ಬೆಂಗಳೂರು:ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ವಿಷಯದಲ್ಲಿ ರಾಜಕೀಯ ವಾಕ್ಸಮರ ಆರಂಭವಾಗಿದೆ.ಬುಧವಾರದ ಬೆಳವಣಿಗೆಯಲ್ಲಿ ಸಂಸದೆ ಸುಮಲತಾ ಆವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹರಿತ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಅವರು ತೀಕ್ಷ್ಣ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.
– ನೀರಾವರಿ ಸಚಿವರು ಇಲ್ಲಿಯವರೆಗೆ ಒಮ್ಮೆಯೂ ಕೆಆರ್‌ಎಸ್ ವೀಕ್ಷಣೆಗೆ ಬಂದಿಲ್ಲ, ಸ್ಥಳೀಯ ಶಾಸಕರು, ಸಂಸದರನ್ನು ಕರೆದು ಸಭೆ ಮಾಡಿಲ್ಲ. ಇಷ್ಟೆಲ್ಲಾ ಸಮಸ್ಯೆ ಆದರೂ ಸ್ಥಳೀಯರಿಂದ ವರದಿ ಪಡೆದಿಲ್ಲ.– ನೀರಾವರಿ ಸಚಿವರು ಈ ರೀತಿ ಏಕೆ ಮಾಡುತ್ತಿದ್ದಾರೆ ನನಗೆ ಅರ್ಥವಾಗುತ್ತಿಲ್ಲ. ಆಗಸ್ಟ್‌ನಲ್ಲೇ ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ಎಲ್ಲರ ಸಲಹೆ ಸೂಚನೆ ಪಡೆದು ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೇ? ಬೇಡವೇ ಎಂದು ತಿರ್ಮಾನ ಮಾಡಬೇಕಿತ್ತು. ಅಂದೇ ತಿರ್ಮಾನ ತಗೆದುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.– ಮಂಡ್ಯದಲ್ಲಿ ಈಗಾಗಲೇ ಅರ್ಧ ಬೆಳೆ ನಾಶವಾಗಿದೆ.ರೈತರಿಗೆ ಯಾವ ಪರಿಹಾರ ಎಂಬ ಕ್ಲಾರಿಟಿ ಸಿಗುತ್ತಿಲ್ಲ. ಇದು ಸರ್ಕಾರದ ಜವಾಬ್ದಾರಿ, ಕಾವೇರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ.
– ನನಗೆಲ್ಲ ಗೊತ್ತಿದೆ. ನನ್ನದು ರಾಜಕಾರಣ. ನನ್ನದೂ ಅದೇ ರಕ್ತ. ಇಲ್ಲಿದ್ದುಕೊಂಡೇ ಎಲ್ಲ ಮಾಹಿತಿ ತರಿಸಿಕೊಂಡಿದ್ದೇನೆ.– ದಿನೇ ಬೇಕಾದರೂ ಕೆ.ಆರ್.ಎಸ್‌ನಲ್ಲೇ ಮಲಗುತ್ತೇನೆ.– ಎಂಪಿಯವರು ಇಲ್ಲಿ ರಾಜಕಾರಣ ಮಾಡುವುದು ಬೇಡ, ಅಷ್ಟೇ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 + 14 =
Remember me
