ಕುಣಿಗಲ್​(ತುಮಕೂರು):ಕಲ್ಲುನಾಗರ ಕಂಡರೆ ಹಾಲನ್ನೆರೆದು ಕೈ ಮುಗಿಯುವರು, ನಿಜ ನಾಗರ ಕಂಡರೆ ದೂರ ಸರಿಯುವರು ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ಹಾಗಿಲ್ಲ. ಪೂಜೆ ಸಮಯದಲ್ಲಿ ಗಣಪತಿ ಗುಡಿಗೆ ಬಂದು ಹೋಗುತ್ತಿದ್ದ ಹಾವು ಇದೀಗ ಹೆಚ್ಚುಕಾಲ ಬಾಗಿಲಲ್ಲೇ ವಾಸ್ತವ್ಯ ಹೂಡಿದೆ.
ಇಂತಹ ದೃಶ್ಯ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದ ಶ್ರೀ ಜಂಗುಮಹೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಾಣಸಿಗಲಿದೆ. ಮೂಲದೇವರನ್ನು ಹೊರತುಪಡಿಸಿ ಇಲ್ಲಿ ಚಾಮುಂಡೇಶ್ವರಿ, ಗಣಪತಿ, ಶನೈಶ್ವರ, ಆಂಜನೇಯ, ಶ್ರೀವಿಷ್ಣು, ಬಸವೇಶ್ವರ ಸೇರಿದಂತೆ ಏಳೆಂಟು ಪುಟ್ಟ ದೇವಾಲಯಗಳಿವೆ.
ಈ ಎಲ್ಲ ದೇವಾಲಯಗಳಿಗೆ ಹಾವುಗಳೇ ಕಾವಲು ಕಾಯುತ್ತಿವೆ ಎಂದು ನಂಬಿದ್ದಾರೆ ಭಕ್ತರು. ಇಲ್ಲಿನ ಅಶ್ವತ್ಥಕಟ್ಟೆ ಸ್ಥಳ ಬಿರುಕು ಮೂಡಿದ ಕಾರಣಕ್ಕೆ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಶ್ವತ್ಥಕಟ್ಟೆಯಲ್ಲಿ ವಾಸವಿದ್ದ ಹಾವು ಇದೀಗ ಪಕ್ಕದ ಗಣಪತಿ ದೇವಾಲಯದಲ್ಲೇ ಹೆಚ್ಚು ಸಮಯ ಕಳೆಯುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಅಲ್ಲದೆ ದಿನನಿತ್ಯ ಮಧ್ಯರಾತ್ರಿ ನಡೆಯುವ ಪೂಜೆ ಸಮಯದಲ್ಲಿ ದೇವಾಲಯದ ಒಳಗೆ ಬಂದು ಸಂಚರಿಸಿ ವಾಪಸ್​ ತೆರಳುತ್ತೆ. ಈ ದೃಶ್ಯವನ್ನು ಭಕ್ತರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ವೈರಲ್​ ಆಗಿದೆ.
ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ಗೊತ್ತಾ? ಸುಮ್ನೆ ಚಿಕಿನ್​ ತಿನ್ಲಾ…’ ಎಂದ ಸಿದ್ದುಗೆ ಹಿಗ್ಗಾಮುಗ್ಗಾ ತರಾಟೆ

ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
