| ಜಯಣ್ಣ ಎ.ಸಿ., ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​
ದಶಕಗಳ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಇನ್ಫೋಸಿಸ್, ಎಲ್ ಆ್ಯಂಡ್​ ಟಿ ಮುಂತಾದ ದೈತ್ಯ ಕಂಪನಿಗಳ ಷೇರುಗಳನ್ನು ಖರೀದಿಸಿ ಉಳಿಸಿಕೊಂಡ ಹೂಡಿಕೆದಾರರು ಗಳಿಸಿದ ಆದಾಯವನ್ನು ಊಹಿಸಿ? ಕಳೆದ ಒಂದು ದಶಕದಲ್ಲೇ ಈ ಷೇರುಗಳು ಶೇಕಡ 14-20 ಸಿಎಜಿಆರ್ ಆದಾಯ ಗಳಿಸಿವೆ. ನೀವು 20-30 ವರ್ಷಗಳ ಹಿಂದೆಯೇ ಈ ದೈತ್ಯರನ್ನು ಗುರುತಿಸಿದ್ದರೆ ನಿಮ್ಮ ಲಾಭ ಅನೇಕ ಪಟ್ಟು ಹೆಚ್ಚಾಗಿರುತ್ತಿತ್ತು.
ಸ್ಮಾಲ್​ ಕ್ಯಾಪ್ ಹೂಡಿಕೆಯಲ್ಲಿ ಹೂಡಿಕೆದಾರರು ನಾಳೆಯ ಮಿಡ್​ ಕ್ಯಾಪ್​ ಮತ್ತು ಲಾರ್ಜ್​ ಕ್ಯಾಪ್​ಗಳಾಗುವ ಸಾಮರ್ಥ್ಯ ಹೊಂದಿರುವ ಸಣ್ಣ ಗಾತ್ರದ ಕಂಪನಿಗಳನ್ನು ಆಯ್ಕೆ ಮಾಡುತ್ತಾರೆ. ಇದರಿಂದಾಗಿ ಇವು ನಿಮಗೆ ಆಕರ್ಷಕ ದೀರ್ಘಕಾಲೀನ ಬೆಳವಣಿಗೆಯ ಅವಕಾಶಗಳನ್ನು ನೀಡುತ್ತವೆ. ಸ್ಮಾಲ್​ ಕ್ಯಾಪ್​ ಹೂಡಿಕೆಯಲ್ಲಿ ಯಶಸ್ಸನ್ನು ಸವಿಯಲು ಪೋರ್ಟ್​ಫೋಲಿಯೊ ವಿಧಾನದ ಅಗತ್ಯವಿದೆ. ಏಕೆಂದರೆ ಈ ಷೇರುಗಳು ಸಣ್ಣ ಕಂಪನಿಗಳದ್ದಾಗಿದ್ದು, ಅವು ಹೆಚ್ಚಿನ ಅಪಾಯ ಹೊಂದಿರುತ್ತವೆ. ಹೀಗಾಗಿ ಮಿಡ್​ ಕ್ಯಾಪ್​ ಮತ್ತು ಲಾರ್ಜ್​ ಕ್ಯಾಪ್​ಗಳ ಸ್ಟಾಕ್​ಗಳಿಗಿಂತ ಇವು ಏರಿಳಿತಕ್ಕೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಚಿಕ್ಕದು ಒಳ್ಳೆಯದೇ ಆಗಿದ್ದರೂ ಪ್ರಕೃತಿಯಲ್ಲಿ ಮತ್ತು ಇತರ ಕಡೆ ಇಂಥವನ್ನು ಹೆಚ್ಚಾಗಿ ಕಡೆಗಣಿಸಲಾಗಿರುತ್ತದೆ. ಸ್ಮಾಲ್ ಕ್ಯಾಪ್​ ಕಂಪನಿಗಳು ಸಂಭಾವ್ಯ ಯಶಸ್ವಿ ವ್ಯವಹಾರ ಮಾದರಿಗಳು, ಬೃಹತ್ ಬೆಳವಣಿಗೆಯ ಸಾಮರ್ಥ್ಯ ಮತ್ತು ಅನನ್ಯ ನವೀನ ಉತ್ಪನ್ನಗಳು/ ಸೇವೆಗಳನ್ನು ಹೊಂದಿದ್ದರೂ, ಅವುಗಳು ಸಣ್ಣವೆಂಬ ಕಾರಣಕ್ಕೆ ಹೂಡಿಕೆದಾರರು ದೊಡ್ಡದರತ್ತ ನೋಡುತ್ತಾರೆ. ಸ್ಮಾಲ್ ಕ್ಯಾಪ್ ಹೂಡಿಕೆಯಿಂದ ಆಲ್ಫಾ (ಬೆಂಚ್​​ಮಾರ್ಕ್ ರಿಟರ್ನ್​ಗಿಂತ ಅಧಿಕ) ಅನುಭವಿಸುವ ಅವಕಾಶವಿದೆ.
ಇದನ್ನೂ ಓದಿ:ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?
ದುರದೃಷ್ಟವಶಾತ್, ಸ್ಮಾಲ್ ಕ್ಯಾಪ್​​ಗಳಲ್ಲಿ ನೇರ ಹೂಡಿಕೆ ತನ್ನದೇ ಆದ ಅಪಾಯಗಳನ್ನು ಹೊಂದಿದೆ. ಮೊದಲನೆಯದಾಗಿ, ಅನೇಕ ಸ್ಮಾಲ್ ಕ್ಯಾಪ್​ಗಳು ಹೆಚ್ಚಿನ ಕೀ ಮ್ಯಾನ್ ಅಪಾಯ ಹೊಂದಿವೆ. ಎರಡನೆಯದಾಗಿ, ಅನೇಕ ಸ್ಮಾಲ್ ಕ್ಯಾಪ್​ಗಳ ಆರ್ಥಿಕತೆ ದೊಡ್ಡ ಸಂಸ್ಥೆಗಳಂತೆ ಆರೋಗ್ಯಕರವಾಗಿಲ್ಲ. ಇದು ಅಂಥವನ್ನು ಆರ್ಥಿಕ ತೊಂದರೆಗಳಿಗೆ ಒಡ್ಡುತ್ತದೆ. ಮೂರನೆಯದಾಗಿ, ಅನೇಕ ಸ್ಮಾಲ್ ಕ್ಯಾಪ್​​ಗಳು ಸಣ್ಣ ಗಾತ್ರದವೆಂದರೆ ದೊಡ್ಡ ಕಂಪನಿಗಳು ಪ್ರಮುಖ ಸಾಮರ್ಥ್ಯದ ಕ್ಷೇತ್ರಗಳಲ್ಲಿ ಅಂಥವನ್ನು ಮೀರಿಸಬಹುದು.
ವ್ಯಾಪಕವಾದ ಸಂಶೋಧನೆ ಮತ್ತು ಅನುಭವಿ ಫಂಡ್ ಮ್ಯಾನೇಜರ್​​ಗಳನ್ನು ಒಳಗೊಂಡಿರುವ ಮ್ಯೂಚುವಲ್ ಫಂಡ್​ಗಳು ಅಂಥ ಕಂಪನಿಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ ಹಾಗೂ ಉತ್ತಮ ಮತ್ತು ಶುದ್ಧ ಸ್ಮಾಲ್ ಕ್ಯಾಪ್​ಗಳಲ್ಲಿ ಮಾತ್ರ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಪೋರ್ಟ್​ಫೋಲಿಯೊ ನಿರ್ಮಾಣದ ವಿಷಯದಲ್ಲಿ ಸ್ಮಾಲ್​ ಕ್ಯಾಪ್​ ಫಂಡ್​ಗಳು ಅದರ ಒಟ್ಟು ಸ್ವತ್ತುಗಳಲ್ಲಿ ಕನಿಷ್ಠ ಶೇ. 65 ಸ್ಮಾಲ್​ ಕ್ಯಾಪ್​ ಸ್ಟಾಕ್​ಗಳ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತವೆ. ಇದನ್ನು ವ್ಯಾಪಕ ಸಂಶೋಧನೆ ಮತ್ತು ಪರಿಶೀಲನೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಲಿಕ್ವಿಡಿಟಿ ಉದ್ದೇಶಗಳಿಗಾಗಿ, ಯೋಜನೆಗಳು ಪೋರ್ಟ್​ಫೋಲಿಯೊದ ಉಳಿದ ಭಾಗವನ್ನು ಲಾರ್ಜ್​ ಕ್ಯಾಪ್​ ಮತ್ತು ಮಿಡ್​ ಕ್ಯಾಪ್​ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡಬಹುದು.
ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
ಉತ್ತಮವಾಗಿ ಕಾರ್ಯನಿರ್ವಹಿಸುವ ಸ್ಮಾಲ್​ ಕ್ಯಾಪ್ ಫಂಡ್​ನೊಂದಿಗಿನ ಫಂಡ್​ ದೀರ್ಘಕಾಲೀನ ದೃಷ್ಟಿಯಿಂದ ಷೇರುಗಳನ್ನು ಖರೀದಿಸುತ್ತದೆ ಮತ್ತು ಹಿಡಿದಿಟ್ಟುಕೊಳ್ಳುತ್ತದೆ. ಉದಾಹರಣೆಗೆ, ಸ್ಮಾಲ್ ಕ್ಯಾಪ್​ ಫಂಡ್​ಗಳ 5 ವರ್ಷ ಮತ್ತು 10 ವರ್ಷಗಳ ವರ್ಗದ ಸರಾಸರಿ ಆದಾಯ ಕ್ರಮವಾಗಿ ಶೇ.16 ಮತ್ತು ಶೇ. 21 ಸಿಎಜಿಆರ್ ಆಗಿರುತ್ತದೆ.
ಸಾಕಷ್ಟು ರಿಸ್ಕ್​ ಎದುರಿಸುವ ಸಾಮರ್ಥ್ಯ, 7-10 ವರ್ಷಗಳ ಅವಧಿಯ ಹೂಡಿಕೆಯ ಸಮಯ ಹೊಂದಿರುವ ಹೂಡಿಕೆದಾರರು ಉತ್ತಮವಾಗಿ ನಡೆಸುವ ಸ್ಮಾಲ್ ಕ್ಯಾಪ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬೇಕು. ಹೂಡಿಕೆದಾರರು ಸ್ಮಾಲ್ ಕ್ಯಾಪ್​​ಗಳಿಗೆ ಒಡ್ಡಿಕೊಳ್ಳಲು ಎಸ್​ಐಪಿಗಳು ಸೂಕ್ತ ಮಾರ್ಗವಾಗಿವೆ.
ಮಕ್ಕಳ ಕಣ್ಣಿಗೆ ಕಾಡಿಗೆ ಎಷ್ಟು ಸುರಕ್ಷಿತ!; ಅಪಾಯವೇನು?

ಜಾತಿಗೆ ಬಲಿಯಾಯ್ತು ಎರಡು ಜೀವ!: ಮಗಳ ಕತ್ತು ಹಿಸುಕಿ ಕೊಂದ ತಂದೆ; ನೊಂದ ಪ್ರಿಯಕರ ಸಾವಿಗೆ ಶರಣು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − five =
Remember me
