ್ತಡ ನಿಯಂತ್ರಣ, ಮೂಳೆ ಆರೋಗ್ಯ ಮತ್ತು ಹಿಮೋಗ್ಲೋಬಿನ್ ಸಂಶ್ಲೇಷಣೆಗೆ ಪ್ರಮುಖವಾದ ಅನೇಕ ಹಾರ್ಮೋನ್‍ಗಳನ್ನು ನಿಯಂತ್ರಿಸುತ್ತವೆ ಮತ್ತು ಉತ್ಪಾದಿಸುತ್ತವೆ. ’
ಮಿಲಿಯನ್‍ನಷ್ಟು ಜನರು ವಿವಿಧ ರೀತಿಯ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಬಹಳಷ್ಟು ಸಮಯ ಇದರ ಬಗ್ಗೆ ಯಾವ ಕಲ್ಪನೆ ಕೂಡ ಅವರಿಗಿಲ್ಲ. ರೋಗ ಉಲ್ಬಣಿಸಿದಾಗಲೇ ಇದರ ತೀವ್ರತೆ ಅರಿವಾಗುವುದು. ಹಾಗಾಗಿಯೇ ಮೂತ್ರಪಿಂಡದ ಕಾಯಿಲೆಯನ್ನು ಸೈಲೆಂಟ್ ಕಿಲ್ಲರ್ ಎನ್ನುವರು. ಜನರು ತಮ್ಮ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುತ್ತಾರೆ. ಆದರೆ ಗುರುತಿಸಲಾಗದ ಮೂತ್ರಪಿಂಡದ ಸಮಸ್ಯೆಗಳನ್ನು ಪತ್ತೆಹಚ್ಚಲು ತಮ್ಮ ರಕ್ತದಲ್ಲಿ ಸರಳವಾದ ಕ್ರಿಯೇಟಿನೈನ್ ಪರೀಕ್ಷೆ ಮಾಡಿಸಲು ಮರೆತುಬಿಡುತ್ತಾರೆ. ಈ ನಿರ್ಲಕ್ಷ್ಯವೇ ಮುಂದೊಂದಿನ ಪ್ರಾಣಕ್ಕೇ ಕಂಟಕ ತಂದೊಡ್ಡುವುದು.
ಕಿಡ್ನಿಯು ತನ್ನ ಅಸ್ವಸ್ಥತೆ ಬಗ್ಗೆ ಹಲವು ಸೂಚನೆಗಳನ್ನು ಕೊಡುತ್ತದೆ. ಆದರೆ ಹೆಚ್ಚಿನ ಸಮಯ ಇದನ್ನು ನಾವು ನಿರ್ಲಕ್ಷಿಸಿಬಿಡುತ್ತೇವೆ. ಮೂತ್ರಪಿಂಡ ಅಥವಾ ಕಿಡ್ನಿ ಸಮಸ್ಯೆಗಳನ್ನು ಪತ್ತೆಹಚ್ಚಲು ಏಕೈಕ ನಿರ್ಣಾಯಕ ಮಾರ್ಗವೆಂದರೆ ದೃಢೀಕರಣ ಪರೀಕ್ಷೆಗಳನ್ನು ಮಾಡಿಸುವುದು. ಹಾಗಾದರೆ ನಾವೀಗ ಮೂತ್ರಪಿಂಡದ ಕಾಯಿಲೆಯ ಕೆಲ ಸೂಚನೆಗಳನ್ನು ನೋಡೋಣ:
ಕಿಡ್ನಿ ಕಾಯಿಲೆಯ ಆರಂಭಿಕ ಚಿಹ್ನೆಗಳು*ದೌರ್ಬಲ್ಯ ಅಥವಾ ಆರಂಭಿಕ ದಣಿವು ಮೂತ್ರಪಿಂಡ ಕಾಯಿಲೆಯ ಸಾಮಾನ್ಯ ಲಕ್ಷಣ. ಮೂತ್ರಪಿಂಡದ ಅಪಸಾಮಾನ್ಯ ಕ್ರಿಯೆ ಮುಂದುವರಿದಂತೆ ಈ ರೋಗಲಕ್ಷಣವು ಹೆಚ್ಚು ಹೆಚ್ಚು ಬಾಧಿಸುತ್ತದೆ. ಇದು ಹೆಚ್ಚಾಗಿ ರಕ್ತದಲ್ಲಿನ ವಿಷಗಳು ಮತ್ತು ಕಲ್ಮಶಗಳ ಸೇರ್ಪಡೆಯಿಂದಾಗಿ ಹಾಗೂ ಕಿಡ್ನಿಯ ಕಳಪೆ ಕಾರ್ಯನಿರ್ವಹಣೆಯಿಂದ ಉಂಟಾಗುತ್ತದೆ. ಇದನ್ನು ಹೆಚ್ಚಿನ ಜನರು ಗಮನಿಸದೆ ನಿರ್ಲಕ್ಷಿಸುತ್ತಾರೆ.
*ಹಸಿವು ಕಡಿಮೆಯಾಗುವುದು: ಹೊಟ್ಟೆಯಲ್ಲಿ ಟಾಕ್ಸಿನ್ ಶೇಖರಣೆಯಾದಂತೆ ಹಸಿವು ಕಡಿಮೆಯಾಗುವುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಕೆಲವೊಮ್ಮೆ ರೋಗ ಉಲ್ಬಣಿಸಿದಂತೆ ರುಚಿಯ ಗ್ರಹಿಕೆಯಲ್ಲಿ ಬದಲಾವಣೆ ಉಂಟಾಗಬಹುದು.
*ಮುಂಜಾನೆ ವಾಕರಿಕೆ ಮತ್ತು ವಾಂತಿ: ಮುಂಜಾನೆ ವಾಕರಿಕೆ ಕಂಡುಬಂದರೆ ಮೂತ್ರಪಿಂಡದ ಕಾರ್ಯವು ಹದಗೆಡುವ ಮೊದಲ ಚಿಹ್ನೆಗಳಲ್ಲಿ ಒಂದಾಗಿದೆ ಎಂದರ್ಥ. ಬೆಳಗ್ಗೆ ಹಲ್ಲುಜ್ಜಲು ಬಾತ್‍ರೂಂಗೆ ಹೋದಾಗ ಸಾಮಾನ್ಯವಾಗಿ ಈ ಅನುಭವವಾಗುತ್ತದೆ. ಕೊನೆಯ ಹಂತದ ಕಿಡ್ನಿ ವೈಫಲ್ಯದಲ್ಲಿ, ರೋಗಿಯು ವಾಂತಿ ಅಥವಾ ಸಂಪೂರ್ಣ ಹಸಿವಿನ ನಷ್ಟದ ಸಮಸ್ಯೆ ಎದುರಿಸುತ್ತಾನೆ.
*ದೇಹದಿಂದ ಒಂದುತೊಟ್ಟು ರಕ್ತ ಆಚೆಹೋಗದೆ ಅನೀಮಿಯ ಉಂಟಾಗುವುದು ಕಿಡ್ನಿ ಕಾಯಿಲೆಯ ಸಾಮಾನ್ಯ ಲಕ್ಷಣ. ಇದು ಕಿಡ್ನಿಯಲ್ಲಿ ಉತ್ಪತ್ತಿಯಾಗುವ ಕಡಿಮೆ ಎರಥ್ರೋಪೊಯೆಟಿನ್ ಮಟ್ಟಗಳು, ಕಡಿಮೆ ಕಬ್ಬಿಣಂಶದ ಮಟ್ಟ ಮತ್ತು ಮೂಳೆ ಮಜ್ಜೆಯ ನಿಗ್ರಹಕ್ಕೆ ಕಾರಣವಾಗುವ ಟಾಕ್ಸಿನ್ ಶೇಖರಣೆಯಂತಹ ಕಾರ್ಯದಿಂದಾಗಿ ರಕ್ತ ನಷ್ಟ ಉಂಟಾಗುತ್ತದೆ.
*ಆಗಾಗ್ಗೆ ಮೂತ್ರವಿಸರ್ಜನೆ: ಕಿಡ್ನಿ ವಿಫಲವಾಗಿದ್ದಲ್ಲಿ ಆಗಾಗ್ಗೆ ಮೂತ್ರ ಹೋಗುವುದು ಸಮಸ್ಯೆಯ ಮುಖ್ಯಲಕ್ಷಣ. ಇದು ವ್ಯಕ್ತಿಗಳಲ್ಲಿ ಭಿನ್ನವಾಗಿರಹುದು. ಕೆಲವರಿಗೆ ಆಗಾಗ್ಗೆ ಮೂತ್ರವಿಸರ್ಜನೆಯಾದರೆ, ಮತ್ತೆ ಕೆಲವರಿಗೆ ಮೂತ್ರವಿಸರ್ಜನೆ ಕಡಿಮೆಯಾಗಬಹುದು. ವಿಶೇಷವಾಗಿ ರಾತ್ರಿಯಲ್ಲಿ ಆಗಿಂದಾಗ್ಗೆ ಮೂತ್ರಹೋಗುವ ಸಮಸ್ಯೆ ಉಂಟಾಗಬಹುದು.
*ನೊರೆ ಮೂತ್ರ ಅಥವಾ ಮೂತ್ರದಲ್ಲಿ ಪ್ರೋಟಿನ್ ಮತ್ತು ರಕ್ತ ಸೋರಿಕೆ: ಮೂತ್ರಪಿಂಡದ ಫಿಲ್ಟರಿಂಗ್ ಕಾರ್ಯವಿಧಾನವು ಹಾನಿಗೊಳಗಾದಾಗ ಪ್ರೋಟಿನ್ ಮತ್ತು ರಕ್ತ ಕಣಗಳು ಮೂತ್ರದಲ್ಲಿ ಸೋರಿಕೆಯಾಗಲು ಆರಂಭಿಸುತ್ತದೆ.
*ಒಣ ಮತ್ತು ತುರಿಕೆ ಚರ್ಮ: ಕಿಡ್ನಿ ಕಾರ್ಯವು ಕುಸಿದಂತೆ, ದೇಹದಲ್ಲಿ ಟಾಕ್ಸಿನ್‍ಗಳು ಹೆಚ್ಚು ಸಂಗ್ರಹವಾಗಲು ಆರಂಭಿಸುತ್ತದೆ. ಇದು ಚರ್ಮದ ಮೇಲೆ ಪರಿಣಾಮ ಬೀರಿ, ತುರಿಕೆ, ಶುಷ್ಕತೆ ಉಂಟಾಗುವುದಲ್ಲದೆ ಚರ್ಮ ದುರ್ವಾಸನೆ ಬೀರುತ್ತದೆ.
*ಬೆನ್ನು ನೋವು ಅಥವಾ ಕೆಳಹೊಟ್ಟೆ ನೋವುಂಟಾಗುವುದು. ಕಣಕಾಲುಗಳು, ಪಾದಗಳು ಅಥವಾ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುವುದು ಕಿಡ್ನಿ ಫೆಲ್ಯೂರ್ ಲಕ್ಷಣಗಳು.
*ಅಧಿಕ ರಕ್ತದೊತ್ತಡ: ಮೂತ್ರಪಿಂಡ ಕಾಯಿಲೆಯ ಲಕ್ಷಣಗಳಲ್ಲಿ ಪ್ರಮುಖವಾದದ್ದು ಎಂದರೆ ಅಧಿಕ ರಕ್ತದೊತ್ತಡ. ಹೈ ಬ್ಲಡ್‍ಪ್ರೆಶರ್ ಹೊಂದಿರುವ ವ್ಯಕ್ತಿಗಳು ಕಿಡ್ನಿ ಕಾರ್ಯಚಟುವಟಿಕೆ ಕುರಿತು ನಿಯಮಿತವಾಗಿ ಪರೀಕ್ಷೆ ಮಾಡಿಸುತ್ತಿರಬೇಕು. ಇಲ್ಲದಿದ್ದರೆ ಮೂತ್ರಪಿಂಡದ ಕಾರ್ಯವು ಹದಗೆಟ್ಟಂತೆ ಸೋಡಿಯಂ ಮತ್ತು ನೀರಿನ ಧಾರಣವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದರಿಂದ ತಲೆನೋವು, ಕಿಬ್ಬೊಟ್ಟೆಯ ನೋವು, ದೃಷ್ಟಿ ಕಪ್ಪಾಗುವುದು ಹೀಗೆ ನಾನಾ ಸಮಸ್ಯೆಗಳು ಆರಂಭವಾಗುತ್ತದೆ.
*ಕಣ್ಣಿನ ಕವಾಟಗಳು ಊದಿಕೊಳ್ಳುವುದು ಮೂತ್ರಪಿಂಡದ ಅಸ್ವಸ್ಥತೆಯ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ವೈದ್ಯರ ಬಳಿ ಸ್ಥೂಲವಾಗಿ ಪರೀಕ್ಷೆ ಮಾಡಿಸಿ, ತಕ್ಷಣದಿಂದಲೇ ಔಷಧೋಪಚಾರ ಪಡೆಯಬೇಕು. ಇಲ್ಲದಿದ್ದಲ್ಲಿ ಕಿಡ್ನಿ ಡಯಾಲಿಸ್ ಮತ್ತು ಕಿಡ್ನಿ ಕಸಿಯಂತಹ ಚಿಕಿತ್ಸೆಗೆ ಒಳಗಾಗಬೇಕಾದೀತು ಎಚ್ಚರ.
ತೂಕ ಕಮ್ಮಿ ಮಾಡ್ಕೋಬೇಕೇ? ಮಧುಮೇಹ ನಿಯಂತ್ರಣಕ್ಕೆ ಬರಬೇಕೇ? ಈ ಪಾನೀಯ ಸೇವಿಸಿ!

ನಿಮಗೆ ಈ ಲಕ್ಷಣಗಳು ಇದ್ದರೆ ಪ್ರಾಸ್ಟೇಟ್ ಕ್ಯಾನ್ಸರ್ ಇದೆ ಎಂದರ್ಥ; ತಪಾಸಣೆ ಮಾಡಿಕೊಳ್ಳಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − five =
Remember me
