ಬೆಂಗಳೂರು:ಉದ್ಯಮ ಆರಂಭಿಸಲು ಅನುಕೂಲಕರ ವಾತಾವರಣ ನಿರ್ವಿುಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಸುಗ್ರೀವಾಜ್ಞೆ ತರುತ್ತಿದ್ದು, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಕರ್ನಾಟಕ ಕೈಗಾರಿಕಾ ಸೌಲಭ್ಯ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.
ಸರ್ಕಾರದ ಈ ತೀರ್ಮಾನ ದೇಶದಲ್ಲೇ ಮೊದಲು ಎಂಬುದು ವಿಶೇಷ ಸಂಗತಿ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಇದೇ ರೀತಿ ರಿಯಾಯಿತಿ ಸಣ್ಣ ಕೈಗಾರಿಕೆಗಳಿಗೆ ಮಾತ್ರ ಇದೆ. ಆದರೆ, ಇಲ್ಲಿ ಸಣ್ಣ, ಮಧ್ಯಮ, ಬೃಹತ್ ಉದ್ದಿಮೆ ಸ್ಥಾಪನೆಗೆ ಈ ಕಾಯ್ದೆ ಅನ್ವಯವಾಗಲಿದೆ.
ಸಂಪುಟ ಸಭೆ ಬಳಿಕ ಈ ಬಗ್ಗೆ ವಿವರಣೆ ನೀಡಿದ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ 2002 ಇದಕ್ಕೆ ತಿದ್ದುಪಡಿಯನ್ನು ಸೇರಿಸಿ ಸಂಪುಟದಲ್ಲಿ ಅನುಮತಿ ಪಡೆದಿದ್ದೇವೆ. ಇಡೀ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆ ತರುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ಕೈಗಾರಿಕೆ ಇಲಾಖೆ ಈಸ್ ಆಫ್ ಡೂಯಿಂಗ್ ಬಿಜಿನೆಸ್ ಎಂದು ಹೇಳುತ್ತಿರುತ್ತೇವೆ, ಕೈಗಾರಿಕೆ ಆರಂಭಿಸಲು ಬರುವವರಿಗೆ ತಕ್ಷಣವೇ ಅನುಮತಿ ಸಿಗಬೇಕು. ಏಕಗವಾಕ್ಷಿ ಪದ್ಧತಿ ಸೌಲಭ್ಯ ಅಥವಾ ಭೂಪರಿವರ್ತನೆ ಇರಬಹುದು, ಎಲ್ಲವೂ ಬೇಗನೇ ಆಗಬೇಕೆಂಬ ವಿಚಾರದಲ್ಲಿ ಈ ತೀರ್ಮಾನ ಸಹಕಾರಿಯಾಗಲಿದೆ ಎಂದರು.
ಕಾರ್ಯನಿರ್ವಹಣೆ:
1. ಉದ್ಯಮ ಆರಂಭಿಸಲು ಮುಂದೆ ಬರುವವರು ನೇರವಾಗಿ ಕೈಗಾರಿಕೆ ಇಲಾಖೆಯ ಉದ್ಯೋಗ ಮಿತ್ರಕ್ಕೆ ಅರ್ಜಿ ಸಲ್ಲಿಸಬೇಕು. ಸರ್ಕಾರದ ಉನ್ನತ ಮಟ್ಟದ ಸಮಿತಿ ದಾಖಲಾತಿ ಪರಿಶೀಲಿಸಿ ಅನುಮತಿ ನೀಡುತ್ತದೆ.
2. ಅನುಮತಿ ನೀಡಲು ರಾಜ್ಯಮಟ್ಟದಲ್ಲಿ ಉನ್ನತ ಮಟ್ಟದ ಸಮಿತಿ, ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ಇರಲಿದೆ. ಪ್ರಾಜೆಕ್ಟ್ ರಿಪೋರ್ಟ್ ಆಧಾರದಲ್ಲಿ ಯಾವ ಸಮಿತಿ ಅನುಮತಿ ನೀಡಬೇಕೆಂಬುದು ನಿರ್ಧಾರವಾಗುತ್ತದೆ.
3. 15 ಕೋಟಿ ರೂ. ಒಳಗಿನ ಉದ್ದಿಮೆಗೆ ಜಿಲ್ಲಾ ಮಟ್ಟದ ಸಮಿತಿ ಅನುಮತಿ ಸಾಕಾಗುತ್ತದೆ. ಸಮಿತಿ ಕ್ಲಿಯರೆನ್ಸ್ ಕೊಟ್ಟ ಬಳಿಕ ಅಕ್ನಾಲೆಡ್ಜ್​ಮೆಂಟ್ ಇಟ್ಟುಕೊಂಡು ಉದ್ದಿಮೆ ಕೆಲಸ ಆರಂಭಿಸಬಹುದು. ಬೇರೆ ಯಾವ ಅನುಮತಿ ಬೇಕಿಲ್ಲ.
4. ಸಮಿತಿ ಅನುಮತಿ ಪಡೆದು ಸಿವಿಲ್ ಕೆಲಸ, ಕಟ್ಟಡ ಕಾಮಗಾರಿ, ಯಂತ್ರೋಪಕರಣ ಸ್ಥಾಪನೆ ಕೆಲಸ ಮಾಡಿಕೊಳ್ಳಬಹುದು. ಉತ್ಪಾದನೆ ಆರಂಭಿಸುವುದರೊಳಗೆ ಅಗತ್ಯ ಅನುಮತಿ ಪಡೆದುಕೊಂಡರೆ ಸಾಕು.
5. ಮೂರು ವರ್ಷದೊಳಗೆ ಗ್ರಾಮ ಪಂಚಾಯಿತಿ ಅನುಮತಿ, ಕಟ್ಟಡ ಪ್ಲ್ಯಾನ್​ಗೆ ಅನುಮತಿ, ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಅನುಮತಿ ಪಡೆದರೆ ಸಾಕಾಗುತ್ತದೆ. ಆದರೆ ಸ್ವಯಂ ದೃಢೀಕರಣ ಕಡ್ಡಾಯ.
ಸಚಿವರಿಗೆ ಸಮನ್ವಯದ ಜವಾಬ್ದಾರಿ:ಬೆಂಗಳೂರಿನ ಕರೊನಾ ಪರಿಸ್ಥಿತಿ ಹತೋಟಿಗೆ ತರುವ ವಿಚಾರದಲ್ಲಿ ಬೆಂಗಳೂರಿನ ಸಚಿವರಿಗೆ ಪರಸ್ಪರ ಸಮನ್ವಯದಿಂದ ಜವಾಬ್ದಾರಿ ನಿರ್ವಹಿಸುವಂತೆ ಮುಖ್ಯಮಂತ್ರಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಕರೊನಾ ನಿಯಂತ್ರಣ, ನಿರ್ವಹಣಾ ಉಪಕ್ರಮಗಳ ವಿಷಯದಲ್ಲಿ ಬೆಂಗಳೂರು ದೇಶಕ್ಕೆ ಮಾದರಿಯಾಗಿದೆ. ಹೀಗಾಗಿ ಹೆಚ್ಚುತ್ತಿರುವ ಸೋಂಕು ನಿಯಂತ್ರಿಸಲು, ಮಾಡಿಕೊಂಡಿರುವ ಪ್ಲಾ್ಯನ್ ಜಾರಿ ಸಂಬಂಧ ಸಚಿವರು ಪರಸ್ಪರ ಸಮನ್ವಯ ಸಾಧಿಸಿ, ಆಯಾ ಇಲಾಖೆಗಳಿಂದ ಕೆಲಸ ತೆಗೆದುಕೊಳ್ಳುವಂತೆ ಸಿಎಂ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಕ್ವಾರಂಟೈನ್​ನಲ್ಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆನ್​ಲೈನ್ ಮೂಲಕ ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಖಾಸಗಿ ಆಸ್ಪತ್ರೆಗಳ ಜತೆ ರ್ಚಚಿಸಲು ಸಚಿವ ಆರ್.ಅಶೋಕ್ ಅವರಿಗೆ ನೆರವಾಗುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು.
ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಶೇ.100 ವಿನಾಯಿತಿ:ಕರ್ನಾಟಕ ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ ಇದೆ. ಅದಕ್ಕೆ ಪೂರಕವಾಗಿ ಎಲೆಕ್ಟ್ರಿಕ್ ವೆಹಿಕಲ್ ಉದ್ಯಮಕ್ಕೆ ಸಂಬಂಧಪಟ್ಟಂತೆ ನೋಂದಣಿ, ಸ್ಟ್ಯಾಂಪ್ ಡ್ಯೂಟಿಗೆ ಶೇ.100 ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ‘ಇನ್ನು ನಾಲ್ಕೈದು ವರ್ಷದಲ್ಲಿ ಇಡೀ ದೇಶದಲ್ಲಿ ಎಲೆಕ್ಟ್ರಿಕಲ್ ವಾಹನ ಉತ್ಪಾದನೆ, ಬಳಕೆ ಹೆಚ್ಚಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ, ಕರ್ನಾಟಕದಲ್ಲಿ ಸಹ ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನೆ ಮತ್ತು ಬಳಕೆಗೆ ಹೆಚ್ಚಿನ ಸ್ಕೋಪ್ ಇದೆ. ಆ ದೃಷ್ಟಿಯಿಂದ ಕಂದಾಯ ಇಲಾಖೆಯು ಈ ತೀರ್ಮಾನ ಮಾಡಿದೆ’ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸಂಪುಟದ ಪ್ರಮುಖ ನಿರ್ಧಾರಗಳು:
ಟಿಟಿಡಿ ಕಾಮಗಾರಿ:ತಿರುಪತಿಯ ತಿರುಮಲದಲ್ಲಿ ರಾಜ್ಯ ಎಕರೆ 5 ಸೆಂಟ್ಸ್ ಜಮೀನು ಹೊಂದಿದೆ. ಅಲ್ಲಿ ಯಾತ್ರಾರ್ಥಿಗಳಿಗೆ ಸೌಲಭ್ಯ ಒದಗಿಸಲು ಟಿಟಿಡಿ ಜತೆ ಸೇರಿ ಕಾಮಗಾರಿ ನಡೆಸಲು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರ 200 ಕೋಟಿ ರೂ. ಬಂಡವಾಳ ಹಾಕಲಿದೆ. ಕಲ್ಯಾಣ ಮಂಟಪ, ಕಲ್ಯಾಣಿ, ಅತಿಥಿ ಗೃಹ, 300 ಕೊಠಡಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ಈವರೆಗೆ ಕೈಗಾರಿಕೆ ಆರಂಭಿಸು ವವರಿಗೆ ಕ್ಲಿಯರೆನ್ಸ್ ಪಡೆದುಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ಈಗ ಉನ್ನತ ಮಟ್ಟದ ಸಮಿತಿ ಅನುಮತಿ ಪಡೆದುಕೊಂಡು ಕೈಗಾರಿಕೆ ಆರಂಭಿಸಬಹುದು.
| ಜಗದೀಶ್ ಶೆಟ್ಟರ್ಕೈಗಾರಿಕೆ ಸಚಿವ
https://www.vijayavani.net/sushant-singhs-financial-condition-was-good-ex-manager-shares-his-monthly-expenses/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 4 =
Remember me
