ಕಾಸರಗೋಡು:ಕೋವಿಡ್​-19 ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್​ನಲ್ಲಿದ್ದ ಒಂದೂವರೆ ವರ್ಷದ ಮಗುವಿಗೆ ವಿಷಪೂರಿತ ಹಾವು ಕಚ್ಚಿದೆ.
ಪಾಣತ್ತೂರು ಬಳಿ ವಟ್ಟಂಕಯ ಎಂಬಲ್ಲಿ ಮಗುವಿಗೆ ಹಾವು ಕಡಿದಾಗ ಪೋಷಕರು ನೆರವಿಗಾಗಿ ಮೊರೆ ಹೋದರೂ, ಪಕ್ಕದ ಮನೆಯವರು ಕರೊನಾ ಸೋಂಕಿನ ಭೀತಿಯಲ್ಲಿ ಮಗುವನ್ನು ಮುಟ್ಟಲು ಮುಂದೆ ಬರಲಿಲ್ಲ. ಆದರೆ, ಅಲ್ಲೇ ಇದ್ದ ಇನ್ನೋರ್ವ ನೆರೆಮನೆ ನಿವಾಸಿ ಜಿತಿನ್​ ಮ್ಯಾಥ್ಯೂ ಎಂಬುವರು ಮಗುವಿನ ನೆರವಿಗೆ ಧಾವಿಸಿದರು.
ಇದನ್ನೂ ಓದಿರಿತಾರಕಕ್ಕೇರಿದೆ ‘ಕುದುರೆ’ ವಿಷ್ಯ; ಜನರಿಂದ ತಿರಸ್ಕರಿಸಲ್ಪಟ್ಟ ಸಿ.ಪಿ.ಯೋಗೇಶ್ವರ್ ‘ಸತ್ತ ಕುದುರೆ’!
ಮಗುವಿಗೆ ಹಾವು ಕಚ್ಚಿದೆ ಎಂಬ ಸುದ್ದಿ ತಿಳಿದ ಕೂಡಲೇ ಕರೊನಾ ಸೋಂಕು ಹರಡುವ ಭೀತಿಯನ್ನೂ ಲೆಕ್ಕಿಸದೆ ಜಿತಿನ್​ ಮ್ಯಾಥ್ಯೂ ಎಂಬುವವರು ಆಂಬುಲೆನ್ಸ್​ ಮೂಲಕ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಆತನನ್ನೂ ಕ್ವಾರಂಟೈನ್​ಗೆ ಒಳಗಾಗುವಂತೆ ಜಿಲ್ಲಾಡಳಿತ ತಿಳಿಸಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಮಗು ಜೀವಾಪಾಯದಿಂದ ಪಾರಾಗಿದೆ.
ಕರೊನಾ ಸಂಕಷ್ಟ ಕಾಲದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗುವಿಗೆ ಪ್ರಾಣ ಉಳಿಸಿದ ಜಿತಿನ್​ ಮ್ಯಾಥ್ಯೂ ಅವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಗೊರವನಹಳ್ಳಿ ದೇಗುಲ ಸೀಲ್​ಡೌನ್, ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಯುವುದು ಅನುಮಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
