ಚನ್ನಗಿರಿ:ಟಿವಿ ಧಾರಾವಾಹಿಯ ನಾಗಿಣಿ ಕಥಾನಕದ ದೃಶ್ಯ ಕಟ್ಟಿಕೊಟ್ಟಂತೆ ಚನ್ನಗಿರಿ ತಾಲೂಕು ದಿಗ್ಗೇನಹಳ್ಳಿಯಲ್ಲಿ ಶುಕ್ರವಾರ ಘಟನೆಯೊಂದು ಜರುಗಿದ್ದು, ಟ್ರ್ಯಾಕ್ಟರ್ ಚಕ್ರಕ್ಕೆ ಬಾಲ ಸಿಲುಕಿ ಸಿಟ್ಟಿಗೆದ್ದ ನಾಗರಹಾವು ಚಾಲಕನ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿ ಕೊನೆಗೆ ತಾನೇ ಜೀವತೆತ್ತಿದೆ.
ಹೊನ್ನೇಬಾಗಿ ಗ್ರಾಮದ ಗ್ರಾಪಂ ಅಧ್ಯಕ್ಷ ರಾಜಪ್ಪ ದಿಗ್ಗೇನಹಳ್ಳಿ ಬಳಿಯ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಟ್ರ್ಯಾಕ್ಟರ್​ನಲ್ಲಿ ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ನಾಗರಹಾವಿನ ಬಾಲದ ಮೇಲೆ ಚಕ್ರ ಹರಿದಿದೆ. ಸಿಟ್ಟಿಗೆದ್ದ ಹಾವು ಚಲಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬಾಲಿಸಿ ಚಾಲಕ ಇರುವಲ್ಲಿಗೆ ಧಾವಿಸಿದೆ.
ಇದನ್ನು ಗಮನಿಸಿದ ಚಾಲಕ ಟ್ರ್ಯಾಕ್ಟರ್ ನಿಲ್ಲಿಸಿ ಓಡಿ ಹೋಗಿದ್ದಾನೆ. ಆತನ ಕೂಗಾಟ ಕೇಳಿ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಿ ಹಾವು ಟ್ರ್ಯಾಕ್ಟರ್​ನ ಸೀಟಿನ ಮೇಲೆ ಹತ್ತಿ ಗಂಟೆಗೂ ಹೆಚ್ಚುಕಾಲ ಬುಸುಗುಟ್ಟುತ್ತಾ ಕುಳಿತಿದೆ. ಹಾವು ಚಾಲಕನನ್ನು ಬಿಡುವುದಿಲ್ಲ ಎಂದು ಭಾವಿಸಿದ ಜನರು ಅದನ್ನು ಹೊಡೆದು ಕೊಂದುಹಾಕಿದ್ದಾರೆ.
ಕ್ಯಾನ್ಸರ್​ ಗೆಲ್ಲಲಾಗದೆ ಅಸುನೀಗಿದ ಶೌರ್ಯ ಪದಕ ವಿಜೇತ, ಅಂತಿಮ ದರ್ಶನಕ್ಕೆ 2 ಸಾವಿರ ಕಿ.ಮೀ. ದೂರದಿಂದ ಬರುತ್ತಿರುವ ಪಾಲಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
