ಬೆಂಗಳೂರು:ಕೌಟುಂಬಿಕ ವ್ಯಾಜ್ಯಗಳಲ್ಲಿ ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 24ರ ಅನುಸಾರ ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ವಿಲೇವಾರಿ ಮಾಡಲು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಗರಿಷ್ಠ ಆರು ತಿಂಗಳ ಕಾಲಮಿತಿ ನಿಗದಿಪಡಿಸಿದೆ. ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಗೆ ಮಾಸಿಕ 15 ಸಾವಿರ ರೂ. ಮಧ್ಯಂತರ ಜೀವನಾಂಶ ಹಾಗೂ ವ್ಯಾಜ್ಯದ ವೆಚ್ಚ 50 ಸಾವಿರ ರೂ. ಪಾವತಿಸುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಪತಿಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪತ್ನಿ, ಮಧ್ಯಂತರ ಜೀವನಾಂಶವನ್ನು ಮಾಸಿಕ 1.5 ಲಕ್ಷ ರೂ. ಹಾಗೂ ವ್ಯಾಜ್ಯದ ವೆಚ್ಚವನ್ನು 2 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡುವಂತೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿಗೆ ಪತಿ 19 ತಿಂಗಳ ಬಳಿಕ ಆಕ್ಷೇಪಣೆ ಸಲ್ಲಿಸಿರುವುದು ಹಾಗೂ ಅದಾದ 11 ತಿಂಗಳ ಬಳಿಕ ಕೌಟುಂಬಿಕ ನ್ಯಾಯಾಲಯ ತೀರ್ವನಿಸಿದ್ದನ್ನು ಗಮನಿಸಿತ್ತು. ಈ ರೀತಿಯ ವಿಳಂಬದಿಂದ ಅರ್ಜಿಗಳ ಉದ್ದೇಶವೇ ನಿರರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟ ಪೀಠ, ಈ ಕುರಿತು ನಿರ್ಧಾರ ಕೈಗೊಳ್ಳಲು ವಿಚಾರಣಾ ನ್ಯಾಯಾಲಯಗಳಿಗೆ ಕಾಲಮಿತಿ ನಿಗದಿಪಡಿಸಿ ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿತು.
ವರ್ಷಾನುಗಟ್ಟಲೆ ಕಾಯುವಂತಾಗಬಾರದು:ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯಗಳು ಸಾಧ್ಯವಾದಷ್ಟೂ 60 ದಿನಗಳ ಒಳಗೆ ವಿಲೇವಾರಿ ಮಾಡಬೇಕು ಎಂಬ ನಿಯಮವಿದೆ. ಆದರೆ, ‘ಸಾಧ್ಯವಾದಷ್ಟೂ’ ಎಂಬ ಶಬ್ದವನ್ನೇ ಆಧಾರವಾಗಿಟ್ಟುಕೊಂಡು ಕೋರ್ಟ್ ಗಳು ಕೆಲ ಪ್ರಕರಣಗಳಲ್ಲಿ ಆರು ತಿಂಗಳಿಂದ ನಾಲ್ಕು ವರ್ಷಗಳ ಬಳಿಕವೂ ಆದೇಶ ನೀಡುತ್ತಿವೆ. ಈ ರೀತಿಯ ವಿಳಂಬದಿಂದ, ಅರ್ಜಿಯ ಉದ್ದೇಶವೇ ಈಡೇರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿವಿಧ ಕಾರಣಗಳಿಂದ ಪತ್ನಿ ತನ್ನ ಪತಿಯ ಮನೆ ತೊರೆಯುವಂತಾಗುತ್ತದೆ. ಅಂತಹ ಸಂದರ್ಭದಲ್ಲಿ ಭೀತಿಗೆ ಒಳಗಾಗುವುದನ್ನು ತಪ್ಪಿಸುವುದು ಮತ್ತು ತೊಂದರೆಗೆ ಸಿಲುಕದಂತೆ ಮಾಡುವುದಕ್ಕಾಗಿ ಕಾಲಮಿತಿಯಲ್ಲಿ ಪರಿಹಾರ ಸಿಗಬೇಕು. ಇದಕ್ಕಾಗಿ ವರ್ಷಗಟ್ಟಲೆ ಕಾಯುವಂತಾಗಬಾರದು ಎಂದು ಹೇಳಿದೆ.
ಜೀವನಾಂಶ ಹೆಚ್ಚಳ:ಪ್ರಕರಣದಲ್ಲಿ ಅರ್ಜಿದಾರ ಮಹಿಳೆಗೆ ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ಮಾಸಿಕ 15 ಸಾವಿರ ರೂ. ಜೀವನಾಂಶ ಹಾಗೂ ವ್ಯಾಜ್ಯದ ವೆಚ್ಚ 50 ರೂ. ಗಳನ್ನು ಹೈಕೋರ್ಟ್ ಕ್ರಮವಾಗಿ 50 ಸಾವಿರ ರೂ. ಹಾಗೂ 1 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಿ ಹೆಚ್ಚಳ ಮಾಡಿ ಆದೇಶಿಸಿತು.
ಕಾಲಮಿತಿ ಹೀಗಿದೆ:ಅರ್ಜಿ ಸಲ್ಲಿಕೆಯಾದ ತಕ್ಷಣ ನೋಟಿಸ್ ಜಾರಿಗೊಳಿಸಬೇಕು. ಇ-ಮೇಲ್, ವಾಟ್ಸ್​ಆಪ್ ಮೂಲಕ ನೀಡುವ ನೋಟಿಸ್​ಗಳೂ ಕಾನೂನು ದೃಷ್ಟಿಯಲ್ಲಿ ಮಾನ್ಯತೆ ಹೊಂದಿವೆ; ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 24ರ ಅನುಸಾರ ಮಧ್ಯಂತರ ಜೀವನಾಂಶ ಕೋರಿ ಪತ್ನಿ ಸಲ್ಲಿಸುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪತಿಗೆ 2 ತಿಂಗಳು ಕಾಲಾವಕಾಶ ನೀಡಬೇಕು; ಅರ್ಜಿ ಸಲ್ಲಿಸುವ ಪತ್ನಿಗೂ ಆಸ್ತಿ ಮತ್ತು ಹೊಣೆಗಾರಿಕೆಗಳ ಕುರಿತು ಮಾಹಿತಿ ನೀಡಲು 2 ತಿಂಗಳ ಕಾಲಾವಕಾಶ ನೀಡಬೇಕು; ಬಳಿಕ ನ್ಯಾಯಾಲಯ ಎಲ್ಲ ಪಕ್ಷಗಾರರ ವಾದ ಆಲಿಸಿ, 4 ತಿಂಗಳ ಒಳಗೆ ಆದೇಶ ಹೊರಡಿಸಬೇಕು; ಅಲ್ಲಿಗೆ, ಮಧ್ಯಂತರ ಪರಿಹಾರ ಕೋರಿ ಅರ್ಜಿ ಸಲ್ಲಿಕೆಯಾದ ದಿನಾಂಕದಿಂದ ಒಟ್ಟಾರೆ 6 ತಿಂಗಳ ಕಾಲಮಿತಿಯೊಳಗೆ ತೀರ್ಮಾನ ಕೈಗೊಳ್ಳಬೇಕು; ಜೀವನಾಂಶ ಅರ್ಜಿ ನಿರ್ಧರಿಸಲು 6 ತಿಂಗಳಿಗೂ ಮೀರಿ ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ಆದೇಶದಲ್ಲಿ ನಮೂದಿಸಬೇಕು.
ತನ್ನ ನೆಚ್ಚಿನ ನಾಯಕ ಸಿಎಂ ಆಗಲೆಂದು 25 ವರ್ಷದಿಂದ ಗಡ್ಡ ಬಿಟ್ಟ ಅಭಿಮಾನಿ!

ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡ ಮಹಿಳೆ; ಏನಿದು ಸ್ಮಾರ್ಟ್​ಫೋನ್​ ವಿಷನ್ ಸಿಂಡ್ರೋಮ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 17 =
Remember me
