ಬೆಂಗಳೂರು:ವಾಹನ ನಿಲುಗಡೆ ಸಮಸ್ಯೆಯನ್ನು ನಿವಾರಿಸಲು ಜಾರಿಗೆ ತರಲಾಗಿರುವ ಸ್ಮಾರ್ಟ್​ಪಾರ್ಕಿಂಗ್ ವ್ಯವಸ್ಥೆ 10 ರಸ್ತೆಗಳಲ್ಲಿ ಜಾರಿಗೊಳಿಸಲಾಗಿದೆ. ನಗರದ 85 ರಸ್ತೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸ್ಮಾರ್ಟ್​ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಅದರ ಭಾಗವಾಗಿ ಮೊದಲಿಗೆ 10 ರಸ್ತೆಗಳಲ್ಲಿ ಬಿಲ್ಡಿಂಗ್​ ಕಂಟ್ರೋಲ್​ ಸೆಲ್ಯೂಷನ್ಸ್​ ಇಂಡಿಯಾ ಸಂಸ್ಥೆ ವತಿಯಿಂದ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಹಿಂದೆ ಪ್ರಾಯೋಗಿಕವಾಗಿ ಕಸ್ತೂರ ಬಾ ರಸ್ತೆ ಮತ್ತು ಸೇಂಟ್​ಮಾರ್ಕ್ಸ್​ ರಸ್ತೆಗಳಲ್ಲಿ ಯೋಜನೆ ಜಾರಿಗೊಳಿಸಲಾಗಿತ್ತು. ಮುಂದುವರಿದಂತೆ ಇದೀಗ 10 ರಸ್ತೆಗಳಲ್ಲಿ ಸ್ಮಾರ್ಟ್​ಪಾರ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ.
ಶುಲ್ಕದ ಮಾಹಿತಿ:
ವಲಯ       ಕಾರು      ದ್ವಿಚಕ್ರ
ಎ               30         15
ಬಿ               20         10
ಸಿ              10          05
985 ವಾಹನಗಳಿಗೆ ಅವಕಾಶ:ಸದ್ಯ ಜಾರಿಗೊಳಿಸಲಾಗುತ್ತಿರುವ 10 ರಸ್ತೆಗಳಲ್ಲಿ 475 ಕಾರುಗಳು ಮತ್ತು 510 ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ನೀಡಲಾಗುತ್ತದೆ. ವ್ಯವಸ್ಥೆ ಜಾರಿಗೊಳಿಸುವ ಹೊಣೆ ಹೊತ್ತಿರುವ ಸಂಸ್ಥೆ ಮುಂದಿನ 10 ವರ್ಷಗಳವರೆಗೆ ವಾಹನ ನಿಲುಗಡೆಗೆ ಯಾವುದೇ ಸಮಸ್ಯೆಯಾದಂತೆ ವಿನ್ಯಾಸ ಸಿದ್ಧಪಡಿಸಿದೆ. ಅಲ್ಲದೆ, ಅದರ ನಿರ್ವಹಣೆಯನ್ನು ಅದೇ ಸಂಸ್ಥೆ ಮಾಡಲಿದೆ. ಅದಕ್ಕೆ ಬದಲಾಗಿ ಸಂಸ್ಥೆ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡಬಹುದಾಗಿದೆ. ಬಿಬಿಎಂಪಿಗೆ ವಾಷಿರ್ಕ 31.56 ಕೋಟಿ ರೂ. ಶುಲ್ಕ ಪಾವತಿಸಲಾಗುತ್ತದೆ.
ಆ್ಯಪ್​ ಆಧಾರಿತ ವ್ಯವಸ್ಥೆ:ವಾಹನ ನಿಲುಗಡೆಗೆ ಸ್ಥಳಾವಕಾಶದ ಬಗ್ಗೆ ಮಾಹಿತಿ ಪಡೆಯುವವರು, ನಿಲುಗಡೆ ನಂತರ ಶುಲ್ಕ ಪಾವತಿಸಲು ಬೆಂಗಳೂರು ಸ್ಮಾರ್ಟ್​ಪಾರ್ಕಿಂಗ್​ ಮೊಬೈಲ್​ ಆ್ಯಪ್​ ಬಳಸಬೇಕಿದೆ. ವಾಹನ ಮಾಲೀಕರು ಯುಪಿಐನಂತಹ ಡಿಜಿಟಲ್​ ಪೇಮೆಂಟ್​ ಆ್ಯಪ್​, ಕ್ರೆಡಿಟ್​, ಡೆಬಿಟ್​ ಕಾರ್ಡ್​ಗಳ ಮೂಲಕ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
7 ದಿನ ಕ್ಯಾಷ್​ಬ್ಯಾಕ್​:ಶುಕ್ರವಾರದಿಂದ 10 ರಸ್ತೆಗಳಲ್ಲಿ ಪಾಕಿರ್ಂಗ್​ ವ್ಯವಸ್ಥೆ ಆರಂಭಿಸಲಾಗಿದೆ. ಮೊದಲ 7 ದಿನಗಳ ಕಾಲ ವಾಹನ ನಿಲುಗಡೆ ಶುಲ್ಕ ಪಾವತಿಸುವವರಿಗೆ ಶೇ. 100 ಕ್ಯಾಷ್​ಬ್ಯಾಕ್​ ನೀಡಲಾಗುತ್ತದೆ.
ಯಾವೆಲ್ಲ ರಸ್ತೆಗಳಲ್ಲಿ ಪಾರ್ಕಿಂಗ್​: ಕಸ್ತೂರಬಾ ರಸ್ತೆ, ಕನ್ನಿಂಗ್​ಹ್ಯಾಂ ರಸ್ತೆ, ಎಂ.ಜಿ.ರಸ್ತೆ, ಸೇಂಟ್​ ಮಾರ್ಕ್ಸ್​ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ಕ್ರಾಸ್​ ರಸ್ತೆ, ವಿಠ್ಠಲ ಮಲ್ಯ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಚರ್ಚ್​ ಸ್ಟ್ರೀಟ್​, ಅಲಿ ಅಸ್ಗರ್​ ರಸ್ತೆ.
ಭಾರತದಲ್ಲಿ ಸೈಬರ್ ಕ್ರೈಂ 500% ಹೆಚ್ಚಳ: ಎನ್​ಎಸ್​ಎ ಅಜಿತ್ ದೋವಲ್ ಕಳವಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
