ಬೆಂಗಳೂರು:ಹಣ ಕಟ್ಟಿಸಿಕೊಂಡು 5-10 ವರ್ಷ ಕಳೆದರೂ ಸದಸ್ಯರಿಗೆ ನಿವೇಶನ ಕೊಡದೆ ಸತಾಯಿಸುತ್ತಿರುವ ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ದೂರು ಕೊಟ್ಟಲ್ಲಿ ನ್ಯಾಯ ಕೊಡಿಸುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭರವಸೆ ನೀಡಿದ್ದಾರೆ. ಆ ಮೂಲಕ ವಿಜಯವಾಣಿ ವಿಶೇಷ ವರದಿಯ ಸರಣಿ ಅಭಿಯಾನಕ್ಕೆ ದೊಡ್ಡ ಯಶಸ್ಸು ದೊರೆತಂತಾಗಿದೆ.
ವಿವಿಧ ಗೃಹನಿರ್ವಣ ಸೊಸೈಟಿಗಳಿಂದ ಅನ್ಯಾಯಕ್ಕೆ ಒಳಗಾದ ಸದಸ್ಯರು ವಿಜಯವಾಣಿ ಕಚೇರಿಗೆ ಪ್ರತಿನಿತ್ಯ ಕರೆ ಮಾಡಿ ಅಲವತ್ತು ಕೊಳ್ಳುತ್ತಿರುವ ನಡುವೆಯೇ ಸಚಿವರಿಂದಲೇ ನ್ಯಾಯ ದೊರಕಿಸಿಕೊಡುವ ಭರವಸೆ ಸಿಕ್ಕಿರುವುದು ಸಂತ್ರಸ್ತರ ಬಾಳಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಜ.17ರಂದು ‘ಸೊಸೈಟಿ ಸೈಟ್ ಧೋಖಾ!’ ಶೀರ್ಷಿಕೆಯಡಿ ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಅದಾದ ನಂತರ ಜ. 24ರವರೆಗೂ ಸರಣಿ ವರದಿ ಮುಂದುವರಿಸಲಾಗಿತ್ತು. ಹಣ ಕಟ್ಟಿಸಿಕೊಂಡು 10 ವರ್ಷ ಕಳೆದರೂ ನಿವೇಶನ ನೀಡದ 127 ಗೃಹ ನಿರ್ಮಾಣ ಸಹಕಾರ ಸಂಘಗಳ ಪಟ್ಟಿ ಪ್ರಕಟಿಸುವ ಮೂಲಕ ಸರ್ಕಾರ ಹಾಗೂ ಸಾರ್ವಜನಿಕರ ಗಮನ ಸಳೆಯಲಾಯಿತು.
ಸೈಟ್ ಧೋಖಾ ಕುರಿತಂತೆ ವಿಜಯವಾಣಿ ಜತೆ ಮಾತನಾಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸೈಟ್ ವಂಚನೆ ಬಯಲಿಗೆಳೆಯುವ ಮೂಲಕ ವಿಜಯವಾಣಿ ಉತ್ತಮ ಕೆಲಸ ಮಾಡಿದೆ. ಈ ವಿಚಾರವಾಗಿ ಸಹಕಾರ ಇಲಾಖೆ ಕೂಡ ಮೊದಲಿನಿಂದಲೂ ಕಾನೂನು ಮಿತಿಯಲ್ಲಿ ಕೆಲಸ ಮಾಡುತ್ತಿದೆ. ಜನರು ಸಮಸ್ಯೆ ಅಥವಾ ಅನ್ಯಾಯಕ್ಕೆ ಒಳಗಾಗಿದ್ದಲ್ಲಿ ನೇರವಾಗಿ ಇಲಾಖೆಗೆ ಬಂದು ದೂರು ಸಲ್ಲಿಸಲಿ. ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕ ಸಿಬ್ಬಂದಿ
ನೇಮಕ ಮಾಡಲಾಗಿದೆ. ಅನ್ಯಾಯಕ್ಕೆ ಒಳಗಾದವರು ದೂರು ನೀಡದ ಹೊರತು ನಮ್ಮ ಗಮನಕ್ಕೆ ಬರುವುದಿಲ್ಲ. ದೂರು ನೀಡಿದ ನಂತರ ಕಾಲಮಿತಿಯಲ್ಲಿ ಇತ್ಯರ್ಥ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ವ್ಯಾಜ್ಯಗಳಿದ್ದ ವೇಳೆ ದೂರು ಇತ್ಯರ್ಥಕ್ಕೆ ವಿಳಂಬವಾಗುತ್ತದೆ. ಇಲ್ಲವಾದರೆ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥ ಮಾಡಲಾಗುತ್ತದೆ. ನಿವೇಶನ ಹಂಚಿಕೆಯಲ್ಲಿ ಅಕ್ರಮ-ಅನ್ಯಾಯವಾಗಿದ್ದರೆ ಖಂಡಿತವಾಗಿಯೂ ನ್ಯಾಯ ದೊರಕಿಸಿಕೊಡುವುದಾಗಿ ಸೋಮಶೇಖರ್ ಭರವಸೆ ನೀಡಿದ್ದಾರೆ. ಗೃಹ ನಿರ್ಮಾಣ ಸಹಕಾರ ಸಂಘಗಳು ನಿವೇಶನ ಕ್ಕಾಗಿ ಠೇವಣಿಯನ್ನು ಸುಮಾರು 5ರಿಂದ 10 ವರ್ಷಗಳ ಹಿಂದೆಯೇ ಪಡೆದು ಈವರೆಗೆ ನಿವೇಶನ ನೀಡದ ಪ್ರಕರಣಗಳು ಗಮನಕ್ಕೆ ಬಂದಿವೆ. ನಿವೇಶನ ಹಂಚಿಕೆ, ನೋಂದಣಿ ಬಗ್ಗೆ ದೂರುಗಳಿದ್ದಲ್ಲಿ ಬಾಧಿತರಾದ ಸದಸ್ಯರು ಕರ್ನಾಟಕ ಸಹಕಾರ ಸಂಘ ಕಾಯ್ದೆ 1959ರ ಕಲಂ 70ರಡಿ ಸಂಘದ ಕಾರ್ಯವ್ಯಾಪ್ತಿಗನುಗುಣವಾಗಿ ಇಲಾಖೆಯ ಸಕ್ಷಮ ನಿಬಂಧಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಸದಸ್ಯರಿಗೆ ಸೂಚಿಸಿದೆ.
ಸಂಘಗಳ ಕಾರ್ಯಚಟುವಟಿಕೆಗಳ ಅವ್ಯವಹಾರಗಳು, ನಿವೇಶನ ಹಂಚಿಕೆ, ನೋಂದಣಿ ಸಂಬಂಧ ಅಹವಾಲು, ತಕರಾರು ಅಥವಾ ಆಕ್ಷೇಪಣೆಗಳಿದ್ದಲ್ಲಿ ಬಾಧಿತರು ಕಾರ್ಯವ್ಯಾಪ್ತಿ ಅನುಸಾರ ಸಂಬಂಧಿಸಿದ ಸಕ್ಷಮ ಪ್ರಾಧಿಕಾರ ಗಳಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅಥವಾ ಸಹಕಾರ ಸಂಘಗಳ ಉಪ ನಿಬಂಧಕರು, ಜಂಟಿ ನಿಬಂಧಕರ ಕಚೇರಿಗೆ ದೂರು ದಾಖಲಿಸಬಹುದು ಎಂದು ಸಹಕಾರ ಇಲಾಖೆ ಸಲಹೆ ನೀಡಿದೆ.
ಅಧಿಕಾರಿಗಳ ಸಭೆ
ವಿಜಯವಾಣಿ ಸರಣಿ ವರದಿಗಳ ಬಳಿಕ ಸಚಿವ ಎಸ್.ಟಿ. ಸೋಮ ಶೇಖರ್, ಸೋಮವಾರ (ಜ.24) ತಮ್ಮ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸೈಟ್ ಹಂಚಿಕೆ ಯಲ್ಲಿ ಜನರಿಗೆ ತೊಂದರೆಯಾಗದಂತೆ ಕೂಡಲೇ ಕ್ರಮ ವಹಿಸಿ ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ, ವಹಿಸಿದ ಕ್ರಮದ ಬಗ್ಗೆ ಶೀಘ್ರದಲ್ಲೇ ವರದಿ ನೀಡು ವಂತೆಯೂ ನಿರ್ದೇಶಿಸಿದ್ದಾರೆ. ಇದರಿಂ ದಾಗಿ ಅನ್ಯಾಯಕ್ಕೆ ಒಳಗಾಗಿರುವ ಸದಸ್ಯರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ದೊರೆತಿದೆ.
ಕ್ರಿಮಿನಲ್ ಕೇಸ್
ಸಹಕಾರಿ ನಿಯಮಗಳ ಪ್ರಕಾರ ಸೈಟ್ ನೀಡಲು ಸಾಧ್ಯವಾಗದಿದ್ದರೆ ಬಡ್ಡಿ ಸಹಿತ ಠೇವಣಿ ದೊರಕಿಸಿ ಕೊಡಲು ಅವಕಾಶ ಇದೆ. ಈಗಾಗಲೇ ಈ ರೀತಿ ಸಾಕಷ್ಟು ವರ್ಷಗಳಿಂದ ಸದಸ್ಯರಿಗೆ ಸೈಟ್ ನೀಡದ ಸೊಸೈಟಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದೇವೆ. ಮತ್ತೊಂದು ಸೊಸೈಟಿಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಸೊಸೈಟಿಗಳು ಅನ್ಯಾಯ ಎಸಗುವಾಗ ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × two =
Remember me
