ಬೆಂಗಳೂರು:ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ‌ ಮಾಹಿತಿ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ನೀಡಲು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮುಂದಾಗಿರುವ ಬಗ್ಗೆ ತಿಳಿದುಬಂದಿದೆ.
ಸಿಡಿಯನ್ನು ಐದು ಕೋಟಿ ರೂಪಾಯಿಗೆ ಮೂರು ತಿಂಗಳ ಹಿಂದೆಯೇ ಡೀಲ್ ಮಾಡಲಾಗಿದೆ ಎಂದು ಮಾಜಿ ಸಿಎಂ ಎಚ್​ಡಿಕೆ ಹೇಳಿಕೆ ವಿಚಾರವಾಗಿ ಆಪ್ತರ ಜತೆ ಚರ್ಚಿಸಿದ್ದಾರೆನ್ನಲಾಗಿದೆ. ಎಚ್​ಡಿಕೆ ಮೂರು ತಿಂಗಳಿಂದ ಏನು ಮಾಡ್ತಿದ್ರು? ವಿಷಯ ತಿಳಿದ ತಕ್ಷಣ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಯಾಕೆ ಸುಮ್ಮನಾಗಿದ್ದರು. ವಿನಾಕಾರಣ ಸುಳ್ಳು ಸುಳ್ಳು ಆರೋಪ ಮಾಡಿ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಇದರಿಂದ ನನ್ನನ್ನು ನೋಡುವ ರೀತಿ ಬದಲಾಗಿದೆ. ಇದು ನನಗೆ ಮತ್ತು ನನ್ನ ಕುಟುಂಬದವರಿಗೆ ಮುಜುಗರ ತಂದಿದೆ ಎಂದು ದಿನೇಶ್​ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿರಿ:ಲ್ಯಾಗ್​ ಮಂಜ ಹೇಳಿದ್ದನ್ನು ಕೇಳಿ ಶಾಕ್​ ಆದ ದಿವ್ಯಾ ಸುರೇಶ್​: ಬಾಡಿತು ನಗು ಮುಖ..!
ನಾನು ಈ ಹಿಂದೆ ಹತ್ತಾರು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅದು ದಾಖಲೆಗಳ ಸಮೇತ ನಾನು ಹೋರಾಟ ನಡೆಸಿದ್ದೇನೆ. ಆದ್ರೆ, ಮಾಜಿ ಸಿಎಂ ಕುಮಾರಸ್ವಾಮಿಯವರು ಮಾಡಿರುವ ಆರೋಪ ಎಷ್ಟು ಸರಿ? ಈ ಬಗ್ಗೆ ಕಾನೂನು ಹೋರಾಟ ಮಾಡುವ ಚಿಂತನೆ ನಡೆಸಿರುವುದಾಗಿ ಸ್ನೇಹಿತರ ಜತೆ ದಿನೇಶ್​ ಸಮಾಲೋಚನೆ ನಡೆಸಿದ್ದಾರೆನ್ನಲಾಗಿದೆ.
ಸುದೀರ್ಘ ನಾಲ್ಕು ಪುಟಗಳ ದೂರು ಸಿದ್ಧಪಡಿಸುತ್ತಿರುವ ದಿನೇಶ್​, ದೂರನ್ನ ಎಲ್ಲಿ? ಯಾವಾಗ? ಯಾರಿಗೆ? ಕೊಟ್ಟು ಹೋರಾಟ ಮಾಡಬೇಕೆಂದು ಇಂದು ನಿರ್ಧಾರ ಮಾಡುವುದಾಗಿ ಹೇಳಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆಂದು ಮೂಲಗಳು ತಿಳಿಸಿವೆ.(ದಿಗ್ವಿಜಯ ನ್ಯೂಸ್​)
‘ಮೋದಿ ಕಿ ದುಕಾನ್’​ನಲ್ಲಿ ​​ಕೈಗೆಟಕುವ ಬೆಲೆಯಲ್ಲಿ ಔಷಧಿಗಳು

ಹಾಲುಂಡ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಬಿಕ್ಕಿಬಿಕ್ಕಿ ಅತ್ತ ವಧು ಮಸಣ ಸೇರಿದಳು!

ಪಾಕಿಸ್ತಾನದಲ್ಲಿ ಒಂದೇ ಕುಟುಂಬದ ಐವರು ಹಿಂದುಗಳ ಹತ್ಯೆ: ಬೆಚ್ಚಿಬಿದ್ದ ಸ್ಥಳೀಯ ನಿವಾಸಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
