ಬೆಂಗಳೂರು:ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಸೈನಿಕರಿಗೆ ಅರ್ಪಿಸಿರುವ ವರ್ಲ್ಡ್ ಇಂಟರ್​​ನ್ಯಾಷನಲ್​ ಫ್ಯಾಷನ್​ ಶೋನಲ್ಲಿ ರಾಜಧಾನಿ ಬೆಂಗಳೂರಿನ ಆರು ರೂಪದರ್ಶಿಗಳು ಪ್ರಶಸ್ತಿ ಗಳಿಸಿದ್ದಾರೆ.
ಯಶ್ ಇಂಟರ್​​ನ್ಯಾಷನಲ್​ ಫ್ಯಾಷನ್ ವೀಕ್ ಆಯೋಜಿಸಿದ್ದ ಈ ಫ್ಯಾಷನ್​ ಶೋ ಇತ್ತೀಚೆಗೆ ಗೋವಾದಲ್ಲಿ ನಡೆದಿದ್ದು, ಈ ಬ್ಯೂಟಿ ಪೇಜೆಂಟ್​ನಲ್ಲಿ 72 ರೂಪದರ್ಶಿಯರು ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ್, ಮೇಘಾಲಯ, ಪುಣೆ ಸೇರಿದಂತೆ 10 ರಾಜ್ಯಗಳಿಂದ ರೂಪದರ್ಶಿಗಳು ಭಾಗಿಯಾಗಿದ್ದರು.
ಬೆಂಗಳೂರಿನ ಆಸಿಫ್ ಮಿಸ್ಟರ್ ವಿಭಾಗದಲ್ಲಿ, ಶ್ರಾವ್ಯ ಮಿಸ್ ವಿಭಾಗದಲ್ಲಿ, ಮಿಸೆಸ್​​ನಲ್ಲಿ ರಶ್ಮಿ ಹೆಗಡೆ, ಪುರುಷರ ವಿಭಾಗದಲ್ಲಿ ಜೀಶನ್, ಪ್ರಿನ್ಸ್​​ನಲ್ಲಿ ಮೋಕ್ಷ್, ಪ್ರಿನ್ಸೆಸ್ ವಿಭಾಗದಲ್ಲಿ ಅನನ್ಯಾ ವರ್ಲ್ಡ್​ ಇಂಟರ್ನ್ಯಾಷನಲ್ ಪ್ರಶಸ್ತಿ ಗಳಿಸಿದರು. ಗೆದ್ದ ಎಲ್ಲರಿಗೂ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮವನ್ನು ವಿಶೇಷವಾಗಿ ಸೈನಿಕರು ಹಾಗೂ ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡಲಾಗಿತ್ತು. ಅಲ್ಲದೆ ಪುನೀತ್ ಚಿತ್ರದ ಹಾಡಿಗೆ ನೂರಕ್ಕೂ ಹೆಚ್ಚು ಜನ ಹೆಜ್ಜೆ ಹಾಕಿ, ವೇದಿಕೆಗೆ ಕಳೆ ತಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
