ಬೆಂಗಳೂರು: ಕೃಷಿ ಸಚಿವ ಬಿ.ಸಿ. ಪಾಟೀಲ್ ಇಂದು ಬೆಳ್ಳಂಬೆಳಗ್ಗೆ ತೋಟಗಾರಿಕಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್,ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ತರಕಾರಿ ಮತ್ತು ಈರುಳ್ಳಿ ಆಲೂಗಡ್ಡೆ ಮಾರುಕಟ್ಟೆಗಳಿಗೆ ಭೇಟಿ ನೀಡಿದರು. ಅಲ್ಲದೇ ಬ್ಯಾಟರಾಯನಪುರ ಹಾಗೂ ದಾಸನಪುರ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾಮಾಜಿಕ ಅಂತರ ಎನ್ನುವುದು ಸ್ವಯಂಪ್ರೇರಣೆಯಾಗಬೇಕು. ಸಾಮಾಜಿಕ ತುರ್ತು ಪರಿಸ್ಥಿತಿ ಇದಾಗಿರುವುದರಿಂದ ನಮ್ಮಷ್ಟಕ್ಕೆ ನಾವು ನಿಬಂಧನೆ ಹಾಕಿಕೊಳ್ಳಬೇಕು. ಪೊಲೀಸರಿಂದಾಗಲೀ ಅಥವಾ ಸರ್ಕಾರದ ಒತ್ತಾಯವಾಗಿ ಆಗಲೀ ಆಗಬಾರದು. ಸಾಮಾಜಿಕ ಅಂತರ ಎನ್ನುವುದು ಕರೊನಾ ಮಹಾಮಾರಿಯ ವಿರುದ್ಧ ಸಮರ ಸಾರಲು ಇರುವ ಏಕೈಕ ಪರಿಹಾರ. ಜನರ ಹಾಗೂ ಸಾಮಾಜಿಕ ಆರೋಗ್ಯದ ಹಿತದೃಷ್ಟಿಯಿಂದಲೇ ಸಾಮಾಜಿಕ ಅಂತರ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ ಎಂಬುದನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವರಿಕೆ ಮಾಡಿಕೊಟ್ಟರು.
ತರಕಾರಿ ಬೆಳೆದ ರೈತರಿಗಾಗಲೀ ಗ್ರಾಹಕರಿಗಾಗಲೀ ಲಾಕ್‌ಡೌನ್ ನಿಂದ ಯಾವುದೇ ತೊಂದರೆಯಾಗಬಾರದೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಿಟ್ಟ ಕ್ರಮಕೈಗೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೃಷಿಕರು ತಮ್ಮ ಕೃಷಿ ಚಟುವಟಿಕೆ ಪರಿಕರ ಮಾರಾಟ‌ ನಡೆಸಲು ಯಾವುದೇ‌ ತೊಂದರೆಯಾಗದು. ಇದನ್ನು ಪರಿಶೀಲನೆ ಮಾಡಲೆಂದು ತಾವು ಹಾಗೂ ಇತರ ಸಚಿವರು ಭೇಟಿ ನೀಡಿದ್ದೇವೆ ಎಂದು ಪಾಟೀಲ್​ ಸ್ಪಷ್ಟಪಡಿಸಿದರು.
ಇಷ್ಟೆಲ್ಲ ಪಾಠ ಮಾಡಿದ ಸಚಿವರು ಮತ್ತು ಅವರ ಜತೆಗಿದ್ದವರು ಸೋಷಿಯಲ್​ ಡಿಸ್ಟೆಂನ್ಸಿಂಗ್​ ಮೇನ್​ಟೇನ್ ಮಾಡಲೇ ಇಲ್ಲ ಎಂಬುದನ್ನು ಸಚಿವರ ಹೇಳಿಕೆಯ ವಿಡಿಯೋದಲ್ಲಿರುವ ದೃಶ್ಯಗಳೇ ಹೇಳುತ್ತವೆ. ಏನೇ ಇರಲಿ, “ಹೇಳುವುದು ಆಚಾರ ತಿನ್ನುವುದು ಬದನೇಕಾಯಿ” ಎಂಬ ಗಾದೆಯನ್ನು ಸಚಿವರು ಮತ್ತು ಅವರ ತಂಡ ಮತ್ತೊಮ್ಮೆ ಸಾಬೀತುಮಾಡಿತು!!!..
ಕರೊನಾ ತಡಗೆ ಏಪ್ರಿಲ್ 5ರ ಸಂಕಲ್ಪ ಏನು- ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ ವಿವರಿಸಿದ್ದಾರೆ ನೋಡಿ…

https://www.instagram.com/p/B-gHrbEHjCB/?utm_source=ig_web_copy_link
ನಿಮ್ಮ ಜಿಲ್ಲೆಯ COVID19 ಸಹಾಯವಾಣಿ ಸಂಖ್ಯೆ ಗೊತ್ತೆ?- ಜಿಲ್ಲಾವಾರು ಸಹಾಯವಾಣಿ ಸಂಖ್ಯೆ ಪ್ರಕಟಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 16 =
Remember me
