ಹುಬ್ಬಳ್ಳಿ:‘ಹಾವು…’ ಎಂಬ ಹೆಸರು ಕೇಳಿದ್ರೆ ಸಾಕು ಹಲವರು ಬೆಚ್ಚಿಬೀಳ್ತಾರೆ. ಇನ್ನು ಪ್ರತ್ಯಕ್ಷವಾಗಿ ಹಾವುನ್ನು ಕಂಡರೆ ಮಾರುದ್ದ ಓಡಿಹೋಗ್ತಾರೆ. ಅಂತಹದ್ದರಲ್ಲಿ ಇಲ್ಲೊಬ್ಬ ಭೂಪ ಎಲ್ಲೇ ಹಾವು ಕಂಡರೂ ಅದನ್ನು ಹಿಡಿದು ಚೆಲ್ಲಾಟವಾಡುತ್ತಿದ್ದ. ಕೊನೆಗೇ ಆ ಹಾವಿನಿಂದಲೇ ಪ್ರಾಣಬಿಟ್ಟಿದ್ದಾನೆ. ಸಾಯುವ ಮುನ್ನ ಆ ಹಾವನ್ನೂ ಕೊಂದಿದ್ದಾನೆ.
ಹೌದು ಇಂತಹದ್ದೊಂದು ವಿಚಿತ್ರ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಸಿದ್ದಪ್ಪ ತಳವಾರಗೆ ಹಾವುಗಳೊಂದಿಗೆ ಚೆಲ್ಲಾಟವಾಡುವ ಹುಚ್ಚಿತ್ತು. ಹಾವುಗಳು ಎಲ್ಲೇ ಕಂಡರೂ ಅವುಗಳ ಜತೆ ಆಟವಾಡುತ್ತಿದ್ದ.
ಬುಧವಾರ ಕೂಡ ಗ್ರಾಮದಲ್ಲಿ ಹಾವೊಂದು ಕಾಣಿಸಿಕೊಂಡಿತ್ತು. ಹಾವು ಕಂಡರೆ ಭಯವಿಲ್ಲ ಎಂದು ಬೀಗುತ್ತಿದ್ದ ಸಿದ್ದಪ್ಪ ತಳವಾರ, ಊರಲ್ಲಿ ಕಾಣಿಸಿಕೊಂಡ ಹಾವನ್ನು ಆಟವಾಡಿಸಲು ಹೋಗಿದ್ದ. ರೊಚ್ಚಿಗೆದ್ದ ಹಾವು ಸಿದ್ದಪ್ಪನನ್ನು ಕಚ್ಚಿದೆ. ಇದರಿಂದ ಸಿಟ್ಟಾದ ಸಿದ್ದಪ್ಪ, ಆ ಹಾವನ್ನು ತಾನೇ ಕೊಂದು ಹಾಕಿದ. ಅಷ್ಟರಲ್ಲಿ ಹಾವಿನ ವಿಷ ದೇಹಕ್ಕೆ ಹರಡಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದ.
ಒಂದೆಡೆ ಹಾವು, ಮತ್ತೊಂದೆಡೆ ಸಿದ್ದಪ್ಪ ಶವವಾಗಿ ಬಿದ್ದಿದ್ದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಲಘಟಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
