ಬೆಂಗಳೂರು:‘ಭವಿಷ್ಯದ ಕರ್ನಾಟಕ ಸಜ್ಜು’ಗೊಳಿಸುವ ಪರಿಕಲ್ಪನೆಯ ಉದಯೋನ್ಮುಖ ತಂತ್ರಜ್ಞಾನ ಆಧಾರಿತ ಕೌಶಲ ಸಲಹಾ ಸಮಿತಿ ರಾಜ್ಯದಲ್ಲಿ ರಚನೆಯಾಗಿದೆ. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಮೂರು ವರ್ಷಗಳ ಕಾಲಾವಕಾಶವನ್ನು ಸಮಿತಿಗೆ ನೀಡಲಾಗಿದ್ದು, ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವರು ಸಮಿತಿಗೆ ಸಹ ಅಧ್ಯಕ್ಷರಾಗಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು, ಐಟಿ-ಬಿಟಿ, ಉದ್ಯಮ-ವಹಿವಾಟು ಕ್ಷೇತ್ರದ ಪ್ರಮುಖರು, ಪರಿಣತರು, ತಂತ್ರಜ್ಞರು, ತಜ್ಞರು ಸೇರಿ 26 ಸದಸ್ಯರ ಬಲವನ್ನು ಸಮಿತಿ ಹೊಂದಿದೆ. ರಾಜ್ಯ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಬ್ಲಾಕ್‌ಚೇನ್, ಕ್ವಾಂಟಮ್ ಕಂಪ್ಯೂಟಿಂಗ್, ಬಿಗ್ ಡಾಟಾ ಅನಾಲಿಟಿಕ್ಸ್, ಮಾಹಿತಿ ತಂತ್ರಜ್ಞಾನ, ರೊಬೊಟಿಕ್ ಪ್ರೊಸೆಸ್, ಸೈಬರ್ ಸೆಕ್ಯೂರಿಟಿ, 3ಡಿ ಪ್ರಿಂಟಿಂಗ್ ಮುಂತಾದ ಹೊಸ ಅಲೆಯ ತಂತ್ರಜ್ಞಾನದತ್ತ ಸಮಿತಿ ಚಿತ್ತ ನೆಡಲಿದೆ.
ಹೊಸ ಅಲೆ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಕ್ಕೂ ಒಗ್ಗುವ ರೀತಿಯಲ್ಲಿ ಕೌಶಲ್ಯಪೂರ್ಣ ಯುವಪೀಳಿಗೆ ಅಣಿಗೊಳಿಸುವುದು, ಉದ್ಯಮ- ಕೌಶಲ ಮಾನವ ಸಂಪನ್ಮೂಲ ನಡುವಿನ ಕೊರತೆ ನಿವಾರಣೆಗೆ ಬೇಕಾದ ನೀತಿ, ಉಪಕ್ರಮಗಳನ್ನು ತಿಳಿಸುವುದು ಈ ಸಮಿತಿ ಜವಾಬ್ದಾರಿಯಾಗಿದೆ.
ಉದಯೋನ್ಮುಖ ತಂತ್ರಜ್ಞಾನದ ಬೆಳವಣಿಗೆ, ಪರಿಣತಿ ಸಾಧಿಸುವ ಬಗೆ, ಉದ್ಯೋಗ ಸೃಷ್ಟಿ, ಲಭ್ಯ ಅವಕಾಶಗಳ ಬಳಕೆ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸಿದ್ಧಗೊಳಿಸುವುದು ಮುಂತಾದ ಆಯಾಮಗಳಲ್ಲಿ ಅಧ್ಯಯನ ನಡೆಸಲಿದೆ.
ಹೊಸ ಅಲೆಯ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಮಗ್ರ ಕಾರ್ಯಚೌಕಟ್ಟು ರೂಪಿಸುವುದು, ನೀತಿಗೆ ಸಲಹೆ, ವಿನ್ಯಾಸ, ಉದ್ಯಮಗಳ ಬೇಡಿಕೆ, ಪೂರೈಕೆ ನಡುವಿನ ಕೊರತೆ ನಿವಾರಣೆ ಮುಂತಾದ ವಿಷಯಗಳ ಬಗ್ಗೆ ಸಮಿತಿ ಕಾಲ ಕಾಲಕ್ಕೆ ಸಭೆ ನಡೆಸಲಿದೆ.
ಪ್ರಾರಂಭಿಕ ಸಭೆಗಳ ನಂತರ ಸರ್ಕಾರಕ್ಕೆ ಮೊದಲ ವರದಿ ಸಲ್ಲಿಸಲು ಸಮಿತಿಗೆ ಮೂರು ತಿಂಗಳ ಗಡುವು ನೀಡಲಾಗಿದೆ. ಕಾರ್ಯಸಾಧು, ತ್ವರಿತ ಅನುಷ್ಠಾನಕ್ಕೆ ಸೂಕ್ತವಾದ ಶಿಾರಸುಗಳನ್ನು ಈ ವರದಿ ಒಳಗೊಂಡಿರಬೇಕು ಎಂದು ತಿಳಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
