ಬೆಂಗಳೂರು:ಕನ್ನಡದ ಹಿರಿಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯು ಇದೀಗ ಚೈನೀಸ್ ಹಾಗೂ ರಷ್ಯನ್ ಭಾಷೆಗಳಿಗೆ ಅನುವಾದಗೊಂಡಿದೆ.
ಕೇಂದ್ರ ಸರ್ಕಾರದ ಯೋಜನೆಯಂತೆ ಭಾರತೀಯ ಭಾಷೆಗಳಲ್ಲಿ ಬರೆದ 10 ಮಹಾನ್ ಸಾಹಿತ್ಯ ಕೃತಿಗಳನ್ನು ಎರಡೂ ಭಾಷೆಗೆ ಅನುವಾದ ಮಾಡಿಸಲಾಗಿದೆ.
2019ರಲ್ಲಿ ಕಿರ್ಗೀಸ್ಥಾನದ ಬಿಶ್ಕೆಕ್​ನಲ್ಲಿ ನಡೆದ ಶಾಂಘೈ ಕೊ-ಆಪರೇಷನ್ ಆರ್ಗನೈಸೇಷನ್(ಎಸ್​ಸಿಒ) ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಎಸ್​ಸಿಒ ದೇಶಗಳ ಅತ್ಯುತ್ತಮ ಮನಸ್ಸುಗಳನ್ನು ಹತ್ತಿರವಾಗಿಸಲು 10 ಮಹಾನ್ ಕೃತಿಗಳನ್ನು ಚೈನೀಸ್, ರಷ್ಯನ್ ಹಾಗೂ ಎಸ್​ಸಿಒ ಭಾಷೆಗಳಿಗೆ ಅನುವಾದ ಮಾಡಿಸಲಾಗುತ್ತದೆ ಎಂದು ಘೋಷಿಸಿದ್ದರು. ಈ ಯೋಜನೆಯ ಭಾಗವಾಗಿ 10 ಕೃತಿಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಆಯ್ಕೆ ಮಾಡಿತ್ತು. ಈ ಎಲ್ಲ ಕೃತಿಗಳ ಇಂಗ್ಲಿಷ್ ಅನುವಾದವನ್ನೂ ಮುದ್ರಣ ಮಾಡಲಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸ ರಾವ್ ಹೇಳಿದ್ದಾರೆ.
ಡಿ.4ರಿಂದ ರಾಜ್ಯದಲ್ಲಿ ಭಾರಿ ಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
