| ಹರೀಶ್ ಬೇಲೂರು ಬೆಂಗಳೂರು
ರಾಜ್ಯದ ಹಲವು ವೈದ್ಯಕೀಯ ಮಹಾವಿದ್ಯಾ ಲಯ, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಬೇಕಾದ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರಿ ಅಕ್ರಮದ ಘಾಟು ಬಡಿದಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ನಿಯಮ ಉಲ್ಲಂಘಿಸಿ ಕೊಟೇಷನ್ ಮೂಲಕ ಹತ್ತಾರು ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣ ಖರೀದಿಸಿರುವುದು ಬೆಳಕಿಗೆ ಬಂದಿದೆ.
ತುರ್ತು ಪರಿಸ್ಥಿತಿಯಲ್ಲಿ ಅತಿ ಅವಶ್ಯಕತೆ ಇದ್ದಾಗ ಹಾಗೂ ಸತತವಾಗಿ ಟೆಂಡರ್ ವಿಳಂಬವಾದರಷ್ಟೇ ಕೊಟೇ ಷನ್ ಮೂಲಕ 1 ಲಕ್ಷ ರೂ. ಒಳಗಿನ ಔಷಧ ಖರೀದಿಗೆ ನಿಯಮದಲ್ಲಿ ಅವಕಾಶವಿದೆ. ಟೆಂಡರ್ ಮೌಲ್ಯ 1 ಲಕ್ಷ ರೂ. ದಾಟಿದರೆ ಕೆಟಿಪಿಪಿ ಕಾಯ್ದೆಯಂತೆ ಆನ್​ಲೈನ್​ನಲ್ಲಿ ಟೆಂಡರ್ ನಡೆಸಿ ಅತಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದವರಿಗೆ ಕಾರ್ಯಾದೇಶ ಪತ್ರ ನೀಡಬೇಕು. ಆದರೆ, ಹಲವು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳು, ಕೆಟಿಟಿಪಿ ನಿಯಮ ಪಾಲಿಸದೆ ಕಮಿಷನ್ ಆಸೆಗಾಗಿ ಅರ್ಹತೆ ಇಲ್ಲದ ಕಂಪನಿಗಳಿಗೆ ಕಾರ್ಯಾದೇಶ ಪತ್ರ ನೀಡುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ಸಚಿವರ ಹೆಸರೇಳಿ ಬೆದರಿಕೆ?:ರಾಜ್ಯದ ಕೆಲ ವೈದ್ಯಕಿಯ ಕಾಲೇಜುಗಳಲ್ಲಿ ಜಾಗದ ಕೊರತೆ ಇದ್ದರೂ ಸರಬರಾಜು ಮಾಡಿರುವ ಉಪಕರಣಗಳನ್ನು ಅಳವಡಿಸದೆ ಎಲ್ಲೆಂದರಲ್ಲಿ ಎಸೆಯಲಾಗಿದೆ. ಈ ಪರಿಸ್ಥಿತಿಯಲ್ಲೇ ಆಯಾ ಜಿಲ್ಲೆಗಳಲ್ಲಿರುವ ಮೆಡಿಕಲ್ ಕಾಲೇಜುಗಳ ನಿರ್ದೇಶಕರಿಗೆ ನೇರವಾಗಿ ಕರೆ ಮಾಡುವ ಕೆಲವರು, ಸಚಿವರ ಹೆಸರು ಹೇಳಿಕೊಂಡು ಕೊಟೇಷನ್ ಮೂಲಕ ತಮಗೆ ಟೆಂಡರ್ ನೀಡುವಂತೆ ಬೆದರಿಕೆ ಹಾಕುತ್ತಿರುವ ಬಗ್ಗೆ ದೂರು ಕೇಳಿಬಂದಿವೆ. ಇದಕ್ಕಾಗಿ ಕೆಲವರು ಸಿಂಡಿಕೇಟ್ ರಚಿಸಿಕೊಂಡು ಕೋಟೇಷನ್ ಮೂಲಕ ವರ್ಕ್ ಆರ್ಡರ್ ಪಡೆಯುತ್ತಿದ್ದಾರೆ. ಈ ದಂಧೆಗೆ ಕೆಲ ಮೆಡಿಕಲ್ ಕಾಲೇಜು ನಿರ್ದೇಶಕರು ಒಳಗೊಳಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಬಗ್ಗೆ ಸಚಿವರು ಸೂಕ್ತ ಕ್ರಮ ಕೈಗೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಟೆಂಡರ್ ನಿಯಮವೇ ಬದಲು ಪ್ರತಿ ವರ್ಷ ಸರ್ಕಾರ ವೈದ್ಯಕೀಯ ಕಾಲೇಜುಗಳಿಗೆ ಹತ್ತಾರು ಕೋಟಿ ರೂ. ಅನುದಾನ ನೀಡುತ್ತಿದೆ. ಆದರೆ, ಈ ಅನುದಾನ ದುರ್ಬಳಕೆಯಾಗುತ್ತಿದೆ. ಕೆಲ ವೈದ್ಯಕೀಯ ಕಾಲೇಜುಗಳಲ್ಲಿ ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಳ್ಳಲು ಟೆಂಡರ್ ಷರತ್ತುಗಳನ್ನೇ ಬದಲಾಯಿಸುತ್ತಿವೆ. ಟೆಂಡರ್​ನಲ್ಲಿ ನಿಗದಿಗಿಂತ ಹೆಚ್ಚುವರಿ ಮೊತ್ತ ನಮೂದಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಲಾಗುತ್ತಿದೆ.
ಎಲ್ಲೆಲ್ಲಿ ನಿಯಮ ಉಲ್ಲಂಘನೆ?: ಬಳ್ಳಾರಿಯ ವಿಮ್ಸ್, ಮೈಸೂರಿನ ಕೆ.ಆರ್.ಆಸ್ಪತ್ರೆ, ಬೀದರ್ ಮೆಡಿಕಲ್ ಕಾಲೇಜು, ಹುಬ್ಬಳ್ಳಿ ಮೆಡಿಕಲ್ ಕಾಲೇಜು, ಬೆಂಗಳೂರು ವೈದ್ಯಕೀಯ ಕಾಲೇಜು, ಹೊಸ ದಾಗಿ ಆರಂಭವಾಗಿರುವ ಮೆಡಿಕಲ್ ಕಾಲೇಜು, ಆಸ್ಪತ್ರೆಗಳು.
110 ಕೋಟಿ ರೂಪಾಯಿ ಮೀರಿದ ಖರೀದಿ: ಬೆಂಗಳೂರಿನ ಮೆಡಿಕಲ್ ಕಾಲೇಜೊಂದು 2022ರಿಂದ 2024ರವರೆಗೆ 100 ಕೋಟಿ ರೂ.ಗಿಂತ ಹೆಚ್ಚು ಔಷಧ, ಉಪಕರಣ, ರಾಸಾಯನಿಕ ಖರೀದಿಸಿರುವುದು ಆರ್​ಟಿಐ ಮಾಹಿತಿಯಲ್ಲಿ ತಿಳಿದುಬಂದಿದೆ. ಕಂಪನಿಗಳು ಔಷಧ ಸರಬರಾಜು ಮಾಡಿರುವ ಬಗ್ಗೆ ಹಣ ಪಾವತಿಸಿರುವುದು, ಕೆಲ ಬಿಲ್​ಗಳಿಗೆ ಲಕ್ಷಾಂತರ ರೂ. ಜಮೆ ಮಾಡಿರುವುದು ದಾಖಲೆಯಲ್ಲಿ ಬಹಿರಂಗವಾಗಿದೆ. ಆದರೆ, ಟೆಂಡರ್ ಅಥವಾ ಕೊಟೇಷನ್ ಮೂಲಕ ಔಷಧ, ಉಪಕರಣ, ರಾಸಾಯನಿಕ ಖರೀದಿಸಿರುವುದರ ಬಗ್ಗೆ ಬಿಎಂಸಿಆರ್​ಐ ಯಾವುದೇ ಮಾಹಿತಿ ನೀಡಿಲ್ಲ.
1.ವೈದ್ಯ ಕಾಲೇಜು, ಆಸ್ಪತ್ರೆ ಸಮಸ್ಯೆಗಳ ಆಗರ ? ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಸೌಲಭ್ಯ ? ವೈದ್ಯ ಉಪಕರಣ ನಿರ್ವಹಣೆಗೆ ಸಿಬ್ಬಂದಿ ಇಲ್ಲ ? ವೈದ್ಯರ ಜತೆಗೆ ಸಿಬ್ಬಂದಿ ಕೊರತೆಯೂ ಕಾಡ್ತಿದೆ ? ಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ
2. ಕೆಲ ವೈದ್ಯ ಕಾಲೇಜಲ್ಲಿ ಉಪಕರಣಕ್ಕೆ ಜಾಗವಿಲ್ಲ
3. ಈ ಸ್ಥಿತಿಯಲ್ಲಿ ಹೊಸ ಉಪಕರಣ ಬಳಕೆ ಹೇಗೆ?
. ವೈದ್ಯ ಉಪಕರಣ ಖರೀದಿ ನಿಯಮ ಉಲ್ಲಂಘನೆ
. ಕೊಟೇಷನ್ ಮೂಲಕ ಖರೀದಿಗೆ ನಿಯಮವಿದೆ
. ಎಮರ್ಜೆನ್ಸಿ, ಟೆಂಡರ್ ವಿಳಂಬವಾದರಷ್ಟೇ ಅವಕಾಶ
. 1 ಲಕ್ಷ ರೂ.ಒಳಗಿನ ಖರೀದಿಗೆ ಮಾತ್ರ ಅವಕಾಶ
. ಟೆಂಡರ್ ಮೌಲ್ಯ 1 ಲಕ್ಷ ರೂ.ದಾಟುವಂತಿಲ್ಲ
. 1 ಲಕ್ಷ ರೂ.ದಾಟಿದರೆ ಆನ್​ಲೈನ್ ಟೆಂಡರ್ ಕಡ್ಡಾಯ
. ಅತಿ ಕಡಿಮೆ ಮೊತ್ತದ ಬಿಡ್​ಗೆ ಕಾರ್ಯಾದೇಶ ನೀಡಬೇಕು
. ಹಲವೆಡೆ ಕೆಟಿಟಿಪಿ ನಿಯಮ ಪಾಲನೆ ಆಗಿಲ್ಲ
. ಕಮಿಷನ್ ಆಸೆಗಾಗಿ ಅರ್ಹತೆ ಇಲ್ಲದವರಿಗೆ ಅವಕಾಶ
. ಬೇಕಾದವರಿಗೆ ಅವಕಾಶ ಮಾಡಿಕೊಟ್ಟು ಕಳ್ಳಾಟ
ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯ ವೀಕ್ಷಿಸಿದ ಸಿಎಂ ಸಿದ್ಧರಾಮಯ್ಯ, ನಟ ಶಿವರಾಜ್​ಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
