ಬೆಂಗಳೂರು:ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ 20 ವರ್ಷಗಳನ್ನು ಪೂರೈಸಿರುವ ಸ್ಕೋಡಾ ಆಟೋ ಇಂಡಿಯಾ, ಇದೀಗ ಭಾರತೀಯರ ಅಭಿರುಚಿಗೆ ತಕ್ಕಂತಹ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿರುವ ‘ ‘ಸ್ಕೋಡ ಕುಷಾಕ್’ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಸೋಮವಾರ ನಗರದ ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ತಫೆ ಅಸೆಸ್ ಶೋರೂಂನಲ್ಲಿ ನೂತನ ‘ಸ್ಕೋಡಾ ಕುಷಾಕ್ ‘ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಶಾಖಾ ಮುಖ್ಯಸ್ಥ ದಾಮೋದರ್ ಎಲ್. ಅವರು, ಈ ಮಾಡೆಲ್​ ಆಕರ್ಷಕ ವಿನ್ಯಾಸ ಹೊಂದಿರುವುದರೊಂದಿಗೆ, ಅತ್ಯುನ್ನತ ತಂತ್ರಜ್ಞಾನ ಆಧರಿತ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದೆ ಎಂದರು.
ಇದನ್ನೂ ಓದಿ:ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಮದ್ಯದ ಬಾಟಲ್ ಎಸೆದು ದಾಳಿ
ಬಿಡುಗಡೆ ಸಮಾರಂಭದಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಭೈರತಿ ಸುರೇಶ್, ಬೌರಿಂಗ್ ಇನ್ಸಿಟ್ಯೂಟ್​ನ ಕಾರ್ಯದರ್ಶಿ ಹೆಚ್.ಎಸ್.ಶ್ರೀಕಾಂತ್, ಚಿತ್ರನಟ ಅಚ್ಯುತ್ ಕುಮಾರ್‌ ಮತ್ತು ಸ್ಕೋಡಾ ಇಂಡಿಯಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಷಾಕ್​ ವಿಶೇಷತೆಗಳು :ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹೆಚ್ಚು ಆಯ್ಕೆಗಳನ್ನು ಕುಷಾಕ್‌ನಲ್ಲಿ ಅಳವಡಿಸಲಾಗಿದೆ. ದೀರ್ಘಕಾಲ ಬಾಳಿಕೆ ಮತ್ತು ಸುಲಭ ನಿರ್ವಹಣೆಗೆ ಎಲ್ಇಡಿಯನ್ನು ಬಳಸಲಾಗಿದೆ. ಆಕರ್ಷಕ ಇಂಡಿಕೇಟರ್‌ಗಳೊಂದಿಗೆ ಕುಷಾಕ್‌ನ ಒಳ ವಿನ್ಯಾಸ ಗ್ರಾಹಕರ ಅಭಿರುಚಿಗೆ ತಕ್ಕಂತೆ ಇದೆ.
ಇದನ್ನೂ ಓದಿ:ರೆಸಿಡೆಂಟ್ ಗ್ರೀವೆನ್ಸ್ ಆಫೀಸರ್​ಅನ್ನು ನೇಮಿಸಿದ ಟ್ವಿಟರ್; ಹೊಸ ಐಟಿ ನಿಯಮದಂತೆ ವರದಿಯೂ ಪ್ರಕಟ
ಒಳ ಮತ್ತು ಹೊರ ವಿನ್ಯಾಸದಲ್ಲಿ ‘ಪವರ್ ಹೌಸ್’ ಎಂದು ಬಣ್ಣಿಸಬಹುದಾಗಿರುವ ಕುಷಾಕ್, ಎರಡು ಇಂಜಿನ್ ವೇರಿಯಂಟ್ಸಲ್ಲಿ – 1.0 ಟಿಎಸ್ಐ ಮತ್ತು 5 ಟಿಎಸ್ಐ – ಲಭ್ಯವಿದೆ. ಅಂತೆಯೇ ಮ್ಯಾನುಯಲ್ ಮತ್ತು ಆಟೋಮೇಕ್ ಎರಡೂ ಮಾದರಿಯಲ್ಲಿ ಕುಷಾಕ್ ದೊರಕಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಕರ್ಟ‌ನ್ ಮಾದರಿಯ ಆರು ಏ‌ರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ.
ಒಬ್‌ಸೋಲ್ಸ್ ಕಂಟ್ರೋಲ್, ಟೈರ್‌ನಲ್ಲಿನ ಗಾಳಿಯ ಮಾನಿಟರಿಂಗ್ ವ್ಯವಸ್ಥೆ, ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಕ, ಮಿಕೂಲಿಷನ್ ಬ್ರೇಕ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಆ್ಯಂಟಿ ಬಾಕ್ ಬ್ರೇಕಿಂಗ್ ವ್ಯವಸ್ಥೆ ಜತೆಗೆ ಸ್ಕೋಡಿಆಸ್ ನ್ಯಾವಿಗೇಷನ್, ಮೈ ಸೋಡಾ ಕನೆಕ್ಟ್ ಸಾಫ್ಟ್​ವೇರ್​ ವ್ಯವಸ್ಥೆಗಳು ಮಾಹಿತಿ ಜೊತೆಗೆ ಭರಪೂರ ಮನೋರಂಜನೆಯನ್ನೂ ಒದಗಿಸಲಿದೆ.
ಈ ಎಲ್ಲ ಅತ್ಯಾದ್ಭುತಗಳೊಂದಿಗೆ ‘ಕುಷಾಕ್’ ಐದು ಆಕರ್ಷಕ ವರ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಪ್ರಯಾಣಿಕರ ಎಲ್ಲ ಆಗತ್ಯಗಳನ್ನು ಪೂರೈಸುವ ವ್ಯವಸ್ಥೆಗಳೊಂದಿಗೆ ಅತ್ಯುತ್ತಮ ಔಟ್ ಸ್ಪೇಸ್ ಹೊಂದಿದೆ. ಹಿಂದೆ ಚಲಿಸುವಾಗ ನಿರ್ದಿಷ್ಟ ಮಾಹಿತಿ ನೀಡುವ ವ್ಯವಸ್ಥೆ ಕೂಡ ಲಭ್ಯವಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 28 ಗೋವುಗಳ ರಕ್ಷಣೆ

ನಟ ಸುನೀಲ್​ ಶೆಟ್ಟಿ ಅಪಾರ್ಟ್​ಮೆಂಟ್​ ಸೀಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
