ಹಾಸನ/ಬೆಂಗಳೂರು:ಇಡೀ ದೇಶದಲ್ಲೇ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಹಾಸನ ಹಾಲಿ ಸಂಸದ ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್​ಐಟಿ) ತನಿಖೆಯನ್ನು ಚುರುಕುಗೊಳಿಸಿದ್ದು, ಸಾಕ್ಷ್ಯಾ ಸಂಗ್ರಹದಲ್ಲಿ ತೊಡಗಿಕೊಂಡಿದೆ.
ಸದ್ಯ ಮಾಹಿತಿಯ ಪ್ರಕಾರ ಪ್ರಜ್ವಲ್​ ರೇವಣ್ಣ ಬಳಸುತ್ತಿದ್ದ ಹಾಸಿಗೆ, ದಿಂಬು, ಹೊದಿಕೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಪ್ರಜ್ವಲ್​ ಮಲಗುತ್ತಿದ್ದ ಕೋಣೆಯಿಂದ ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಎಲ್ಲವನ್ನು ಬೆಂಗಳೂರಿಗೆ ಕೊಂಡೊಯ್ದಿದೆ. ಹಾಸನದ ಆರ್​.ಸಿ. ರಸ್ತೆಯಲ್ಲಿರುವ ಪ್ರಜ್ವಲ್​ ನಿವಾಸದಲ್ಲಿ ಮಂಗಳವಾರ (ಮೇ 28) ಮಧ್ಯಾಹ್ನ ಎಸ್​ಐಟಿ ಹಾಗೂ ಎಫ್​ಎಸ್​ಎಲ್​ ತಂಡ ಪರಿಶೀಲನೆ ಆರಂಭಿಸಿ, ಬುಧವಾರ ಮುಂಜಾನೆ 4 ಗಂಟೆಯವರೆಗೂ ತನಿಖೆ ನಡೆಸಿದ ಬಳಿಕ ಪ್ರಜ್ವಲ್​ ಮಲಗುವ ಕೋಣೆಯಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಮೇ 31ಕ್ಕೆ ಎಸ್​ಐಟಿ ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್​ ರೇವಣ್ಣ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಎಸ್​ಐಟಿ ಸಾಕ್ಷ್ಯಾ ಸಂಗ್ರಹದಲ್ಲಿ ತೊಡಗಿದ್ದು, ಪ್ರಜ್ವಲ್​ ಬಳಸುತ್ತಿದ್ದ ವಸ್ತುಗಳನ್ನು ಕಲೆಹಾಕುತ್ತಿದೆ.
ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದೇನು?ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆ ಪ್ರಜ್ವಲ್​ ರೇವಣ್ಣ ವಿದೇಶಕ್ಕೆ ಹಾರಿದ್ದರು. ಅಂದು ರಾಜ್ಯ ಬಿಟ್ಟು ಹೋದ ಪ್ರಜ್ವಲ್​, ಇಷ್ಟು ದಿನಗಳು ಕಳೆದರೂ ಸಹ ಬೆಂಗಳೂರಿಗೆ ಮರಳಿ ಬಂದಿಲ್ಲ. ಸರಣಿ ಆರೋಪಗಳು ವ್ಯಕ್ತವಾದರು, ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಮನವಿಗೂ ಸ್ಪಂದಿಸದ ಪ್ರಜ್ವಲ್, ರಾಜ್ಯಕ್ಕೆ ಹಿಂತಿರುಗಲೇ ಇಲ್ಲ. ಆದ್ರೆ, ಇತ್ತೀಚೆಗಷ್ಟೇ ವಿದೇಶದಿಂದಲೇ ವಿಡಿಯೋ ಸಂದೇಶ ಕಳುಹಿಸಿರುವ ಸಂಸದ, ರಾಜ್ಯದ ಜನತೆಗೆ ಕ್ಷಮೆಯಾಚಿಸಿದ್ದಾರೆ.​ ವಿದೇಶದಿಂದ ವಿಡಿಯೋ ರಿಲೀಸ್ ಮಾಡಿದ ಪ್ರಜ್ವಲ್​ ರೇವಣ್ಣ, ರಾಜ್ಯದ ಜನತೆ, ನನ್ನ ತಾತ ಎಚ್​.ಡಿ. ದೇವೇಗೌಡರು, ತಂದೆ ಮತ್ತು ತಾಯಿಗೆ ಕ್ಷಮೆಯಾಚಿಸಲು ಬಯಸುತ್ತೇನೆ. ಇದೇ ಮೇ.31ರಂದು ರಾಜ್ಯಕ್ಕೆ ಬರುತ್ತೇನೆ, ಎಸ್​ಐಟಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗುತ್ತೇನೆ. ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ಇದು ಪ್ರೀ-ಪ್ಲ್ಯಾನ್ ಆಗಿತ್ತು” ಎಂದಿದ್ದಾರೆ.
ಮದ್ವೆಯಾಗಿ 2 ವಾರ ಕಳೆದ್ರೂ ಮುಖ ತೋರಿಸದ ಪತ್ನಿ! ಕೊನೆಗೆ ನಿಜ ಸಂಗತಿ ತಿಳಿದು ಮೂರ್ಛೆ ಹೋದ ಯುವಕ

17 ವರ್ಷದ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು: ವಿಶೇಷ ದಾಖಲೆಗೆ ಸಾಕ್ಷಿಯಾಯ್ತು ಈ ಸೀಸನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
