ಹಾಸನ:ಯಂತ್ರದ ಬಿಡಿಬಾಗದೊಳಗೆ ಸಿಲುಕಿದ್ದ ಹಾವನ್ನು ರಕ್ಷಿಸಲು ಬಂದ ಉರಗ ರಕ್ಷಕ ಸ್ನೇಕ್ ಶೇಷಪ್ಪ ಅವರಿಗೆ ನಾಗರಹಾವು ಕಚ್ಚಿದ್ದು, ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.
ಬುಧವಾರ ಮಧ್ಯಾಹ್ನ ಹಾಸನದ ಕೈಗಾರಿಕಾ ಕೇಂದ್ರದ ಕಾರ್ಖಾನೆಯೊಂದರ ಯಂತ್ರದ ಬಿಡಿಭಾಗದೊಳಗೆ ನಾಗರಹಾವು ಸೇರಿಕೊಂಡಿತ್ತು. ಕಾರ್ಖಾನೆಯವರ ಮನವಿ ಮೇರೆಗೆ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸ್ನೇಕ್​ ಶೇಷಪ್ಪ ಬಂದಿದ್ದರು.
ಇದನ್ನೂ ಓದಿರಿVIDEO: ‘ಕೆಂಪು ಹೂವು’ ಚೆಲುವೆಲ್ಲಾ ನಂದೆಂದಿತು… ‘ನೀಲಿ ಹಾವು’ ಅದರ ಸುತ್ತಿಕೊಂಡಿತು…!
ಯಂತ್ರದ ಬಿಡಿಭಾಗದಲ್ಲಿ ಹಾವಿನ ಹೊಟ್ಟೆ ಸಿಲುಕಿತ್ತು. ಅದನ್ನು ಹಿಡಿದ ಶೇಷಪ್ಪ, ಹಾವಿನ ದೇಹಕ್ಕೆ ಸುತ್ತಿಕೊಂಡಿದ್ದ ಕಬ್ಬಿಣವನ್ನು ಬಿಡಿಸುತ್ತಿದ್ದರು. ಈ ವೇಳೆ ಅವರ ಎಡಗೈ ಹೆಬ್ಬೆರಳಿಗೆ ಹಾವು ಕಚ್ಚಿದೆ. ತಮಗೆ ಹಾವು ಕಚ್ಚಿದರೂ ಧೃತಿಗೆಡ ಶೇಷಪ್ಪ, ಹಾವನ್ನು ರಕ್ಷಿಸಿ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು. ಈ ದೃಶ್ಯ ನೋಡಲು ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ.
https://www.facebook.com/VVani4U/videos/242459963870240/
VIDEO|ಶಿರಾ ಬೈ ಎಲೆಕ್ಷನ್​: ಮತ ಕೇಳೋಕೆ ಬಂದ ಮಾಜಿ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − one =
Remember me
