ಹಾವೇರಿ:ರಿಯಾಲಿಟಿ ಶೋ ನಡೆಸಿದ ಖಾಸಗಿ ವಾಹಿನಿಯವರು ತನಗೆ ಬಹುಮಾನವಾಗಿ ಯಾವುದೇ ಸೈಟ್ ನೀಡಿಲ್ಲ ಎಂಬುದಾಗಿ ತಾನು ಹೇಳಿಲ್ಲ ಎಂದು ರಿಯಾಲಿಟಿ ಶೋ ಖ್ಯಾತಿಯ ಗಾಯಕ, ಕುರಿಗಾಹಿ ಸವಣೂರ ತಾಲೂಕಿನ ಚಿಲ್ಲೂರಬಡ್ನಿಯ ಹನುಮಂತಪ್ಪ ಲಮಾಣಿ ಸ್ಪಷ್ಟನೆ ನೀಡಿದ್ದಾನೆ.
‘ಇದು ಸುಳ್ಳು ಸುದ್ದಿ. ವಾಹಿನಿಯವರಿಂದ ನನಗೆ ಎಲ್ಲವೂ ಸಿಕ್ಕಿದೆ. ಈ ಸುಳ್ಳುಸುದ್ದಿಯಿಂದ ನನಗೆ ಬೇಸರವಾಗಿದೆ. ನನ್ನ ಹಾಗೂ ವಾಹಿನಿಯ ಒಡನಾಟ ಉತ್ತಮವಾಗಿದೆ’ ಎಂದು ಹನುಮಂತಪ್ಪನು ಫೇಸ್‌ಬುಕ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾನೆ. ರಿಯಾಲಿಟಿ ಶೋ ನಡೆಸಿದ ವಾಹಿನಿಯವರು ಬಹುಮಾನವಾಗಿ ಯಾವುದೇ ಸೈಟ್ ನೀಡಿಲ್ಲ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿ ಸುಳ್ಳು ಎಂದು ಹನುಮಂತಪ್ಪನ ಶಿಕ್ಷಕ ಎನ್.ಕೆ. ಪಾಟೀಲ ಕೂಡ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ಅವರು, ‘ರಿಯಾಲಿಟಿ ಶೋನಲ್ಲಿ ವಾಹಿನಿಯವರು ಹೇಳಿದಂತೆ ಚೆಕ್ ಮೂಲಕ ಹಣ ಕೊಟ್ಟಿದ್ದಾರೆ. ಅಲ್ಲದೆ, ರಾಯ್ ಎನ್ನುವವರು ಸ್ವಯಂ ಪ್ರೇರಣೆಯಿಂದ ಹನುಮಂತಪ್ಪ ರನ್ನರ್ ಅಪ್ ಆಗಿದ್ದಕ್ಕೆ ಸೈಟ್ ಕೊಡುವುದಾಗಿ ಹೇಳಿದ್ದರು. ಅದರಂತೆ ಅವರು ಸೈಟ್ ಬದಲು 21 ಲಕ್ಷ ರೂ. ಕೊಟ್ಟಿದ್ದಾರೆ’ ಎಂದು ಪಾಟೀಲರು ಹೇಳಿದ್ದಾರೆ.
ಸನ್ನಿ ಲಿಯೋನ್​ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್​ ಯಂಗ್​ಮ್ಯಾನ್​ ಇವರೇ..

VIDEO | ಸೀರೆಯುಟ್ಟು ಪಲ್ಟಿ ಹೊಡೆದ ಮಹಿಳಾ ಜಿಮ್ನಾಸ್ಟ್, ವಿಡಿಯೋ ವೈರಲ್!

ಗರ್ಭಿಣಿ ಕರೀನಾ ಕಪೂರ್ ಈಗ ಮಿಸ್ ಮಾಡಿಕೊಳ್ಳುತ್ತಿರುವುದಾದರೂ ಏನು?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
