ಬೆಂಗಳೂರು:ಬಿಎಂಟಿಸಿ ಬಸ್ ಮತ್ತು ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆದಿದ್ದು, ವ್ಯವಸ್ಥೆ ನಿರ್ವಹಣೆಗಾಗಿ ಸಂಸ್ಥೆಗಳಿಂದ ಟೆಂಡರ್ ಕರೆಯಲಾಗಿದೆ.
ದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಏಕರೂಪದ ಟಿಕೆಟ್ ವ್ಯವಸ್ಥೆ ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ದೆಹಲಿಯಲ್ಲಿ ಈಗಾಗಲೇ ಆ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದೇ ಮಾದರಿಯನ್ನು ಬೆಂಗಳೂರಿನಲ್ಲೂ ಅಳವಡಿಸಲಾಗುತ್ತಿದೆ. ಜನವರಿಯಲ್ಲೇ ಜಾರಿಗೊಳ್ಳಬೇಕಿದ್ದ ಈ ವ್ಯವಸ್ಥೆ ಹಲವು ಕಾರಣಗಳಿಂದ ವಿಳಂಬವಾಗಿತ್ತು. ಇದೀಗ ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಅಳವಡಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಬಿಎಂಆರ್​ಸಿಎಲ್ ಟೆಂಡರ್ ಕರೆದಿದ್ದು, ಶೀಘ್ರದಲ್ಲಿ ಜಾರಿಗೊಳಿಸಲಾಗುತ್ತದೆ.
ಎರಡೂ ಹಂತದಲ್ಲಿ ಜಾರಿ: ಈಗಾಗಲೇ ರೈಲು ಕಾರ್ಯಾಚರಣೆಗೊಂಡಿರುವ ಮೊದಲ ಹಂತದ 40 ನಿಲ್ದಾಣಗಳ ಜತೆಗೆ 2ನೇ ಹಂತದ 62 ನಿಲ್ದಾಣಗಳ ಪೈಕಿ 44 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.
ಬಿಇಎಲ್​ನಿಂದ ಯಂತ್ರ ಪೂರೈಕೆ: ನಿಲ್ದಾಣಗಳಲ್ಲಿನ ಟಿಕೆಟ್ ಶುಲ್ಕ ಕಡಿತ ದ್ವಾರದಲ್ಲಿ ಆ ಯಂತ್ರ ಅಳವಡಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕಾಮನ್ ಮೊಬಿಲಿಟಿ ಕಾರ್ಡ್​ನಿಂದ ಆಟೋಮ್ಯಾಟಿಕ್ ಟಿಕೆಟ್ ಶುಲ್ಕ ವಸೂಲಿ ಯಂತ್ರಗಳ ಪೂರೈಕೆ ಹೊಣೆಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ಗೆ ವಹಿಸಲಾಗಿದೆ.
ಆಸಕ್ತಿ ತೋರದ ಬಿಎಂಟಿಸಿ
ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿ ಕುರಿತು ಬಿಎಂಟಿಸಿ ಆಸಕ್ತಿ ತೋರಿಸುತ್ತಿಲ್ಲ. ಕಾಮನ್ ಮೊಬಿಲಿಟಿ ಕಾರ್ಡ್​ನಿಂದ ಟಿಕೆಟ್ ದರ ಕಡಿತ ಮಾಡಲು ಬೇಕಾಗುವ ಇಟಿಎಂ ಯಂತ್ರ ಖರೀದಿಸುವ ಪ್ರಕ್ರಿಯೆ ಈವರೆಗೆ ಚಾಲನೆ ದೊರೆತಿಲ್ಲ. ಒಟ್ಟು 6 ಸಾವಿರ ಇಟಿಎಂ ಯಂತ್ರಗಳನ್ನು ಖರೀದಿಸಬೇಕಿದೆ.
ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿ ಕುರಿತಂತೆ ಬಿಎಂಆರ್​ಸಿಎಲ್ ಮತ್ತು ಬಿಎಂಟಿಸಿ ಅಧಿಕಾರಿಗಳು ಹಲವು ಬಾರಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತಿರ್ವನವಾದಂತೆ ಕಾರ್ಡ್​ಗಳ ವಿತರಣೆ ಮತ್ತು ನಿರ್ವಹಣೆಯ ಹೊಣೆ ಬಿಎಂಆರ್​ಸಿಎಲ್​ನದ್ದಾಗಿದೆ.
ಕರೊನಾ ಕಪಿಮುಷ್ಟಿ ಚುನಾವಣಾ ದೃಷ್ಟಿ: ಬಿಬಿಎಂಪಿ ಬಜೆಟ್​ನಲ್ಲಿ ಮಹಾನಗರ ಜನತೆಗೆ ಸಿಕ್ಕ ಬಂಪರ್​ ಕೊಡುಗೆಗಳೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
