ಬಾಗಲಕೋಟೆ:ಕರ್ನಾಟಕದ ರಾಜ್ಯದಲ್ಲಿರುವ ಅನೇಕ ಜಿಲ್ಲೆಗಳಿಗೂ ಶ್ರೀರಾಮನಿಗೂ ಅಗಾಧ ನಂಟಿರುವ ಸುದ್ದಿ ಮೊದಲಿನಿಂದಲೂ ಕೇಳುತ್ತಿದ್ದೇವೆ. ಇದೀಗ ರಾಮಮಂದಿರ ಉದ್ಘಾಟನೆಗೂ ಮುನ್ನವೇ ಈ ಸುದ್ದಿಗಳು ಮತ್ತೆ ಸದ್ದು ಮಾಡುತ್ತಿವೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ದೇಶಾದ್ಯಂತ ಲಕ್ಷಾಂತರ ಜನರು ಅಯೋಧ್ಯೆಗೆ ತಲುಪಲು ಕಾತುರರಾಗಿದ್ದಾರೆ.

ಏತನ್ಮಧ್ಯೆ ಬಾಗಲಕೋಟೆಗೂ ರಾಮಾಯಣಕ್ಕೂ ನಂಟಿರುವ ವಿಶೇಷ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಹೌದು, ಬಾಗಲಕೋಟೆ ಜಿಲ್ಲೆಯಲ್ಲಿ ಬಿಲ್ ಕೆರೂರ ಎಂಬ ಊರಿದೆ. ರಾಮ ಬಿಟ್ಟ ಬಿಲ್ಲಿನ ಬಾಣದಿಂದಲೇ ಊರಿಗೆ ಬಿಲ್ ಕೆರೂರ ಅಂತ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಇವತ್ತಿಗೂ ಅಲ್ಲಿ ರಾಮತೀರ್ಥ ಹೊಂಡ ಕಾಣಿಸುವುದನ್ನೂ ನಾವು ನೋಡಬಹುದು.

‘ಬಿಲ್ ಕೆರೆ’ ಬಿಲ್ ಕೆರೂರ ಆಯ್ತುಶ್ರೀರಾಮ ಪತ್ನಿ ಸೀತೆ ಹಾಗೂ ಸಹೋದರ ಲಕ್ಷ್ಮಣ ಜೊತೆ ವನವಾಸಕ್ಕೆ ಬಂದಿದ್ದಾಗ ಅರಣ್ಯದಲ್ಲಿ ಸಂಚರಿಸುವಾಗ ಸೀತಾಮಾತೆಗೆ ಬಾಯಾರಿಕೆ ಆಗಿತ್ತಂತೆ. ಆಗ ಸುತ್ತಮುತ್ತ ನೀರು ಕಾಣಿಸದೇ ಇದ್ದಾಗ ಈ ಜಾಗದಲ್ಲಿ ಶ್ರೀರಾಮ ತನ್ನ ಬಿಲ್ಲಿನಿಂದ ಬಾಣವನ್ನ ಭೂಮಿಗೆ ಬಿಟ್ಟಾಗ ಅಲ್ಲಿ ಗಂಗಾಮಾತೆ ಚಿಮ್ಮಿದಳಂತೆ. ಗಂಗಾಮಾತೆ ಉಕ್ಕಿ ಅಲ್ಲಿ ಕೆರೆ ಆಯಿತಂತೆ ಹೀಗಾಗಿ ಈ ಪ್ರದೇಶವನ್ನ ಬಿಲ್ ಕೆರೆ ಎಂದು ಕರೆಯಲಾಗುತ್ತಿತ್ತು. ಕಾಲಾಂತರ ಜನರ ಬಾಯಲ್ಲಿ ಬಿಲ್ ಕೆರೆ ಬರುಬರುತ್ತ ಬಿಲ್ ಕೆರೂರ ಎಂದು ಕರೆಯಲ್ಪಟ್ಟಿತು ಎನ್ನುವುದು ಸ್ಥಳೀಯರ ಅಭಿಪ್ರಾಯ.

ಈ ಹೊಂಡಲ್ಲ ಬತ್ತಲ್ಲಇಂದಿಗೂ ಸಹ ಗ್ರಾಮದ ಹೊರವಲಯದಲ್ಲಿ ಹಳ್ಳದ ಪಕ್ಕ ಆ ರಾಮತೀರ್ಥ ಹೊಂಡ ಇದೆ. ಎಂದೂ ಸಹ ಈ ಹೊಂಡಲ್ಲ ಬತ್ತಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಇನ್ನು ಹೊಂಡದ ಪಕ್ಕದಲ್ಲಿ ಒಂದು ಪ್ರಾಚೀನ ಗುಡಿಯೂ ಇದೆ. ಅದಕ್ಕೆ ರಾಮಲಿಂಗೇಶ್ವರ ದೇವಸ್ಥಾನ ಎಂದು ಕರೆಯುತ್ತಾರೆ. ಇಲ್ಲಿಯೇ ಶ್ರೀರಾಮ, ಸೀತೆ ಕೆಲ ಕಾಲ ಇದ್ದರು ಎನ್ನುವ ಐತಿಹ್ಯ ಇದೆ. ರಾಮಲಿಂಗೇಶ್ವರ ಎಂದು ಕರೆಯುವ ಪುರಾತನ ದೇವಾಲಯದಲ್ಲಿ ಹನಮಂತ ಹಾಗೂ ಲಿಂಗುವಿನ ಮೂರ್ತಿಗಳು ಇವೆ. ಇನ್ನು ದೇವಾಲಯದ ಎದುರಿಗೆ ಎರಡು ಕಟ್ಟೆಗಳು ಇದ್ದು, ಅವುಗಳಿಗೆ ಲವ-ಕುಶ ಕಟ್ಟೆಗಳು ಎಂದು ಕರೆಯುತ್ತಾರೆ.

ಮಕ್ಕಳ ಪಾದಗಳ ಗುರುತುಈ ಕಟ್ಟೆಗಳ ಮೇಲೆ ಲವ-ಕುಶ ಆಟ ಆಡ್ತಿದ್ರು ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಮುಂದೆ ಸೀತಾಮಾತೆಯನ್ನು ಕಾಡಿಗೆ ಕಳಿಸಿದಾಗ ಬಿಲ್ ಕೆರೆ ಯಿಂದ ಸ್ವಲ್ಪ ದೂರದಲ್ಲೆ ಇರುವ ಸೀತಿಮನೆ ಗುಡ್ಡದಲ್ಲಿ ಮಹರ್ಷಿ ವಾಲ್ಮೀಕಿ ಆಸರೆ ನೀಡಿದ್ದ. ಅಲ್ಲಿಯೇ ಸೀತಾ ಮಾತೆ ಲವ-ಕುಶರಿಗೆ ಜನ್ಮ ನೀಡಿದ್ದು ಎನ್ನಲಾಗ್ತಿದೆ. ಈಗಲೂ ಅಲ್ಲಿ ಸೀತಾಮಾತೆ ಪ್ರಸೂತಿ ಗೃಹ, ಲವಕುಶ ಹೊಂಡ, ಸೀತಾದೇವಿ ಗುಡಿ ಇದೆ. ಸೀತಿಮನೆ ಗುಡ್ಡಕ್ಕೆ ಹೊಂದಿಕೊಂಡಿರುವ ಬಿಲ್ ಕೆರೂರ ಇದೆ. ಲವಕುಶರು ಅರಣ್ಯ ಪ್ರದೇಶದಲ್ಲಿ ಆಟ ಆಡ್ತಾ ಇರುವ ಪ್ರದೇಶದಲ್ಲಿ ಈ ಎರಡು ಕಟ್ಟೆಗಳು ಇದ್ದವು ಎನ್ನಲಾಗ್ತಿದೆ. ಈ ಕಟ್ಟೆಗಳ ಮೇಲೆ ಮಕ್ಕಳ ಪಾದಗಳ ಗುರುತು ಇರುವ ಕಲ್ಲುಗಳು ಇವೆ.


ಕರಿಕಲ್ಲಿನ ಗುಂಡುಅವುಗಳ ಪಕ್ಕದಲ್ಲಿ ಕಲ್ಲಿನ ಗುಂಡು ಇದ್ದು, ಜನರು ಈಗಲೂ ಆ ಕರಿಕಲ್ಲಿನ ಗುಂಡು ಎತ್ತುವ ಸಂಪ್ರದಾಯ ಇದೆ. ಗುಂಡು ಸರಳವಾಗಿ ಎತ್ತಿದರೆ ತಮ್ಮ ಬೇಡಿಕೆ ಈಡೇರುತ್ತವೆ ಎಂದು, ಕಲ್ಲು ಭಾರವಾಗಿ ಬಂದರೆ ಕೆಲಸ ಆಗಲ್ಲ ಎನ್ನುವ ನಂಬಿಕೆಯಲ್ಲಿ ಇದ್ದಾರೆ. ಒಟ್ಟಾರೆ, ಬಿಲ್ ಕೆರೂರಗೂ ರಾಮ-ಸೀತೆ, ಲವಕುಶರಿಗೂ ಸಂಬಂಧದ ಕುರುಹುಗಳು ಇವು ಎಂದು ಇಲ್ಲಿನ ಜನರು ನಂಬಿಕೊಂಡು ಬಂದಿದ್ದಾರೆ.
ಅಯೋಧ್ಯೆಗೂ ಬಾಗಲಕೋಟೆಗೂ ಇದೆ ಲಿಂಕ್​! ಸೀತೆಮನೆ ಗ್ರಾಮದಲ್ಲಿ ಇಂದಿಗೂ ಸೀತೆಯ ನೆನಪುಗಳು ಜೀವಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 2 =
Remember me
