|ಹರೀಶ್ ಬೇಲೂರುಬೆಂಗಳೂರು
ಮಗಳ ಮದುವೆಗೋ, ಮಗನ ವಿದ್ಯಾಭ್ಯಾಸಕ್ಕೋ ಅಥವಾ ಹೊಸ ಮನೆ ಕಟ್ಟಲೆಂದೋ ದುಡಿದಿಟ್ಟಿದ್ದ ಹಣವನ್ನೆಲ್ಲ ‘ಠೇವಣಿ’ ಇರಿಸಿದ ಬ್ಯಾಂಕೇ ದಿವಾಳಿಯಾದರೆ ಹಣ ಕಟ್ಟಿದವರ ಪರಿಸ್ಥಿತಿ ಏನಾಗಬೇಡ? ರಾಜ್ಯದಲ್ಲಿ ಕೋ-ಆಪರೇಟಿವ್ ಸೊಸೈಟಿಗಳ ಸಾಲುಸಾಲು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಪರಿಣಾಮ ಗ್ರಾಹಕರ ದುಡ್ಡಿಗೆ ಗ್ಯಾರಂಟಿ ಇಲ್ಲದಾಗಿದೆ. ಸಹಕಾರಿ ರಂಗ, ರೈತರಿಗೆ ಜೀವಾಳವಾಗಬೇಕಿದ್ದ 3,509 ಸಹಕಾರಿ ಸೊಸೈಟಿಗಳು ದಿವಾಳಿಯಾಗಿವೆ. ಇದರಿಂದಾಗಿ ಲಕ್ಷಾಂತರ ಠೇವಣಿದಾರರು ಅತಂತ್ರವಾಗಿದ್ದಾರೆ.
ರಾಜ್ಯದಲ್ಲಿ ವಿವಿಧ ಬಗೆಯ ಕೋ-ಆಪರೇಟಿವ್ ಸೊಸೈಟಿ ಮತ್ತು ಸಹಕಾರ ಸಂಘಗಳು ಸೇರಿ 45,088 ಸೊಸೈಟಿಗಳಿವೆ. ಇದರಲ್ಲಿ 37,532 ಕಾರ್ಯನಿರ್ವಹಿಸುತ್ತಿವೆ. 2,460 ಸೊಸೈಟಿಗಳು ನಷ್ಟದ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ. ಅತಿ ಹೆಚ್ಚು ಸಾಲ ಪಡೆದು ಬಾಕಿ ಉಳಿಸಿಕೊಂಡಿರುವವರ ಪೈಕಿ ಆಡಳಿತ ಮಂಡಳಿಯ ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಕ್ರಮವಾಗಿ ಸಂಬಂಧಿಕರಿಗೆ ಮತ್ತು ಕುಟುಂಬದ ಸದಸ್ಯರಿಗೆ ಹೆಚ್ಚಾಗಿ ಸಾಲ ನೀಡಲಾಗಿದೆ. ಈ ಸಾಲಗಾರರು ಸಾಲ ಮರುಪಾವತಿಸದೆ ಒಂದಿಲ್ಲೊಂದು ಕುಂಟುನೆಪ ಹೇಳಿ ನುಣುಚಿಕೊಳ್ಳುತ್ತಿರುವುದು ಸೊಸೈಟಿಗಳ ದಿವಾಳಿಗೆ ಮುಖ್ಯ ಕಾರಣವಾಗಿದೆ.
ಲೆಕ್ಕ ಪರಿಶೋಧನೆ ಆಗಿಲ್ಲ:18 ಬಹು-ರಾಜ್ಯ ಮಟ್ಟದ ಸೊಸೈಟಿ, 270 ರಾಜ್ಯ ಮಟ್ಟದ ಸೊಸೈಟಿ, 602 ಜಿಲ್ಲಾ ಮಟ್ಟ ಮೀರಿ ರಾಜ್ಯ ಮಟ್ಟದ ಒಳಗಿರುವ ಸೊಸೈಟಿ, 643 ಜಿಲ್ಲಾ ಮಟ್ಟದ ಸೊಸೈಟಿ, 1,317 ತಾಲ್ಲೂಕು ಮಟ್ಟ ಮೀರಿ ಜಿಲ್ಲಾ ಮಟ್ಟ ಒಳಗಿರುವ ಸೊಸೈಟಿ, 2,900 ತಾಲೂಕು ಮಟ್ಟದ ಸೊಸೈಟಿ ಹಾಗೂ 36,801 ತಾಲೂಕು ಮಟ್ಟಕ್ಕಿಂತ ಕಡಿಮೆ ಇರುವ ಸೊಸೈಟಿ ಸೇರಿ ಒಟ್ಟು 42,551 ಸೊಸೈಟಿಗಳಿವೆ. ಇದರಲ್ಲಿ 25,272 ‘ಎ’ ವರ್ಗೀಕರಣ, 11,496 ‘ಬಿ’ ವರ್ಗೀಕರಣ, 20,603 ‘ಸಿ’ ವರ್ಗೀ ಕರಣ ಹಾಗೂ 3,609 ‘ಡಿ’ ವರ್ಗೀಕರಣಗಳಾಗಿ ವಿಂಗಡಿಸಲಾಗಿದೆ. ಜತೆಗೆ, 4,235 ‘ಎನ್’ ವರ್ಗೀಕರಣದಲ್ಲಿ ಲೆಕ್ಕ ಪರಿಶೋಧನೆಯಾಗದೆ ಉಳಿದಿರುವ ಸೊಸೈಟಿಗಳಿವೆ ಎಂದು ಸಹಕಾರ ಇಲಾಖೆ ನೀಡಿರುವ ಅಂಕಿ ಅಂಶಗಳಲ್ಲಿ ತಿಳಿದುಬಂದಿದೆ.
ನವೀಕರಣ ಇಲ್ಲ:ಸಹಕಾರ ಇಲಾಖೆ ನಿಯಮದಂತೆ ಪ್ರತಿ ವರ್ಷ ಸಹಕಾರ ಸಂಘ ಹಾಗೂ ಸೊಸೈಟಿಗಳ ನೋಂದಣಿ ಕಡ್ಡಾಯ. ಆದರೆ, ಸಾವಿರಾರು ಸೊಸೈಟಿಗಳು ನವೀಕರಣ ಮಾಡಿಸಿಕೊಂಡಿಲ್ಲ. ಇದರಿಂದ ಶುಲ್ಕವಾಗಿ ಬರಬೇಕಿದ್ದ ನೂರಾರು ಕೋಟಿ ರೂ. ಆದಾಯ ಖೋತಾ ಆಗಿದೆ.
50 ವಿವಿಧ ಬಗೆಯ ಸಂಘಗಳು:15 ಬಹುರಾಜ್ಯಮಟ್ಟದ ಸಹಕಾರ ಸಂಘ, 44 ಸಹಕಾರ ಮಹಾ ಮಂಡಳ, 21 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, 180 ಗ್ರಾಮೀಣ ಬ್ಯಾಂಕ್, 5844 ಕೃಷಿ ಪತ್ತಿನ ಸಹಕಾರ ಬ್ಯಾಂಕ್, 25 ಲ್ಯಾಂಪ್ಸ್ ಸಹಕಾರ ಬ್ಯಾಂಕ್, 43 ರೇಷ್ಮೆ ಬೆಳೆಗಾರರ ಬ್ಯಾಂಕ್, 105 ಸಹಕಾರ ಗ್ರೇನ್ ಬ್ಯಾಂಕ್, 284 ಪಟ್ಟಣ ಸಹಕಾರ ಬ್ಯಾಂಕ್, 3554 ಪತ್ತಿನ ಸಹಕಾರ ಬ್ಯಾಂಕ್, 1258 ನೌಕರರ ಪತ್ತಿನ ಬ್ಯಾಂಕ್, 243 ಟಿಎಪಿಸಿಎಂಎಸ್, 106 ಮಾರಾಟ ಸಹಕಾರ ಬ್ಯಾಂಕ್, 37 ಸಹಕಾರಿ ಸಕ್ಕರೆ ಕಾರ್ಖಾನೆ, 156 ಸಂಸ್ಕರಣ ಸಹಕಾರ ಸಂಘ, 16 ಸಹಕಾರಿ ನೂಲಿನ ಗಿರಣಿ ಸೇರಿ 50 ವಿವಿಧ ಬಗೆಯ ಸಂಘಗಳಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 10 =
Remember me
