ದಾವಣಗೆರೆ:ಹಾವು-ಮುಂಗುಸಿ ಕಾಳಗ ಅಂದ್ರೆ ಎಂತಹವರಿಗೂ ಭಯ! ಅವುಗಳ ಪಕ್ಕಕ್ಕೆ ಹೋಗಲೂ ಹಿಂಜರಿಯುತ್ತಾರೆ. ಅಂತಹದ್ದರಲ್ಲಿ ಮುಂಗುಸಿ ಬಾಯಿಂದ ನಾಗರಹಾವನ್ನು ರಕ್ಷಿಸಿವೆ ಕಾಗೆ ಮತ್ತು ಹಂದಿಗಳ ಹಿಂಡು.
ಅಪಾಯದಲ್ಲಿದ್ದ ನಾಗರಹಾವನ್ನು ಕಾಗೆ ಮತ್ತು ಹಂದಿಗಳು ರಕ್ಷಿಸುವ ಅಪರೂಪದ ದೃಶ್ಯವನ್ನು ಯುವಕನೊಬ್ಬ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ಏನೇನಿದೆ ಗೊತ್ತಾ?
ಇದನ್ನೂ ಓದಿರಿvideo/ ಬೆಂಕಿಯಲ್ಲಿ ಚಿತ್ರ ಬಿಡಿಸಿ ದಾಖಲೆ ಬರೆದ ಕರ್ನಾಟಕದ ಕುವರ
ಮಣ್ಣಿನ ರಸ್ತೆಯಲ್ಲಿ ಹೋಗುತ್ತಿದ್ದ ನಾಗರಹಾವಿನ ಮೇಲೆರಗಿದ ಮುಂಗುಸಿ ಕಾದಾಟ ಶುರು ಮಾಡುತ್ತಿದ್ದಂತೆ ಕಾಗೆಗಳು ಅಲ್ಲಿಗೆ ಬಂದವು. ಅದರ ಬೆನ್ನಲ್ಲೇ ಸ್ಥಳಕ್ಕೆ ಹಂದಿಗಳ ಹಿಂಡು ಕೂಡ ಆಗಮಿಸಿದವು. ನಾಗರಹಾವನ್ನು ಸುತ್ತುವರಿದ ಕಾಗೆ-ಹಂದಿಗಳು ಮುಂಗುಸಿಯನ್ನು ಓಡಿಸಿವೆ.
ಈ ಘಟನೆ ನಡೆದ ನಿಖರ ಸ್ಥಳದ ಬಗ್ಗೆ ಮಾಹಿತಿ ಇಲ್ಲ. ಕೆಲವರು ದಾವಣಗೆರೆ ತಾಲೂಕಿನ ತುರ್ಚಗಟ್ಟ ಬಳಿ ನಡೆದಿದೆ ಎನ್ನುತ್ತಿದ್ದಾರೆ.
ಮೊಬೈಲ್​ ಕಳ್ಳನ ವಿರುದ್ಧ ಹೋರಾಡಿ ಗೆದ್ದ ಕೂಲಿಕಾರನ ಮಗಳಿಗೆ ಸಿಕ್ತು ಬಂಪರ್​ ಬಹುಮಾನ!

Sign in to your account
Please enter an answer in digits:ten − three =
Remember me
