ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್​ಬಾಸ್​ ಕನ್ನಡದ ಹತ್ತನೇ ಆವೃತ್ತಿ ಇಂದು ಆರಂಭವಾಗಿದ್ದು, ಈ ಶೋಗೆ ಮೊದಲ ಸ್ಪರ್ಧಿಯ ಘೋಷಣೆ ಆಗಿದೆ. ಹದಿನಾರು ಸ್ಪರ್ಧಿಗಳ ಪೈಕಿ ಪ್ರಥಮ ಸ್ಪರ್ಧಿಯಾಗಿ ಯುವತಿಯೊಬ್ಬರು ಆಯ್ಕೆ ಆಗಿದ್ದಾರೆ.
ಕನ್ನಡಿಗರ ಕುತೂಹಲ ಕೆರಳಿಸಿರುವ ಬಿಗ್​ಬಾಸ್​ ಶೋನ ಮೊದಲ ಸ್ಪರ್ಧಿಯಾಗಿ ಕಣ್ಮನ ಸೆಳೆಯಲು ನಮ್ರತಾ ಆಯ್ಕೆ ಆಗಿದ್ದಾರೆ. ‘ನಮ್ಮ ಮೊದಲ ಕಂಟೆಸ್ಟೆಂಟ್ ನಮ್ರತಾ’ ಎಂದು ಬಿಗ್​ಬಾಸ್ ಪ್ರಸಾರ ಮಾಡುತ್ತಿರುವ ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಘೋಷಣೆ ಮಾಡಿದೆ.
ಇದನ್ನೂ ಓದಿ:ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ
ಮೊದಲ ಕಂಟೆಸ್ಟೆಂಟ್​ ಆಗಿ ಆಯ್ಕೆ ಆಗಿರುವ ಈಕೆಯ ಪೂರ್ತಿ ಹೆಸರು ನಮ್ರತಾ ಗೌಡ. ಈಕೆ ಸ್ಟಾರ್​ ಸುವರ್ಣದ ‘ಕೃಷ್ಣ ರುಕ್ಮಿಣಿ’ ಧಾರಾವಾಹಿ ಮೂಲಕ ಕಿರುತೆರೆಗೆ 2011ರಲ್ಲಿ ಪ್ರವೇಶ ಮಾಡಿದ್ದರು. ಆ ಬಳಿಕ ಈಕೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮಂಗಳ ಗೌರಿ ಮದುವೆ’ ಮತ್ತು ‘ನಾಗಿನಿ 2’ ನಮ್ರತಾಗೆ ಬಹಳಷ್ಟು ಖ್ಯಾತಿ ತಂದುಕೊಟ್ಟಿವೆ.. ನಮ್ರತಾ 2019ರಲ್ಲಿ ‘ತಕಧಿಮಿತಾ’ ರಿಯಾಲಿಟಿ ಶೋನಲ್ಲಿ ತಮ್ಮ ನೃತ್ಯ ಕೌಶಲ್ಯ ಪ್ರದರ್ಶಿಸಿ ಟಾಪ್ 5ರ ಸ್ಥಾನ ತಲುಪಿದ್ದರು. ಆಕರ್ಷಕ ಮೈಮಾಟದ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಮಾದಕ ಫೋಟೋಗಳಿಂದ ಆಗಾಗ ಗಮನ ಸೆಳೆಯುತ್ತಿರುತ್ತಾರೆ.
ಬಿಗ್​ಬಾಸ್​ ಗ್ರ್ಯಾಂಡ್​ ಪ್ರೀಮಿಯರ್​ ಇಂದು ಸಂಜೆ ಆರು ಗಂಟೆಗೆ ಆರಂಭಗೊಂಡಿದ್ದು, ಇನ್ನು ಮುಂದೆ ಪ್ರತಿದಿನ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಬಿಗ್​ಬಾಸ್​ ಇತರ ಸ್ಪರ್ಧಿಗಳ ಮಾಹಿತಿ ಮತ್ತು ವಿವರ ಇನ್ನು ಒಂದೊಂದಾಗಿ ಹೊರಬೀಳಲಿದೆ.
ನಮ್ಮ ಮೊದಲ ಕಂಟೆಸ್ಟೆಂಟ್ ನಮ್ರತಾ
ಬಿಗ್ ಬಾಸ್ | GRAND PREMIERE ಇಂದು ಸಂಜೆ 6 | ಪ್ರತಿ ರಾತ್ರಿ 9:30@KicchaSudeep#BBK10#HappyBiggBoss#KichchaSudeep#ColorsKannada#ಬಣ್ಣಹೊಸದಾಗಿದೆ#ಬಂಧಬಿಗಿಯಾಗಿದೆpic.twitter.com/acWFZ8vYoQ
— Colors Kannada (@ColorsKannada)October 8, 2023

ನಮಸ್ಕಾರ ದೇವ್ರು.. ಇಲ್ಲಿ ದೇವ್ರದ್ದೇ ಬ್ಯಾಟಿಂಗ್​-ಫೀಲ್ಡಿಂಗ್​!; ಡಾ.ಬ್ರೋ ಭೇಟಿ ನೀಡಿರುವ ಈ ಕ್ರಿಕೆಟ್ ದೇವಸ್ಥಾನ ಎಲ್ಲಿದೆ?

ಇವರೆಲ್ಲ ದುಡಿಯದೇ ಕೋಟ್ಯಧಿಪತಿಗಳು; ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ರೆ ಕೋಟಿಗಟ್ಟಲೆ ಹಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − one =
Remember me
