ಬೆಂಗಳೂರುಸಮಾಜ ಹಾಗೂ ರಾಜಕೀಯ ಕ್ಷೇತ್ರವನ್ನು ನೋಡುವ ದೃಷ್ಟಿಕೋನ ವಿಭಿನ್ನವಾಗಿದ್ದರೂ ಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಮ್ ಹಾಗೂ ನನ್ನ ಯೋಚನಾ ಲಹರಿ ಒಂದೇಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಭಾನುವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಗಂಣದಲ್ಲಿ ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಟಿ.ಎನ್. ಸೀತಾರಾಮ್ ಅವರ ‘ನೆನಪುಗಳ ಪುಟಗಳು’ ಎಂಬ ಆತ್ಮಕಥನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸೀತಾರಾಮ್ ಅವರೊಂದಿಗೆ ನನಗೆ 40 ವರ್ಷಗಳ ಒಡನಾಟವಿದೆ. ಲಂಕೇಶ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿನಗಳಿನಿಂದಲೂ ಅವರು ಉತ್ತಮ ಸ್ನೇಹಿತರಾಗಿದ್ದಾರೆ. ಕ್ರಿಯಾಶೀಲ ಮತ್ತು ಬಹುಮುಖ ಪ್ರತಿಭೆಯಾಗಿದ್ದು, ಕಾಲೇಜು ಹಾಗೂ ಹಾಸ್ಟೆಲ್ ಜೀವನ, ರಾಜಕೀಯ, ಕಲಾಸೇವೆ ಮತ್ತು ವಕೀಲಿಕೆ ಹೀಗೆ ಬದುಕಿನ ಹಲವು ಸ್ತರಗಳ ಅನುಭವ ಹೊಂದಿದ್ದಾರೆ. ಅವರ ನೆನಪಿನ ಪುಟಗಳ ಪುಸ್ತಕದಲ್ಲಿ ಸತ್ಯ ಸಂಗತಿಗಳನ್ನು ಬರೆದಿದ್ದಾರೆ ಎಂದರು.
ಹೆಗಡೆಗೆ ಆಪ್ತರಾಗಿದ್ದ ಸೀತಾರಾಮ್:
1984ರ ಲೋಕಸಭೆ ಚುನಾವಣೆಯಲ್ಲಿ ನಾನು, ಸೀತಾರಾಮ್ ಸೋತಿದ್ದೇವು. 1985ರಲ್ಲಿ ರಾಮಕೃಷ್ಣ ಹೆಗಡೆ ಅವರು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಿದ್ದರು. ಆ ಚುನಾವಣೆಯಲ್ಲಿ ಮುಖ್ಯಮಂತ್ರಿ ಚಂದ್ರುಗೆ ಬದಲಾಗಿ ಸಿತಾರಾಮ್ ಅವರಿಗೆ ಟಿಕೆಟ್ ನೀಡಿದ್ದರೆ, ಹೆಗಡೆ ಜಯಪ್ರಿಯತೆಯಲ್ಲಿ ಆಪ್ತರಾಗಿದ್ದ ಸೀತಾರಾಮ್ ಕೂಡ ಜಯಶೀಲರಾಗುತ್ತಿದ್ದರು. ಇಂದು ರಾಜಕೀಯದಲ್ಲಿ ಸಕ್ರಿಯರಾಗಿದ್ದರೆ, ಏನೇನಾಗುತ್ತಿದ್ದರೋ ಎಂದು ಹೇಳಲು ಸಾಧ್ಯವಿಲ್ಲ ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.
ಈ ಪುಸ್ತಕವು ನನ್ನನ್ನು ಸಾಕಷ್ಟು ಭಾವುಕ ಮಾಡಿದೆ. ಆತ್ಮಕಥನ ಬರೆಯುವಾಗ ಸುಳ್ಳು ಮತ್ತು ಸತ್ಯಗಳ ನಡವೆ ಒಂದು ಸಂಘರ್ಷ ನಡೆಯುತ್ತದೆ. ಹೀಗಾಗಿ, ನನ್ನ ಬದುಕಿನ ಎಲ್ಲ ಸತ್ಯ ಘಟನೆಗಳನ್ನು ಹೇಳಲು ಹೋಗಿಲ್ಲ. ಆದರೆ, ಹೇಳಿರುವ ಸಂಗತಿಯಲ್ಲವೂ ಸತ್ಯವೇ ಆಗಿದೆ. ಬದುಕಿನ ನೆನಪುಗಳನ್ನು ಸ್ಪಷ್ಟವಾಗಿ ನೋಡಲು ಈ ಪುಸ್ತಕ ಬರೆದಿದ್ದೇನೆ.– ಟಿ.ಎನ್. ಸೀತಾರಾಮ್, ಲೇಖಕ
1985ರಲ್ಲಿ ಜನತಾದಳದಿಂದ ಆಯ್ಕೆಯಾಗಿ ಪಶುಸಂಗೋಪನೆ ಸಚಿವನಾಗಿದ್ದೆ. ಕಾರಣಾತರಗಳಿಂದ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ತನ್ನ ಬಳಿಯಿದ್ದ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನೆನಪುಗಳನ್ನು ಸಿದ್ದರಾಮಯ್ಯ ಅವರು ಸ್ಮರಿಸಿಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 1 =
Remember me
