ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
ಸ್ಮಾರ್ಟ್ ಕ್ಲಾಸ್ ನಿರ್ಮಾಣ
ನಮ್ಮ ಶಾಲೆಯಲ್ಲಿ ಒಂದು ಸ್ಮಾರ್ಟ್ ಕ್ಲಾಸ್ ನಿರ್ವಿುಸಿದ್ದೇವೆ. ವಿಡಿಯೋ-ಆಡಿಯೋ ಸಹಿತ, ಮಕ್ಕಳೇ ನೇರ ಕಲಿಕೆಯಲ್ಲಿ ತೊಡಗುವ ಇಂಟರಾಕ್ಟಿವ್ ಬೋರ್ಡ್ ಇದು. ಇದು ಜಿಲ್ಲೆಯಲ್ಲೇ ಮೊದಲು. ನಿವೃತ್ತ ಇಂಜಿನಿಯರ್ ಒಬ್ಬರು ಇದಕ್ಕೆ 1.5 ಲಕ್ಷ ರೂ. ನೀಡಿದ್ದಾರೆ. ಸ್ಮಾರ್ಟ್​ಕ್ಲಾಸ್ ರೂಂನಲ್ಲಿ ವುಡ್ ವರ್ಕ್, ರೂಫಿಂಗ್ ಮಾಡಲಾಗಿದೆ.
ಸೇವಾಲಾಲ್ ದೇವಸ್ಥಾನ ಸಮಿತಿ 1 ಲಕ್ಷ ರೂ. ದಾನ ನೀಡಿದ್ದು, ಶಿಕ್ಷಕರು, ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳ ಸಹಕಾರದಿಂದ 7 ಲಕ್ಷ ರೂ. ನಷ್ಟು ಕೆಲಸ ಮಾಡಿಸಿದ್ದೇನೆ. ಕೆಲವರು ಡೆಸ್ಕ್ ನೀಡಿದ್ದಾರೆ. ತಾಪಂ, ಶಾಲೆಯಲ್ಲಿ ಕೆಟ್ಟಿದ್ದ ಬೋರ್​ವೆಲ್ ರಿಪೇರಿ ಮಾಡಿಸಿದೆ. ಒಂದೂಮುಕ್ಕಾಲು ಎಕರೆಯಲ್ಲಿ ಕೈತೋಟ ಮಾಡಿದ್ದೇವೆ, 2 ತಿಂಗಳ ಹಿಂದೆ 480 ಅಡಕೆ ಗಿಡ ನೆಟ್ಟಿದ್ದೇವೆ. ಮಕ್ಕಳ ಸಂಖ್ಯೆ ಸುಧಾರಿಸಿದೆ.
ಕರೊನಾ ಸಂಕಷ್ಟದಿಂದ ಮಕ್ಕಳು ಶಾಲೆಯಿಂದ ದೂರ ಉಳಿದಾಗ ನಾನೇ ಅವರಿದ್ದಲ್ಲಿಗೆ ಹೋದೆ. ಸ್ವಂತ ಖರ್ಚಿನಲ್ಲಿ ವರ್ಕ್​ಶೀಟ್ ಸಿದ್ಧ ಮಾಡಿಕೊಂಡೆ. ಹಿಂದಿ ಕಲಿಸಲು 4-8ನೇ ತರಗತಿಯ 21 ಮಕ್ಕಳನ್ನು ಆಯ್ದು 4 ತಂಡಗಳಾಗಿ ವಿಂಗಡಿಸಿದೆ. ವರ್ಕ್​ಶೀಟ್ ಆಧಾರದ ಮೇಲೆ ಕಲಿಸಿ, ಪ್ರತಿಯೊಬ್ಬರ ಫೈಲ್ ಮಾಡಿ ಡಯಟ್​ಗೆ ಸಲ್ಲಿಸುತ್ತಿದ್ದೇನೆ. ಸಹ ಶಿಕ್ಷಕರು, ಮುಖ್ಯ ಶಿಕ್ಷಕರು ಕೈ ಜೋಡಿಸಿದ್ದಾರೆ.
| ಎಚ್.ಎಂ. ಮಂಗಳಾ ಶಿಕ್ಷಕಿ, ಸರ್ಕಾರಿ ಹಿ.ಪ್ರಾ. ಶಾಲೆ ಕಬ್ಬಳ, ದಾವಣಗೆರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
