ಮೈಸೂರು:ಕೊಲೆ ಪ್ರಕರಣದ ಆರೋಪದಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ತಂದೆಯನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ಬುಧವಾರ (ಅ. 28) ನಡೆದಿದೆ.
ಅನನ್ಯಭಟ್ ತಂದೆ ವಿಶ್ವನಾಥ್ ಭಟ್ (52) ಬಂಧನಕ್ಕೊಳಗಾಗಿದ್ದಾರೆ. ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆಗೆ 7 ಲಕ್ಷ ರೂ. ಸುಪಾರಿ ನೀಡಿರುವ ಆರೋಪ ವಿಶ್ವನಾಥ್ ಭಟ್ ವಿರುದ್ಧ ಕೇಳಿಬಂದಿದೆ. ಕೊಲೆಗಾಗಿ ವಿಶ್ವನಾಥ್​ ಇಬ್ಬರನ್ನು ಬಳಸಿದ್ದರು ಎನ್ನಲಾಗಿದೆ.
ವಿಶ್ವನಾಥ್ ಭಟ್‌ಗೆ ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಸಾಥ್ ನೀಡಿದ್ದರು. ನಿರಂಜನ್ ಹಾಗೂ ನಾಗೇಶ್ ಎಂಬ ಹಂತಕರು ಸುಪಾರಿ ಪಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ:ಸೌದಿಯಿಂದ ಭಾರತಕ್ಕೆ ಅಬ್ಬಾ ಎನ್ನುವಷ್ಟು ಭರ್ಜರಿ ಗಿಫ್ಟ್​​… ನಲುಗಿ ಹೋದ ಪಾಕಿಸ್ತಾನ!
20/09/2020ರಂದು ಮೈಸೂರಿನ ನಿವೇದಿತಾ ನಗರದಲ್ಲಿ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆಯಾಗಿತ್ತು. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಗೆ ಕಾರಣವೇನು?ಇನ್ನು ಕೊಲೆಗೆ ಪರಶಿವಮೂರ್ತಿಯ ಕಿರುಕುಳ ಕಾರಣ ಎನ್ನಲಾಗಿದೆ. ಪರಶಿವಮೂರ್ತಿ ಅವರು ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದರು. ಪ್ರತಿ ತಿಂಗಳು ಕಮಿಷನ್‌ಗಾಗಿ ಪೀಡಿಸುತ್ತಿದ್ದರು ಎಂಬ ಆರೋಪವಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ವಿಶ್ವನಾಥ್ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಎರಡು ವರ್ಷಗಳಿಂದ ಗಾಯಕಿ ಅನನ್ಯಭಟ್‌ರಿಂದ ವಿಶ್ವನಾಥ್​ ದೂರ ಇದ್ದಾರೆ. ವಿಶ್ವನಾಥ್​ ಪತ್ನಿ ಹಾಗೂ ಮಗಳನ್ನು ಬಿಟ್ಟು ಬೇರೆ ವಾಸವಿದ್ದರು.(ದಿಗ್ವಿಜಯ ನ್ಯೂಸ್​)
ನಾಗಿಣಿ ಅವತಾರ ಎತ್ತಲು ಸಜ್ಜಾದ ಶ್ರದ್ಧಾ ಕಪೂರ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 + 5 =
Remember me
