ಬೆಂಗಳೂರು:ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯನ್ನು ಅಪಹರಿಸಿದ್ದ ಪ್ರಕರಣದಡಿ ಮಾಜಿ ಶಾಸಕ ಎಚ್​.ಡಿ. ರೇವಣ್ಣರನ್ನು ಬಂಧಿಸಿದ್ದ ಎಸ್​ಐಟಿ ಅಧಿಕಾರಿಗಳು, ನಿನ್ನೆಯಷ್ಟೇ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ, ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸದ್ಯ ರೇವಣ್ಣರನ್ನು ನಾಲ್ಕು ದಿನಗಳ ಕಾಲ ಎಸ್​ಐಟಿ ವಶದಲ್ಲಿರುವಂತೆ ಆದೇಶಿಸಿದ್ದಾರೆ. ಇನ್ನೂ ಈ ಬೆನ್ನಲ್ಲೇ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಆಗಮನಕ್ಕಾಗಿ ಏರ್​​ಪೋರ್ಟ್​ಗಳಲ್ಲಿ ಎಸ್​ಐಟಿ ತಂಡ ಕಾಯುತ್ತಿರುವುದು ವರದಿಯಾಗಿದೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ರೆ, ಸುಮ್ಮನೆ ಇರ್ತಿದ್ರಾ..? ಟ್ವೀಟ್​​ ಮಾಡಿ ಆಕ್ರೋಶ ಹೊರ ಹಾಕಿದ ನಟಿ
ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ನಿನ್ನೆ (ಮೇ.05) ಸಂಜೆಯೇ ಬೆಂಗಳೂರಿಗೆ ಬರಬೇಕಿತ್ತು. ಆದರೆ, ಬಂಧನದ ಭೀತಿ ಎದುರಾಗುತ್ತಿದ್ದಂತೆ ತನ್ನ ವಾಸ್ತವ್ಯವನ್ನು ಬದಲಾಯಿಸುತ್ತಿರುವ ಹಿನ್ನೆಲೆ ಇದೀಗ ಬ್ಲೂಕಾರ್ನರ್​ ನೋಟಿಸ್​ ಸಹ ಹೊರಡಿಸಿದ್ದು, ಇದನ್ನು ತಪ್ಪಿಸದಂತೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.
ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಾದ ಇಂಟರ್‌ಪೋಲ್‌, ಪ್ರಜ್ವಲ್‌ ರೇವಣ್ಣ ವಿರುದ್ಧದ ಬ್ಲೂಕಾರ್ನರ್‌ ನೋಟಿಸ್‌ ಅನ್ನು ತನ್ನ ಸಹಭಾಗಿತ್ವ ದೇಶಗಳ ತನಿಖಾ ಸಂಸ್ಥೆಗಳಿಗೆ ಕಳುಹಿಸಿದೆ.
ಇದನ್ನೂ ಓದಿ:ಮದುವೆ ಮನೆಯಲ್ಲಿ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಪ್ರಜ್ವಲ್‌ ಸದ್ಯ ದುಬೈನಲ್ಲಿದ್ದಾರೆ ಎಂದು ಇಂಟರ್‌ಪೋಲ್‌ ಅಧಿಕಾರಿಗಳು ಎಸ್‌ಐಟಿ ದಳಕ್ಕೆ ಮಾಹಿತಿ ನೀಡಿದ್ದು, ಇದರ ಆಧಾರದ ಮೇರೆಗೆ ಎಸ್​ಐಟಿ ತಂಡ ಏರ್​​ಪೋರ್ಟ್​ಗಳಲ್ಲಿ ಠಿಕಾಣಿ ಹೂಡಿದೆ. ಕೇವಲ ಪ್ರಜ್ವಲ್ ಆಗಮನಕ್ಕಾಗಿ ಸಮಯ ಎಣಿಸುತ್ತಿರುವ ಎಸ್​ಐಟಿ, ಅವರು ಬಂದ ಕೂಡಲೇ ಅರೆಸ್ಟ್​ ಮಾಡಲು ಸಜ್ಜಾಗಿದೆ.
ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

ವಿಚಾರಣೆ ವೇಳೆಯೂ 3 ನಿಂಬೆಹಣ್ಣು ಕೈಬಿಡದ ರೇವಣ್ಣ! ತಪ್ಪದ ಸಂಕಷ್ಟಕ್ಕೆ ಇದು ಪರಿಹಾರವೇ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − seven =
Remember me
