ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ಸಿಂದಗಿ ಪುರಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಕೈಗೆ ಬಹುತೇಕ ಅಧಿಕಾರ ಖಚಿತಗೊಂಡಿದೆ. 23 ಸದಸ್ಯ ಬಲದ ಪುರಸಭೆಗೆ ಬಹುಮತಕ್ಕೆ 12 ಸ್ಥಾನ ಬೇಕು. ಕಾಂಗ್ರೆಸ್ 11ಸ್ಥಾನ ಪಡೆದಿದ್ದು ಜೆಡಿಎಸ್ 6, ಬಿಜೆಪಿ 3 ಹಾಗೂ ಪಕ್ಷೇತರ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರರ ಪೈಕಿ ಇಬ್ಬರು ಕಾಂಗ್ರೆಸ್ ಬೆಂಬಲಿಗರೆನ್ನಲಾಗಿದ್ದು ಪುರಸಭೆ ಅಧಿಕಾರಿ ಕೈವಶವಾಗುವ ಎಲ್ಲ‌ ಲಕ್ಷಣಗಳಿವೆ.
ಕೈ ಕಾರ್ಯಕರ್ತರ ಸಂಭ್ರಮಾಚರಣೆ:ಬೆಳಗ್ಗೆ 9.30 ರಷ್ಟೊತ್ತಿಗೆ ಫಲಿತಾಂಶ ಹೊರಬೀಳುತ್ತಿದ್ದಂತೆ ಕೈ ಕಾರ್ಯಕರ್ತರು ಸಂಭ್ರಮಾಚರಿಸಿದರು. ಮಾಜಿ ಶಾಸಕ ಶರಣಪ್ಪ ಸುಣಗಾರ ಹಾಗೂ ವಿಠಳ ಕೋಳೂರ ಸೇರಿದಂತೆ ಅನೇಕ ನಾಯಕರ ಪ್ರಚಾರದ ಫಲವಾಗಿ ಕಾಂಗ್ರೆಸ್ ಭರ್ಜರಿ ಸ್ಥಾನ ಪಡೆಯಲು ಸಾಧ್ಯವಾಯಿತು.
ಜೆಡಿಎಸ್ ಶಾಸಕ ಎಂ.ಸಿ.‌ಮನಗೂಳಿ ಅವರು ತಮ್ಮ ಪುತ್ರನ ಚುನಾವಣೆಗೆ ನೀಡಿದಷ್ಟು ಮಹತ್ವ ಇನ್ನುಳಿದ ವಾರ್ಡ್ ಗಳಿಗೆ ನೀಡಲಿಲ್ಲ ಎಂಬ ಮಾತು ಕೇಳಿ ಬಂದಿದೆ. ಮಾತ್ರವಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂಬ ವಿಶ್ಲೇಷಣೆ ವ್ಯಕ್ತ ವಾಗಿದೆ. ಇನ್ನು ಬಿಜೆಪಿ ಪರ ಮಾಜಿ ಶಾಸಕ ರಮೇಶ ಭೂಸನೂರ ಭರ್ಜರಿ ಪ್ರಚಾರ ಮಾಡಿದ್ದರಾದರೂ ನಿರೀಕ್ಷಿತ ಫಲಿತಾಂಶ ಬರಲಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
