ನವದೆಹಲಿ:ಅಪಘಾತಗಳನ್ನು ತಪ್ಪಿಸಲು ವಿಶ್ವದಾದ್ಯಂತದ ಜನರಿಗೆ ವೇಗದ ಮಿತಿಯೊಳಗೆ ವಾಹನ ಚಲಾಯಿಸಲು ಸೂಚಿಸಲಾಗುತ್ತದೆ. ಸುರಕ್ಷಿತ ಚಾಲನೆಯ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ವಿವಿಧ ಸಂಸ್ಥೆಗಳು ವಿಶಿಷ್ಟ ಮಾರ್ಗಗಳನ್ನು ರೂಪಿಸಿವೆ. ಈ ಸಂದರ್ಭದಲ್ಲಿ ವೀಡಿಯೊ ಟ್ವಿಟರ್​ನಲ್ಲಿ ವೈರಲ್​ ಆಗಿದೆ. ಈ ಕ್ಲಿಪ್ ಪ್ರಕಾರ ನೀವು ಸರಿಯಾದ ವೇಗದಲ್ಲಿ ವಾಹನ ಚಲಾಯಿಸಿದರೆ, ಹಂಗೇರಿ ದೇಶದ ರಸ್ತೆಗಳು ನಿಮಗಾಗಿ ಹಾಡು ಹಾಡುತ್ತವೆ ಎಂದು ಹೇಳಲಾಗುತ್ತದೆ!
ಈ ವೀಡಿಯೊವನ್ನು ಜುಲೈ 24ರಂದು ಟ್ವೀಟ್ ಮಾಡಲಾಗಿದ್ದು. ಮೊದಲ ಕೆಲವು ಸೆಕೆಂಡುಗಳವರೆಗೆ ಏನೂ ಆಗುವುದಿಲ್ಲ. ನಂತರ ಮಾತ್ರ ಒಂದು ನಿರ್ದಿಷ್ಟ ವೇಗದಲ್ಲಿ ವಾಹನ ಹೋಗುತ್ತಿರಬೇಕಾದರೆ ಸುಮಧುರ ಸಂಗೀತ ಕೇಳಿಸಲು ಶೂರುವಾಗುತ್ತದೆ.
ಆ ವ್ಯಕ್ತಿ ಹಂಗೇರಿಯ 67ನೇ ರಸ್ತೆಯಲ್ಲಿ ಚಾಲನೆ ಮಾಡುತ್ತಿರುತ್ತಾನೆ. ಈ ರಸ್ತೆಯನ್ನು ಜನರು ಸಂಗೀತ ರಸ್ತೆ ಎಂದೇ ಕರೆಯುತ್ತಾರೆ. ವೀಡಿಯೊವನ್ನು ಸೂಕ್ಷ್ಮವಾಗಿ ನೋಡುವಾಗ ರಸ್ತೆಯ ಮೇಲೆ ಕೆಲವು ಗೆರೆಗಳನ್ನು ಎಳೆಯಲಾಗಿರುವುದನ್ನು ಕಾಣಬಹುದು. ಕಾರು ನಿರ್ದಿಷ್ಟ ವೇಗದಲ್ಲಿ ಸಾಗುತ್ತಾ ಈ ಗೆರೆಗಳ ಮೇಲೆ ಹಾದುಹೋಗುವಾಗ, ಪ್ರಯಾಣಿಕರು ಸುಮಧುರ ಸಂಗೀತವನ್ನು ಕೇಳಬಹುದಾಗಿದೆ.
Hungary’s musical road will sing to drivers going the right speedpic.twitter.com/AdI9efp88z— Historic Vids (@historyinmemes)July 24, 2023
Hungary’s musical road will sing to drivers going the right speedpic.twitter.com/AdI9efp88z
If you’re wondering what song this is it’s, “Never gunna give you up”— Jack (@jackwillsend)July 24, 2023
If you’re wondering what song this is it’s, “Never gunna give you up”
I've ridden on that road. Hungary is a beautiful country with wonderful folks.Nagyszerű étel, bor és időjárás. A sör is nagyon jó.— Yancey Foster (@Yancey_Foster)July 24, 2023
I've ridden on that road. Hungary is a beautiful country with wonderful folks.Nagyszerű étel, bor és időjárás. A sör is nagyon jó.
ರಸ್ತೆ 67ನ್ನು ಹಂಗೇರಿಯಲ್ಲಿ 2019ರಲ್ಲಿ ಉದ್ಘಾಟಿಸಲಾಯಿತು. ಇದು ಕಪೋಸ್ವರ್ ನಗರ ಮತ್ತು ಎಂ7 ಮೋಟಾರು ಮಾರ್ಗವನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಬ್ಯಾಂಡ್ ಗಣರಾಜ್ಯದ ಪ್ರಮುಖ ಗಾಯಕ ಲಾಸ್ಲೆ ಬಾಡಿ ಅಕಾ ಸಿಪೆ ಅವರ ನೆನಪಿಗಾಗಿ ಈ ರಸ್ತೆಯನ್ನು ಸ್ಥಾಪಿಸಲಾಗಿದೆ. ಲಾಸ್ಲೆ ಬಾಡಿ ಸಂಯೋಜಕ ಮತ್ತು ನಟರಾಗಿದ್ದು, ಅವರು ತಮ್ಮ 47 ನೇ ವಯಸ್ಸಿನಲ್ಲಿ ಮಾರ್ಚ್ 11, 2013 ರಂದು ಹಂಗೇರಿಯ ಬುಡಾಪೆಸ್ಟ್ನಲ್ಲಿ ನಿಧನರಾದರು. ರಸ್ತೆಯ ಬದಿಗೆ ಹೋಗುವಾಗ, ಬ್ಯಾಂಡ್ ನಿಂದ ರೋಡ್ 67 ಹಾಡಿನ 30 ಸೆಕೆಂಡುಗಳ ತುಣುಕನ್ನು ಕೇಳಬಹುದು.(ಏಜೆನ್ಸೀಸ್)
ಹೆತ್ತ ಮಗು ಮಾರಿ ಬೀಚ್​ಗಳಲ್ಲಿ ದಂಪತಿಯ ಹನಿಮೂನ್ ಆಚರಣೆ! ಜತೆಗೆ ಐಫೋನ್ ಬೇರೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 3 =
Remember me
