| ರುದ್ರಣ್ಣ ಹರ್ತಿಕೋಟೆ ಬೆಂಗಳೂರುಕರೊನಾ ಲಾಕ್​ಡೌನ್ ಬಳಿಕ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ನಿರುದ್ಯೋಗಿ ಯುವ ಸಮುದಾಯಕ್ಕೆ ಉದ್ಯೋಗದ ಅವಕಾಶಗಳನ್ನು ಮುಕ್ತವಾಗಿ ತೆರೆದಿಡುವ ಹಾಗೂ ಸ್ವಉದ್ಯೋಗ ಪ್ರೇರೇಪಿಸುವ ನಿಟ್ಟಿನಲ್ಲಿ ಹೊಸ ವರ್ಷದ ಕೊಡುಗೆಯಾಗಿ ಕೌಶಲಕ್ಕೆ ಹೊಸ ರೂಪ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಆ ಮೂಲಕ ಇಂದಿನ ಅಗತ್ಯಗಳಿಗೆ ತಕ್ಕಂತೆ ಯುವ ಸಮುದಾಯವನ್ನು ಸಜ್ಜು ಗೊಳಿಸುವ ಉದ್ದೇಶ ಹೊಂದಿದೆ. ರಾಜ್ಯದಲ್ಲಿ 2017ರಲ್ಲಿ ಕೌಶಲ ನೀತಿ ತರಲಾಗಿದೆ. ಅದಕ್ಕೆ ಪೂರಕವಾಗಿ ಕೌಶಲಾಭಿವೃದ್ಧಿಗೆ ಹೊಸ ರೂಪ ನೀಡಲು ಅನೇಕ ಯೋಜನೆ ರೂಪಿಸಿಕೊಂಡಿದೆ. ರಾಜ್ಯದಲ್ಲಿ ಸ್ಥಾಪನೆಯಾಗುತ್ತಿರುವ ವಿವಿಧ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ಯುವ ಸಮುದಾಯವನ್ನು ಸಜ್ಜುಗೊಳಿಸಲಾಗುತ್ತದೆ. ಅದರ ಜತೆ ಜತೆಗೆ ಸ್ವ ಉದ್ಯೋಗದ ಕೌಶಲವನ್ನೂ ನೀಡಲಾಗುತ್ತದೆ. ಕೌಶಲ ವೃದ್ಧಿಪಡಿಸಿದರೆ ದೇಶದ ಜತೆಗೆ ವಿದೇಶಗಳಲ್ಲೂ ಉದ್ಯೋಗ ಅವಕಾಶ ವಿಸ್ತರಿಸುತ್ತದೆ.
ಬಸ್​ನಲ್ಲೇ ತರಬೇತಿ:ಮೊದಲ ಹಂತದಲ್ಲಿ ಗ್ರಾಮೀಣ ಭಾಗದ ಯುವಕರು, ಅಂಗವಿಕಲರು ಹಾಗೂ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದ್ಯುತ್ ಉಪಕರಣಗಳ ರಿಪೇರಿ ಹಾಗೂ ಬ್ಯೂಟಿ ಥೆರಪಿಸ್ಟ್ ತರಬೇತಿ ನೀಡಲಾಗುತ್ತದೆ. ಸಬ್ ಮರ್ಸಿಬಲ್ ಪಂಪ್, ಮೋಟಾರ್, ಸಿಸಿಟಿವಿ, ಡಿಟಿಎಚ್, ಗೃಹೋಪಯೋಗಿ ವಸ್ತುಗಳಾದ ಟಿವಿ, ವಾಷಿಂಗ್ ಮಿಷಿನ್, ಮಿಕ್ಸಿ, ಗ್ಯಾಸ್ ರಿಪೇರಿ, ಮಹಿಳೆಯರಿಗೆ ಮೇಕಪ್ ಕುರಿತು ತರಬೇತಿ ನೀಡಲಾಗುತ್ತದೆ. ಪ್ರತಿ ಜಿಲ್ಲೆಗೂ ಒಂದು ಬಸ್ ಇರುತ್ತದೆ. ಅದರಲ್ಲೇ ತರಬೇತಿ ನೀಡಲಾಗುತ್ತದೆ. ಎರಡು ತಿಂಗಳು ಉಚಿತ ತರಬೇತಿ ಮುಗಿದ ಕೂಡಲೇ ಪ್ರತಿ ಶಿಬಿರಾರ್ಥಿಗೆ ಉಚಿತ ಟೂಲ್ ಕಿಟ್ ನೀಡಲಾಗುತ್ತದೆ. ಇವುಗಳ ಸಾಧಕ-ಬಾಧಕ ಗಮನಿಸಿ ಉಳಿದ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತದೆ.
8 ಜಿಲ್ಲೆಗಳ ಆಯ್ಕೆ:ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪ್ರತಿ ವಿಭಾಗದಿಂದ ಎರಡು ಜಿಲ್ಲೆಗಳಂತೆ ಒಟ್ಟು ಎಂಟು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ರಾಮನಗರ, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ಬಾಗಲಕೋಟೆ, ರಾಯಚೂರು ಹಾಗೂ ಯಾದಗಿರಿ ಪ್ರಾಯೋಗಿಕ ಜಾರಿಗೆ ಆಯ್ಕೆಯಾಗಿರುವ ಜಿಲ್ಲೆಗಳಾಗಿವೆ.
ಸ್ಕಿಲ್ ಹಬ್ಉದ್ಯೋಗಿ ಹಾಗೂ ಉದ್ಯಮಿಗೆ ಬೇಕಾದ ಎಲ್ಲ ರೀತಿಯ ಕೌನ್ಸೆಲಿಂಗ್ ಹಾಗೂ ತರಬೇತಿ ನೀಡುವುದು ಕೌಶಲ ಕೇಂದ್ರದ (ಸ್ಕಿಲ್ ಹಬ್)ನ ಒಟ್ಟಾರೆ ಆಶಯ. ಸದ್ಯಕ್ಕೆ ರಾಮನಗರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ. ಯಾವುದೇ ಅಭ್ಯರ್ಥಿ ಇಲ್ಲಿನ ಕಚೇರಿಗೆ ಭೇಟಿ ನೀಡಿದರೆ ಆತನಿಗೆ ಉದ್ಯೋಗ ಬೇಕ? ತರಬೇತಿ ಬೇಕ? ಉದ್ಯಮಿ ಆಗಬೇಕ? ಅವಶ್ಯಕತೆ ಏನಿದೆ ಎಂಬುದನ್ನು ಮೊದಲು ಕೌನ್ಸೆಲಿಂಗ್ ಮಾಡಲಾಗುತ್ತದೆ. ಉದ್ಯೋಗ ಬೇಕು ಎಂಬುದಾದರೆ ಉದ್ಯೋಗ ಕೇಂದ್ರದಲ್ಲಿರುವ ಮಾಹಿತಿ ನೀಡಲಾಗುತ್ತದೆ. ಅಲ್ಲಿ ಬೇರೆ ಬೇರೆ ಕಂಪನಿಗಳ ಉದ್ಯೋಗಗಳ ಬೇಡಿಕೆ ಬಗ್ಗೆ ವಿವರ ಇರುತ್ತದೆ. ಕೌಶಲ ತರಬೇತಿಯ ಅಗತ್ಯವಿದ್ದರೆ ಜಿಲ್ಲೆಯಲ್ಲಿರುವ ತರಬೇತಿ ಕೇಂದ್ರದ ಮಾಹಿತಿ ನೀಡಲಾಗುತ್ತದೆ. ಉದ್ಯಮಿಯಾಗುವವರಿಗೆ ಲೆಕ್ಕಪತ್ರ, ನಿರ್ವಹಣೆ, ಮಾರುಕಟ್ಟೆ ಸೌಲಭ್ಯ, ಸಾಲ ಸಿಗುವ ವಿಧಾನಗಳು ಸೇರಿದಂತೆ ಬೇರೆ ಬೇರೆ ತರಬೇತಿಗಳನ್ನು ನೀಡಲಾಗುತ್ತದೆ.
ಸ್ಕಿಲ್ ಹೆಲ್ಪ್​ಲೈನ್ಕೌಶಲ ತರಬೇತಿ ಹಾಗೂ ಇತರ ಮಾಹಿತಿ ನೀಡುವ ಸಲುವಾಗಿ ಸಂಕಲ್ಪ ಹೆಸರಿನ ಸಹಾಯವಾಣಿ ಆರಂಭಿಸಲಾಗಿದೆ. ಯಾವುದೇ ಜಿಲ್ಲೆಯ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ. ಸಹಾಯವಾಣಿ ಸಂಖ್ಯೆ 080-24482558.
ಸ್ಕಿಲ್ ಕನೆಕ್ಟ್ಇದೊಂದು ಜಾಬ್ ಪೋರ್ಟಲ್. ಉದ್ಯೋಗಿ ಹಾಗೂ ಉದ್ಯಮಿಯನ್ನು ಸೇರಿಸುವಂತಹ ವೇದಿಕೆಯಾಗಿರುತ್ತದೆ. ಇಲ್ಲಿ ಉದ್ಯೋಗಿಗಳು ಹಾಗೂ ಉದ್ಯಮಿಗಳು ನೋಂದಣಿ ಮಾಡಿಕೊಂಡರೆ ಉದ್ಯೋಗದ ಅವಕಾಶಗಳನ್ನು ನೀಡಲಾಗುತ್ತದೆ.
ಬಂದಿದೆ ಬೇಡಿಕೆವಿಮಾನಯಾನ, ಲಾಜಿಸ್ಟಿಕ್, ಟೆಲಿಕಾಂ, ಎಲೆಕ್ಟ್ರಾನಿಕ್ಸ್, ಹೀಗೆ ವಿವಿಧ ಕ್ಷೇತ್ರಗಳಲ್ಲಿ 25 ಸಾವಿರ ಉದ್ಯೋಗಳಿಗೆ ಬೇಡಿಕೆ ವಿವಿಧ ಕಂಪನಿಗಳಿಂದ ಬಂದಿದೆ. ಅವರ ಬೇಡಿಕೆ ಆಧರಿಸಿ ತರಬೇತಿಯನ್ನು ಸರ್ಕಾರ ಪ್ಲಾ್ಯನ್ ಮಾಡುತ್ತಿದೆ.
ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗದ ಅವಕಾಶ ಮುಕ್ತವಾಗಿಸಲು ಕೆಲವು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕೌಶಲ ಅತ್ಯಂತ ಮುಖ್ಯವಾಗಿರುತ್ತದೆ.| ಅಶ್ವಿನ್ ಡಿ. ಗೌಡವ್ಯವಸ್ಥಾಪಕ ನಿರ್ದೇಶಕಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ
ಇನ್ನು ಮುಂದೆ ಸ್ಕಿಲ್ ಇಲ್ಲದೆ ಭವಿಷ್ಯವಿಲ್ಲ. ಅದನ್ನು ಅವರ ಮನೆ ಬಾಗಿಲಿಗೇ ಹೋಗಿ ನೀಡುವುದು ಸರ್ಕಾರದ ಉದ್ದೇಶವಾಗಿದೆ. ರಾಜ್ಯದಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಾಗಬೇಕು, ಅದಕ್ಕೆ ಯುವಕರಲ್ಲಿ ಕೌಶಲ ಬೆಳೆಸಬೇಕು ಎಂಬುದು ಸರ್ಕಾರದ ಉದ್ದೇಶ.| ಡಾ. ಸಿ.ಎನ್. ಅಶ್ವತ್ಥನಾರಾಯಣಡಿಸಿಎಂ
ಯೋಜನೆಯ ಮುಖ್ಯಾಂಶ
ಏನಿದು ಸ್ಕಿಲ್ ಆನ್ ವ್ಹೀಲ್ಜಿಲ್ಲಾ ಕೇಂದ್ರದಲ್ಲಿರುವ ಕೌಶಲ ತರಬೇತಿ ಕೇಂದ್ರಗಳಿಗೆ ತಾಲೂಕು ಹಾಗೂ ಗ್ರಾಮೀಣ ಭಾಗದ ಯುವಕರು ಬರುತ್ತಿಲ್ಲ. ಆದ್ದರಿಂದ ಅವರಿರುವ ಸ್ಥಳಕ್ಕೇ ಹೋಗಿ ತರಬೇತಿ ನೀಡುವುದಕ್ಕೆ ‘ಚಕ್ರಗಳ ಮೇಲೆ ಕೌಶಲ’ ಯೋಜನೆ ಆರಂಭಿಸಲಾಗುತ್ತಿದೆ. ಬಸ್ ಅನ್ನು ತರಬೇತಿ ಕೇಂದ್ರವನ್ನಾಗಿ ಪರಿವರ್ತಿಸಿ ಅದರಲ್ಲಿಯೇ ತರಬೇತಿ ನೀಡುವುದು ಯೋಜನೆ ಆಶಯ.
ಯೋಜನೆಯಲ್ಲಿ ಏನೇನಿದೆ?ಸ್ಕಿಲ್ ಆನ್ ವ್ಹೀಲ್, ಪ್ರತಿ ಜಿಲ್ಲೆಯಲ್ಲಿ ಸ್ಕಿಲ್ ಹಬ್, ಸ್ಕಿಲ್ ಹೆಲ್ಪ್​ಲೈನ್, ಸ್ಕಿಲ್ ಪೋರ್ಟಲ್
ಜಾರಿಗೆ ಸರ್ಕಾರ ಸಿದ್ಧತೆಕೌಶಲ್ಯ ವೃದ್ಧಿಯ ಎಲ್ಲ ಯೋಜನೆಗಳು 2021ರ ಫೆಬ್ರವರಿ ಯಿಂದ ಆರಂಭವಾಗುತ್ತವೆ. ಕೌಶಲ್ಯಾಭಿವೃದ್ಧಿ ಪ್ರಾಧಿಕಾರ ಇದಕ್ಕೆ ಅಗತ್ಯವಿರುವ ಪ್ರಾಥಮಿಕ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
