ಮೈಸೂರು:ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆ ಪ್ರಕರಣದಲ್ಲಿ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಭಟ್ ಪ್ರಮುಖ ಆರೋಪಿಯಾಗಿದ್ದು, ಮತ್ತೊಬ್ಬ ಆರೋಪಿ ಸಿದ್ದರಾಜ್​ಗೂ ಸಿನಿಮಾ ನಂಟಿರುವುದು ತಿಳಿದುಬಂದಿದೆ.
ವಿಶ್ವನಾಥ್​ ಭಟ್​ ಸ್ನೇಹಿತ ಸಿದ್ದರಾಜು ಕೊಲೆ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದು, ಸಿದ್ದರಾಜು ಪುತ್ರ ಶ್ರೀಕಿರಣ್ ಹೊಸ ಸಿನಿಮಾವೊಂದರ ನಾಯಕ. ಬಿಡುಗಡೆಗೆ ಸಿದ್ಧವಾಗಿರುವ ಸಾರೋಟ್ ಚಿತ್ರಕ್ಕೆ ಆರೋಪಿ ಸಿದ್ದರಾಜು ಪುತ್ರ ಶ್ರೀಕಿರಣ್ ಹೀರೋ ಆಗಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಸಾರೋಟ್​ ಚಿತ್ರ ಇನ್ನು ಬಿಡುಗಡೆಯಾಗಿಲ್ಲ. ಪ್ರೇಮಕಥಾ ಹಂದರದಲ್ಲಿ ತಯಾರಾಗಿರುವ ಪುತ್ರನ ಚಿತ್ರಕ್ಕೆ ಆರೋಪಿ ಸಿದ್ದರಾಜು ಹಣ ಹೂಡಿದ್ದಾರೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ:ಸರಿಯಾಗಿ ಮೀಸೆ ಚಿಗುರದ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಬಿದ್ದು ಬರ್ಬರ ಹತ್ಯೆಯಾದ ಯುವಕ!
ಸೆಪ್ಟೆಂಬರ್ 20 ರಂದು ಮೈಸೂರಿನ ನಿವೇದತಾ ನಗರದಲ್ಲಿ ನಿಗೂಢವಾಗಿ ಕೊಲೆ ನಡೆದಿತ್ತು. ಸಿಂಗರ್ ಅನನ್ಯ ಭಟ್ ತಂದೆ ವಿಶ್ವನಾಥ್ ಕೊಲೆಗೆ ಸುಪಾರಿ ನೀಡಿದ್ದ. ಪೂಜಾ ವಿಧಿವಿಧಾನಗಳಲ್ಲಿ ವಿಶ್ವನಾಥ್ ಭಟ್ ಪ್ರಸಿದ್ಧಿ ಪಡೆದಿದ್ದಾರೆ. ಅಲ್ಲದೆ, ಕೊಲೆಗೆ ಸಂಚು ರೂಪಿಸುವ ವಿಚಾರದಲ್ಲೂ ವಿಶ್ವನಾಥ್​ ಮತ್ತು ಸ್ನೇಹಿತ ಸಿದ್ದರಾಜು ನಿಸ್ಸೀಮರು ಎನ್ನಲಾಗಿದೆ.
ಕೊಲೆಗೆ ಕಾರಣವೇನು?ಇನ್ನು ಕೊಲೆಗೆ ಪರಶಿವಮೂರ್ತಿಯ ಕಿರುಕುಳ ಕಾರಣ ಎನ್ನಲಾಗಿದೆ. ಪರಶಿವಮೂರ್ತಿ ಅವರು ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದರು. ಪ್ರತಿ ತಿಂಗಳು ಕಮಿಷನ್‌ಗಾಗಿ ಪೀಡಿಸುತ್ತಿದ್ದರು ಎಂಬ ಆರೋಪವಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ವಿಶ್ವನಾಥ್ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ವಿಶ್ವನಾತ್​ಗೆ ಸ್ನೇಹಿತ ಸಿದ್ದರಾಜು ಸಾಥ್​ ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಕ್ರಿಶ್ಚಿಯನ್​ ಬಾಲಕಿ ಅಪಹರಿಸಿದ ಪಾಕ್​ ವ್ಯಕ್ತಿ: ಮದ್ವೆಯಾದ ಬಾಲಕಿ ಎರಡೇ ದಿನದಲ್ಲಿ ಯುವತಿಯಾದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 10 =
Remember me
