ಪಾಕಿಸ್ತಾನದ ಲಷ್ಕರ್ ಎ-ತೋಯಿಬಾ(ಎಲ್‌ಇಟಿ) ಉಗ್ರ ಸಂಘಟನೆಗೆ ಯುವಕರ ನೇಮಕ ಮತ್ತು ಉಗ್ರವಾದ ಬೋಧಿಸುತ್ತಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಅರೆಕೊಪ್ಪದ ಸೈಯದ್ ಇದ್ರಿಸ್ (28) ಬಂಧಿತ.
ಹಿಂದೆಯೂ 3 ಬಾರಿ ವಿಚಾರಣೆ ನಡೆಸಿ ಬಿಟ್ಟಿದ್ದ ಎನ್‌ಐಎ ಅಧಿಕಾರಿಗಳು, ಕೊನೆಗೆ ಸಾಕ್ಷಾೃಧಾರ ಸಮೇತ ಬಂದು ನ.10ರ ರಾತ್ರಿ ಬಂಧಿಸಿ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆನಂತರ ಟ್ರ್ಯಾಸಿಟ್ ವಾರಂಟ್ ಪಡೆದು ಕೋಲ್ಕತ್ತಾಗೆ ಕರೆದೊಯ್ದು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ಪಡೆದಿರುವುದಾಗಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.ದೇಶ ವ್ಯಾಪಿ ಮುಸ್ಲಿಂ ಯುವಕರಿಗೆ ಉಗ್ರವಾದವನ್ನು ಬೋಧನೆ ಮಾಡಿ ಅವರನ್ನು ಪಾಕಿಸ್ಥಾನದ ಎಲ್‌ಇಟಿ ಉಗ್ರ ಸಂಘಟನೆಗೆ ಸೇರ್ಪಡೆ ಮಾಡುತ್ತಿದ್ದ ಉಗ್ರ ಗ್ಯಾಂಗ್ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 18ರಂದು ಎನ್‌ಐಎ  ಎಫ್​ಐಆರ್ ದಾಖಲಿಸಿತ್ತು.
ಈ ಕೇಸಿನಲ್ಲಿ ಹಲವು ಶಂಕಿತರನ್ನು ಬಂಧಿಸಿ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು ಕೋರ್ಟ್‌ಗೆ ಆರೋಪಪಟ್ಟಿ ಸಹ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತರ ಪತ್ತೆ ಕಾರ್ಯಾಚರಣೆ ಮುಂದುವರೆಸಿದ್ದ ಎನ್‌ಐಎ, ಶಿರಸಿಯಲ್ಲಿ ಸೈಯದ್ ಇದ್ರಿಸ್‌ನನ್ನು ಬಂಧಿಸಿದೆ.
ಪಾಕ್ ಎಲ್‌ಇಟಿ ಉಗ್ರ ಸಂಘಟನೆ ಮುಖಂಡರ ಜತೆ ನೇರ ಸಂಪರ್ಕದಲ್ಲಿದ್ದ ಸೈಯದ್,ರಾಜ್ಯದಲ್ಲಿ ಸ್ಲೀಪರ್ ಸೆಲ್ ಆಗಿ ಉಗ್ರ ಚಟುವಟಿಕೆ ನಡೆಸುತ್ತಿದ್ದ. ಉಗ್ರ ಸಂಘಟನೆ ವಿವಿಧ ಜಾಲತಾಣಗಳನ್ನು ಬಳಸುತ್ತಿದ್ದ ಶಂಕಿತ ಉಗ್ರ, ಅಮಾಯಕ ಮತ್ತು ಮುಗ್ಧ ಯುವಕರಿಗೆ ಉಗ್ರವಾದ ಬೋಧನೆ ಮಾಡಿ ಸೆಳೆಯುತ್ತಿದ್ದ. ದೇಶ ವ್ಯಾಪಿ ಎಲ್‌ಇಟಿ ಬಲಗೊಳಿಸಲು ಯುವಕರ ನೇಮಕಾತಿ ನಡೆಸುತ್ತಿದ್ದ.
ವಾಟ್ಸ್‌ಆ್ಯಪ್, ಫೇಸ್‌ಬುಕ್ ಇನ್ನಿತ್ತರ ಜಾಲತಾಣಗಳಲ್ಲಿ ಗ್ರೂಪ್ ತೆರೆದು ಅದರಲ್ಲಿ ಯುವಕರನ್ನು ಸೇರಿಸಿ ಅದರಲ್ಲಿ ಭಯೋತ್ಪಾದಕ ಚಟುವಟಕೆಗಳ ವಿಡಿಯೋ ಮತ್ತು ಉಗ್ರವಾದ ಬೋಧನೆ ಆಡಿಯೋಗಳನ್ನು ಅಪ್‌ಲೋಡ್ ಮಾಡಿ ಸೆಳೆಯುತ್ತಿದ್ದ. ಇದೇ ಕೇಸಿನಲ್ಲಿ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿ ಬಿಟ್ಟು ಹೋಗಿದ್ದರು. ಇದೀಗ ಸಾಕ್ಷಾೃಧಾರ ಸಮೇತ ಶಂಕಿತನನ್ನು ಬಂಧಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 3 =
Remember me
