ಬೆಂಗಳೂರು:ದೇವರ ಪೂಜೆಗಾಗಿ ದೀಪಗಳು ವಿಗ್ರಹಗಳು, ಬೆಳ್ಳಿಯ ತಟ್ಟೆಗಳು, ಬೆಳ್ಳಿಯ ಕುಂಕುಮದ ಬಟ್ಟಲುಗಳು ಇವೆ. ಬೆಳ್ಳಿಯ ವಸ್ತುಗಳು ಮತ್ತು ಬೆಳ್ಳಿಯ ಆಭರಣಗಳನ್ನು ನಿರಂತರವಾಗಿ ಬಳಸುವುದರಿಂದ, ಅವುಗಳು ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ಬೆಳ್ಳಿಯ ವಸ್ತುಗಳಿಗೆ ಹೊಳಪು ಮರಳಿ ತರಲು, ಅದನ್ನು ಅಂಗಡಿಯಲ್ಲಿ ಪಾಲಿಶ್ ಮಾಡಲಾಗುತ್ತದೆ. ಪದೇ ಪದೇ ಪಾಲಿಶ್ ಮಾಡುವುದರಿಂದ ಬೆಳ್ಳಿ ಬೇಗ ಹಾಳಾಗುತ್ತದೆ. ಅದರ ಹೊರತಾಗಿ ಕೆಲವೇ ಕೆಲವು ಗೃಹೋಪಯೋಗಿ ವಸ್ತುಗಳೊಂದಿಗೆ ಬೆಳ್ಳಿಯ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು.
ಬೆಳ್ಳಿಯ ವಸ್ತುಗಳ ಮೇಲೆ ಟೂತ್‌ಪೇಸ್ಟ್‌ನಿಂದ 10 ರಿಂದ 15 ನಿಮಿಷ ಬ್ರಶ್ ನಿಂದ ಸ್ಕ್ರಬ್ ಮಾಡಿ. ಈ ರೀತಿ ಬ್ರಶ್ ನಿಂದ 5 ನಿಮಿಷ ಉಜ್ಜಿ.. ಬಳಿಕ ನೀರಿನಿಂದ ಸ್ವಚ್ಛವಾಗಿ ತೊಳೆದರೆ ಬೆಳ್ಳಿಯ ಮೇಲೆ ಸಂಗ್ರಹವಾದ ಕಲೆ ಮಾಯವಾಗುತ್ತದೆ.
ಬೆಳ್ಳಿಯ ವಸ್ತುಗಳು ಅಥವಾ ಹಿತ್ತಾಳೆ ಸಾಮಾನುಗಳು ಪ್ರಕಾಶಮಾನವಾಗಿ ಹೊಳೆಯಬೇಕೆಂದು ನೀವು ಬಯಸಿದರೆ, ಅಡಿಗೆ ಸೋಡಾ ಮತ್ತು ಬಿಳಿ ವಿನೆಗರ್​​ನನ್ನು ಮೃದುವಾದ ಬಟ್ಟೆಯ ಮೇಲೆ ಹಾಕಿ ಬೆಳ್ಳಿಯ ಮೇಲೆ ಉಜ್ಜಿಕೊಳ್ಳಿ. ನಂತರ ಅದನ್ನು ನೀರಿನಿಂದ ತೊಳೆಯಿರಿ.
ಅಡಿಗೆ ಸೋಡಾದೊಂದಿಗೆ ನಿಂಬೆ ರಸವನ್ನು ಬೆರೆಸಿ ಬೆಳ್ಳಿಯ ಸಾಮಾನುಗಳ ಮೇಲೆ ಉಜ್ಜಿದರೆ ಬೆಳ್ಳಿಯ ಸಾಮಾನುಗಳು ಹೊಸದರಂತೆ ಹೊಳೆಯುತ್ತವೆ.ಬೆಳ್ಳಿಯ ವಸ್ತುಗಳು ಮತ್ತು ಆಭರಣಗಳ ಮೇಲಿನ ಕಪ್ಪು ಕಲೆ ತೆಗೆದುಹಾಕಲು ಶಾಂಪೂ ಅಥವಾ ಯಾವುದೇ ಸೋಪ್ ಅನ್ನು ಬಳಸಬಹುದು.
ಹ್ಯಾಂಡ್ ಸ್ಯಾನಿಟೈಸರ್​​ನನ್ನು ಬೆಳ್ಳಿ ಆಭರಣಗಳನ್ನು ಶುಚಿ ಮಾಡಲು ಕೂಡ ಬಳಕೆ ಮಾಡಬಹುದು. ಒಣ ಬಟ್ಟೆಗೆ ಸ್ವಲ್ಪ ಸ್ಯಾನಿಟೈಸರ್ ಹಾಕಿ ಮತ್ತು ಇದರಿಂದ ಬೆಳ್ಳಿ ಪಾತ್ರೆಗಳನ್ನು ಉಜ್ಜಿಕೊಳ್ಳಿ.
ನೀವು ಟವೆಲ್ ಮೇಲೆ ಕೆಚಪ್ ಅನ್ನು ಹಾಕಿ. ಅದರಿಂದ ಬೆಳ್ಳಿ ಪಾತ್ರೆಗಳನ್ನು ಉಜ್ಜಿ. 15 ರಿಂದ 20 ನಿಮಿಷಗಳ ಕಾಲ ಬಿಡಿ.
ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಮಹಿಳೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × five =
Remember me
