ರಾಮನಗರ:ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಎಲ್ಲ ಎಂಎಸ್ಐಎಲ್​ ಮತ್ತು ವೈನ್​ಶಾಪ್​ ಮಳಿಗೆಗಳ ಮುಂದೆ ಮದ್ಯಕ್ಕಾಗಿ ಗ್ರಾಹಕರು ಕ್ಯೂ ನಿಂತಿದ್ದರು. ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯ ನೇತ್ರ ವೈನ್ಸ್ ಸ್ಟೋರ್​ ಬಳಿ ಸಾಮಾಜಿಕ ಅಂತರಕ್ಕೆಂದು ಹಾಕಿರುವ ವೃತ್ತಗಳಲ್ಲಿ ಗ್ರಾಹಕರು ತಮ್ಮ ಚಪ್ಪಲಿಗಳನ್ನು ಇಟ್ಟು ಜಾಗ ಕಾಯ್ದಿರಿಸಿಕೊಂಡಿದ್ದರು. ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಅವರವರ ಚಪ್ಪಲಿ ಬಳಿ ಸಾಲಾಗಿ ನಿಂತು “ಎಣ್ಣೆ’ ಖರೀದಿಸಿದರು.
ಇನ್ನು ಚನ್ನಪಟ್ಟಣದ ಬಿವಿ ಹಳ್ಳಿಯ ಎಂಎಸ್ಐಎಲ್​ ಮಳಿಗೆಗೆ ಬಹುತೇಕ ಎಲ್ಲ ಗ್ರಾಹಕರೂ ಬ್ಯಾಗ್​ ಹಿಡಿದುಕೊಂಡೇ ಬಂದಿದ್ದರು. ತರಕಾರಿಯನ್ನು ಬ್ಯಾಗ್​ನಲ್ಲಿ ತುಂಬಿಕೊಂಡು ಹೋಗುವಂತೆ ಮದ್ಯ ಖರೀದಿ ಮಾಡಿ ಕೊಂಡೊಯ್ಯುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಹಲವೆಡೆ ಮದ್ಯಪಾನಪ್ರಿಯರು ಸಾಮಾಜಿಕ ಅಂತರ ಮರೆತು ಮದ್ಯ ಖರೀದಿಸುವಲ್ಲಿ ಮಗ್ನರಾಗಿದ್ದರು.
ಇದನ್ನೂ ಓದಿಮಂಡ್ಯದಲ್ಲಿ ಮದ್ಯಕ್ಕಾಗಿ ಓಡಿ ಬಂದ “ಎಣ್ಣೆ”ಪ್ರಿಯರು
ಜಿಲ್ಲೆಯಲ್ಲಿರುವ ಒಟ್ಟು 88 ವೈನ್​ಶಾಪ್​ಗಳು ಮತ್ತು ಎಂಎಸ್ಐಎಲ್​ ಔಟ್​ ಲೆಟ್​ಗಳ ಮೂಲಕ ಮದ್ಯ ಮಾರಾಟಕ್ಕೆ ಇಂದಿನಿಂದ ಅವಕಾಶ ನೀಡಲಾಗಿದೆ. ವೈನ್​ಶಾಪ್​ಗಳ ಬಳಿ ಅಂತರ ಕಾಪಾಡಲು ಸಾರ್ವೆ ಮರಗಳ ಮೂಲಕ ಬ್ಯಾರಿಕೇಡ್​ ಹಾಕಲಾಗಿದೆಯಾದರೂ ಒಬ್ಬರಿಗೆ ಮತ್ತೊಬ್ಬರು ಅಂಟಿಕೊಂಡೇ ನಿಂತು ಮದ್ಯ ಖರೀದಿಗೆ ಮುಗಿಬಿದ್ದದ್ದು ಮಾತ್ರ ಆತಂಕಕಾರಿ.
ಇದನ್ನೂ ಓದಿhttp://ವಲಸೆ ಕಾರ್ಮಿಕರಿಗೊಂದು ಗುಡ್​ನ್ಯೂಸ್​: ಉಚಿತ ಬಸ್​ ಪ್ರಯಾಣದ ಸೌಲಭ್ಯ ಇನ್ನೂ ಎರಡು ದಿನ ವಿಸ್ತರಣೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × one =
Remember me
