ಇಂದು (ಮೇ 31) ವಿಶ್ವ ತಂಬಾಕುರಹಿತ ದಿನ. ಭವಿಷ್ಯದ ಪೀಳಿಗೆಯನ್ನು ರಕ್ಷಿಸಿ, ತಂಬಾಕು ಸೇವನೆ ಕಡಿಮೆಗೊಳಿಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಈ ಬಾರಿ ‘ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು’ ಎಂಬ ಘೋಷವಾಕ್ಯದೊಂದಿಗೆ ಈ ದಿನ ಆಚರಿಸಲಾಗುತ್ತಿದೆ.
| ಕೆ.ಎಂ.ಪಂಕಜ ಬೆಂಗಳೂರು
ದೇಶಾದ್ಯಂತ ತಂಬಾಕು ಸೇವನೆ ಬಹುತೇಕ ಕಡಿಮೆಯಾಗಿದ್ದರೂ, ಯುವಜನರಲ್ಲಿ ಹೆಚ್ಚಿದೆ. ಅದರಲ್ಲೂ ಹದಿಹರೆಯದ ಹುಡುಗಿಯರಲ್ಲಿ ಧೂಮಪಾನ ಸೇವನೆ ಪ್ರಮಾಣ ದುಪ್ಪಟ್ಟಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಭಾರತೀಯ ತಂಬಾಕು ನಿಯಂತ್ರಣ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.
ಕಿರಿಯ ಮಹಿಳೆಯರು ತಂಬಾಕಿನಿಂದ ಉಂಟಾಗುವ ರೋಗಗಳಿಗೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿದ್ದಾರೆ. ಮತ್ತೊಂದೆಡೆ ವಯಸ್ಸಾದ ಮಹಿಳೆಯರಲ್ಲಿ ಇದು ಕಡಿಮೆಯಾಗುತ್ತಿದೆ ಎಂದು ವರದಿ ಹೇಳಿದೆ. ಒಂದು ದಶಕದಲ್ಲಿ ಹದಿಹರೆಯದವರಲ್ಲಿ ಸ್ಮೋಕ್ ಸ್ಪೈರಲ್ ಹೆಚ್ಚಳವಾಗಿದ್ದು, ಇದರಲ್ಲಿ ಯುವತಿಯರು ಹೆಚ್ಚಿದ್ದಾರೆ. ವರದಿ ಪ್ರಕಾರ 2009ರಿಂದ 2019ರ ನಡುವೆ ಯುವತಿಯರಲ್ಲಿ ಧೂಮಪಾನ ಬಳಕೆ ಪ್ರಮಾಣ ಶೇ.3.8ರಿಂದ ಶೇ. 6.2ಕ್ಕೆ ಏರಿಕೆಯಾಗಿದೆ. ಯುವಕರಲ್ಲಿ ಶೇ.2.3 ಹೆಚ್ಚಾಗಿದೆ. ಅದೇ ರೀತಿ ಪುರುಷರಲ್ಲಿ ಶೇ.2.2 ಹಾಗೂ ಮಹಿಳೆಯರಲ್ಲಿ ಶೇ.0.4 ಧೂಮಪಾನ ಬಳಕೆ ಕಡಿಮೆಯಾಗಿದೆ.
ಹೆಣ್ಣುಮಕ್ಕಳಲ್ಲಿ ಹೆಚ್ಚಳಕ್ಕೆ ಕಾರಣ?:ವೇಗವಾಗಿ ಪ್ರಬುದ್ಧರಾಗುತ್ತಿರುವುದು, ಉದ್ವೇಗ ತಡೆಯಲು ಹಾಗೂ ಸಮಾಧಾನ ಹೊಂದು ವುದೇ ಆಗಿದೆ. ಇನ್ನೂ ಕೆಲವರು ಗೆಳೆಯ-ಗೆಳತಿಯರ ಒತ್ತಡಕ್ಕೆ ಮಣಿದು, ಈ ಅಭ್ಯಾಸಕ್ಕೆ ಒಳಗಾಗುತ್ತಿದ್ದಾರೆ. ಇದಲ್ಲದೆ ಧೂಮಪಾನ ಫ್ಯಾಶನ್, ಮಹಿಳಾ ಸಬಲೀ ಕರಣದ ಸಂಕೇತ ಎಂಬಂತಾಗಿದೆ ಎನ್ನುತ್ತಾರೆ ತಂಬಾಕು ವಿರೋಧಿ ಹೋರಾಟಗಾರರು.
ಆರೋಗ್ಯದ ಅಪಾಯಗಳು: ಉಸಿರಾಟದ ಕಾಯಿಲೆಗಳು, ಶ್ವಾಸಕೋಶದ ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದಯರಕ್ತನಾಳದ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಣ್ಣ ಭ್ರೂಣಗಳು, ಅಕಾಲಿಕ ಶಿಶುಗಳ ಜನನ, ಜನ್ಮದೋಷ ಶಿಶುಗಳ ಜನನ, ಹುಟ್ಟುತ್ತಲೇ ಶ್ವಾಸಕೋಶ ಸೇರಿ ನಾನಾ ಆರೋಗ್ಯದ ಅಪಾಯಗಳನ್ನು ಹೊಂದಿರುವ ಮಕ್ಕಳ ಜನನಕ್ಕೆ ಕಾರಣವಾಗಲಿದೆ. ಧೂಮಪಾನ ಹೆರಿಗೆ ಸಂದರ್ಭದಲ್ಲಿ ಅಧಿಕ ರಕ್ತಸ್ರಾವಕ್ಕೆ ಕಾರಣವಾಗಲಿದೆ. ಧೂಮಪಾನ ಮಾಡುವವರಲ್ಲಿ ಋತುಬಂಧ ಸಮಸ್ಯೆ ಶೇ.43 ಹೆಚ್ಚಿದೆ ಎಂದು ಸಂಶೋಧನಾ ವರದಿ ಹೇಳಿದೆ. ಧೂಮಪಾನ ಮಾಡುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಪುರುಷರಿಗಿಂತ ಹೆಚ್ಚು ಹಾಗೂ ಗಂಭೀರ ಹೃದಯಾಘಾತದ ಅಪಾಯ ಹೊಂದಿರುತ್ತಾರೆ ಎಂದು ಹೇಳಿದೆ.
ರಾಜ್ಯದಲ್ಲಿ ಕಡಿಮೆ:ನಾಲ್ಕನೇ ಗ್ಲೋಬಲ್ ಯೂಥ್ ಟೊಬ್ಯಾಕೋ ಸರ್ವೆ (ಜಿವೈಟಿಎಸ್- 4) ಪ್ರಕಾರ ದೇಶದಲ್ಲಿ ಒಟ್ಟಾರೆ ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಕರ್ನಾಟಕ (ಶೇ. 1.2) ಕೊನೆಯಿಂದ 2ನೇ ಸ್ಥಾನದಲ್ಲಿದೆ. ಕೊನೆಯಲ್ಲಿ ಹಿಮಾಚಲಪ್ರದೇಶ (ಶೇ. 1.1) ಇದೆ. ಅತೀ ಹೆಚ್ಚು ತಂಬಾಕು ಬಳಕೆ ರಾಜ್ಯಗಳಲ್ಲಿ ಮಿಜೊರಾಂ ಮತ್ತು ಅರುಣಾಚಲ ಪ್ರದೇಶ ಶೇ. 57.9 ಮೊದಲ ಸ್ಥಾನದಲ್ಲಿವೆ. ನಾಗಾಲ್ಯಾಂಡ್ ಶೇ.43.6, ಮೇಘಾಲಯ ಶೇ. 33.6, ಸಿಕ್ಕಿಂ ಶೇ. 24.8, ಉತ್ತರಪ್ರದೇಶ ಶೇ. 22.9 ಇದೆ.
ಟಿ-20 ವಿಶ್ವಕಪ್: ಸ್ಟಾರ್ ಕ್ರಿಕೆಟಿಗನಿಗೆ ವೀಸಾ ನಿರಾಕರಿಸಿದ ಅಮೆರಿಕ..! ಕಾರಣ ಹೀಗಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
