ಬೆಂಗಳೂರು:ಸುದ್ದಿಗಳಲ್ಲಿ ನಾವು ಕಾಣುವ ನಕಾರಾತ್ಮಕತೆಗಿಂತಲೂ ಹೆಚ್ಚು ಸಕಾರಾತ್ಮವಾಗಿ ಭಾರತ ಬೆಳೆಯುತ್ತಿದೆ. ಅನಾವಶ್ಯಕವಾಗಿ ನಮ್ಮ ನಾಡು, ನುಡಿಯ ಕುರಿತು ಹಬ್ಬಿಸಲಾಗುತ್ತಿರುವ ಸುಳ್ಳು ಸುದ್ದಿಗಳಿಗೆ ನಮ್ಮ ಅಧ್ಯಯನಾಧಾರಿತ ಧನಾತ್ಮಕ ಉತ್ತರಗಳನ್ನು ನೀಡುವ ಮೂಲಕ ಸಾಮಾಜಿಕ ಜಾಲತಾಣದ ವಾತಾವರಣವನ್ನು ಸಾತ್ವಿಕಗೊಳಿಸುವ ಪ್ರಯತ್ನ ನಮ್ಮಿಂದಾಗಬೇಕು. ಭಾರತದ ಭವಿಷ್ಯವನ್ನು ಕಣ್ಣ ಮುಂದಿರಿಸಿಕೊಂಡು ಭರವಸೆಯ ನಾಳೆಗಳನ್ನು ನಿರ್ಮಿಸುವುದಕ್ಕೆ ಸಾಮಾಜಿಕ ಜಾಲತಾಣವನ್ನು ಸಮರ್ಥ ವೇದಿಕೆಯನ್ನಾಗಿಸಿಕೊಳ್ಳಬೇಕು ಎಂದು ಬೆಂಗಳೂರಿನ ಸಾಮಾಜಿಕ ಜಾಲತಾಣ ವಿಶ್ಲೇಷಕ ಕೆ.ಎಸ್. ಕಿರಣ್ ಹೇಳಿದರು.
ದಿಶಾಭಾರತದ ‘ನನ್ನ ಭಾರತ’ ಯುವ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ಆನ್‌ಲೈನ್ ಉಪನ್ಯಾಸ ಸರಣಿಯಲ್ಲಿ ‘Social Media and Indian Youth’ ಎಂಬ ವಿಷಯದ ಕುರಿತು ಮಾತನಾಡಿದರು.
ಇದನ್ನೂ ಓದಿ:ಭಾರತದ ಏಕತೆಯಲ್ಲಿ ಮಹಿಳೆಯರ ಪಾತ್ರ ಗುರುತರವಾದುದು: ಲೇಖಕಿ ಶುಭ್ರಸ್ತ
ಸಾಮಾಜಿಕ ಜಾಲತಾಣವನ್ನು ನಾವು ಯಾಕಾಗಿ ಬಳಸುತ್ತಿದ್ದೇವೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು. ಜಾಲತಾಣದ ಬಳಕೆ ಸಮಯವನ್ನು ವ್ಯರ್ಥಗೊಳಿಸುವುದಕ್ಕಾಗಿಯಲ್ಲ, ಬದಲಾಗಿ ಸಮಯದ ಸದುಪಯೋಗಕ್ಕಾಗಿ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂ ಮೂಡಬೇಕು. ನಮ್ಮ ಸಾಮಾಜಿಕ ಜಾಲತಾಣಗಳು ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು, ಅವುಗಳು ನಮ್ಮನ್ನು ನಿಯಂತ್ರಿಸುವ ವಿಪರೀತಕ್ಕೆ ನಾವು ಎಡೆಮಾಡಿಕೊಡಬಾರದು ಎಂದು ನುಡಿದರು.
ಸಾಮಾಜಿಕ ಜಾಲತಾಣ ಜಗತ್ತಿನ ಜನರನ್ನು ಒಳಗೊಂಡಿರುವುದರಿಂದ ಜಾಗತಿಕವಾಗಿ ಉತ್ತಮ ಸ್ನೇಹಿತರನ್ನು ಪಡೆಯುವುದಕ್ಕೆ, ಸಾತ್ವಿಕ ವಿಚಾರಗಳನ್ನು, ಆಲೋಚನೆಗಳನ್ನು ತಿಳಿಯುವುದಕ್ಕೆ ಸಹಕಾರಿಯಾಗುತ್ತದೆ. ಹಾಗೆಯೇ ನಿಮ್ಮ ಸುತ್ತಲಿನ ಜನ ಎಂತವರಿರಬೇಕು ಎನ್ನುವುದನ್ನು ಜಾಗ್ರತೆಯಿಂದ ಆಯ್ಕೆ ಮಾಡುವ ಮೂಲಕ ನಕಾರಾತ್ಮಕ ಸಂಗತಿಗಳನ್ನು ಹರಡುವವರಿಂದ ದೂರವಿರಬೇಕಾಗುತ್ತದೆ. ನಮ್ಮ ಪ್ರವೃತ್ತಿಯ ಆಧಾರಿತವಾದ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತಪಡಿಸುವಾಗ ಮೌಲ್ಯಗಳನ್ನು ಜೊತೆಗಿರಿಸಿಕೊಂಡಾಗ ಅದು ಸಾತ್ವಿಕ ವಾತಾವರಣವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fifteen =
Remember me
