ಬೆಂಗಳೂರು:ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ನಿನ್ನೆ (ಫೆ.3) ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯ ಹಿನ್ನೆಲೆ ಸಾಯಿದತ್ತ ಅವರನ್ನು ಜೆ.ಪಿ. ನಗರದ ಸುಪ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ (ಫೆ.3) ತಡರಾತ್ರಿ ವಿಧಿವಶರಾಗಿದ್ದಾರೆ.
ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಸಾಯಿದತ್ತ ಅವರು ಆರ್​​ಟಿಐ ಕಾರ್ಯಕರ್ತರು ಆಗಿದ್ದರು. ಜಾಹೀರಾತು ಮಾಫಿಯಾ ವಿರುದ್ಧ ಬಹು ದೊಡ್ಡ ಹೋರಾಟ ನಡೆಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಅವರು ಶಾಸಕ ಗರುಡಾಚಾರ್​ ಅವರ ಆಪ್ತ ಸಹಾಯಕರಾಗಿದ್ದರು.
ದೇವೇಗೌಡ ಪೆಟ್ರೋಲ್​ ಬಂಕ್​ ಬಳಿ ಇರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ. ಸಾಯಿದತ್ತ ಅವರ ಸಾವಿಗೆ ಕುಟುಂಬ, ಬಂಧು-ಬಳಗ ಹಾಗೂ ಆಪ್ತರು ಕಂಬನಿ ಮಿಡಿದಿದ್ದಾರೆ.
ಪ್ರೀತಿಸಿ ಕೈಕೊಟ್ಟ ಶಾಸಕನಿಗೆ ಶಾಕ್​ ಕೊಟ್ಟ ಹೈಕೋರ್ಟ್​! ಕೊನೆಗೂ ಯುವತಿಯ ಹೋರಾಟಕ್ಕೆ ಸಿಕ್ತು ಜಯ

ಮತ್ತೆ ಕಮಿಷನ್ ಸದ್ದು: ಕಲಾವಿದರನ್ನೂ ಬಿಡದ ಪರ್ಸೆಂಟೇಜ್​; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಅಮಾನತು

ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಪತ್ನಿ, ಪತಿ ಸಜೀವ ದಹನ: ನಿಗೂಢ ಭೇದಿಸಲಾಗದೇ ಅಧಿಕಾರಿಗಳು ಕಂಗಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
