|ಹರೀಶ್ ಬೇಲೂರುಬೆಂಗಳೂರು
ಸೊಸೈಟಿಗಳಲ್ಲಿನ ಸಾರ್ವಜನಿಕರ ಠೇವಣಿ ಹಣಕ್ಕೆ ಸಂಚಕಾರ ಬಂದಿರುವ ಕುರಿತು ವಿಜಯವಾಣಿ ಪ್ರಕಟಿಸುತ್ತಿರುವ ಸರಣಿ ವರದಿಗೆ ರಾಜ್ಯಾದ್ಯಂತ ಪ್ರಶಂಸೆ ಸುರಿಮಳೆಯಾಗುತ್ತಿರುವ ಬೆನ್ನಲ್ಲೇ ಸೊಸೈಟಿಗಳ ಅಕ್ರಮದ ಇನ್ನಷ್ಟು ಹೊಸ ಹೊಸ ಆಯಾಮಗಳೂ ತೆರೆದುಕೊಳ್ಳಲಾರಂಭಿಸಿವೆ. ಸಹಕಾರಿ ಇಲಾಖೆಯ ಅಧಿಕಾರಿ ಹಾಗೂ ಸೊಸೈಟಿಗಳ ಸಿಬ್ಬಂದಿಯೇ ಹೇಗೆಲ್ಲ ಅವ್ಯವಹಾರ ನಡೆಯುತ್ತದೆ ಎಂಬ ಮತ್ತಷ್ಟು ಸ್ವಾರಸ್ಯಕರ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಕಪ್ಪು ಹಣವನ್ನು ಬಿಳಿಯಾಗಿಸಿಕೊಳ್ಳಲು ಹಾಗೂ ಚುನಾವಣೆಗೆ ಹಣ ಪೂರೈಸಲು ಠೇವಣಿ ಹಣ ಬಳಸಿ ಕೊಳ್ಳುತ್ತಿರುವುದರ ಜತೆಗೆ ದೊಡ್ಡಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಹಣ ಹೂಡಿಕೆಯಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಬೇನಾಮಿ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು, ಪೂರಕ ದಾಖಲೆ ಸೃಷ್ಟಿಸಿ ಸಾವಿರಾರು ಕೋಟಿ ರೂ. ಹಣವನ್ನು ಪ್ರತಿವರ್ಷ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಸೊಸೈಟಿಗಳ ಅಧ್ಯಕ್ಷರು, ನಿರ್ದೇಶಕರು, ಬಡ್ಡಿ ಬರುತ್ತದೆಂಬ ಕಾರಣಕ್ಕೆ ಬೇರೆ ಸೊಸೈಟಿಗಳಲ್ಲಿ ನಿಶ್ಚಿತ ಠೇವಣಿ ಇಟ್ಟಿರುವಂತೆ ದಾಖಲೆ ಸೃಷ್ಟಿಸಿ ಆ ಹಣವನ್ನೂ ರಿಯಲ್ ಎಸ್ಟೇಟ್​ಗೂ ಬಳಸಿಕೊಳ್ಳುತ್ತಿದ್ದಾರೆ.
ಗುಪ್ತ ಗುಪ್ತ ಹೇಗೆ?:ಯಾರಿಗೂ ಅನುಮಾನ ಬರದಂತೆ ಠೇವಣಿ ಇಟ್ಟಿರುವ ದಾಖಲೆಗಳನ್ನು ಮೇಲ್ವಿಚಾರಣೆ ನಡೆಸಲು ತಮಗೆ ಬೇಕಾದ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಳ್ಳುತ್ತಾರೆ. ಹಾಗಾಗಿ, ದಾಖಲೆಗಳ ಪರೀಕ್ಷೆ ವೇಳೆ ನಕಲಿ ಎಂಬುದು ಗೊತ್ತಾದರೂ ಅಕ್ರಮ ಹೊರಬರುವುದಿಲ್ಲ.
ಅಧಿಕಾರಿಗಳ ಲೋಪ:ಬೆಂಗಳೂರಿನ ಪ್ರಮುಖ ಬ್ಯಾಂಕ್ ದಿವಾಳಿಯಾಗುವ ಮುನ್ನ ಆರ್​ಬಿಐ ಅಧಿಕಾರಿಗಳು ಈ ಬ್ಯಾಂಕಿನ ಲೆಕ್ಕಪರಿಶೋಧನೆ ನಡೆಸಿ ಸತತ 3 ವರ್ಷ ಎ+ ಗ್ರೇಡ್ ನೀಡಿದ್ದರು. ಆದರೂ, ಈ ಬ್ಯಾಂಕ್ ದಿವಾಳಿಯಾಯಿತು. ಒಂದು ವೇಳೆ ಲೆಕ್ಕಪರಿಶೋಧನೆ ನಡೆಸಿದ್ದ ಸಂದರ್ಭದಲ್ಲಿ ಭ್ರಷ್ಟರ ವಿರುದ್ಧ ಅಥವಾ ಬ್ಯಾಂಕಿನಲ್ಲಿ ಕಂಡುಬಂದ ಲೋಪದೋಷವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಂಡಿದ್ದರೆ ಈ ಬ್ಯಾಂಕ್ ದಿವಾಳಿಯಾಗುತ್ತಿರಲಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಆರ್​ಬಿಐನವರು ಸರಿಯಾಗಿ ಲೆಕ್ಕಪರಿಶೋಧನೆ ನಡೆಸಿದರಷ್ಟೇ ಇಂತಹ ಪ್ರಕರಣಗಳಿಗೆ ಬ್ರೇಕ್ ಬೀಳುತ್ತದೆ.
ಬೇಕಿದೆ ಕಾನೂನು ಬಲ:ಅಧ್ಯಕ್ಷ ಹಾಗೂ ನಿರ್ದೇಶಕ ಆಗಿರುವವರು ಸೊಸೈಟಿಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕುಟುಂಬ ಸದಸ್ಯರನ್ನು ಅಥವಾ ರಕ್ತ ಸಂಬಂಧಿಗಳನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಕಾನೂನು ತರಬೇಕಿದೆ. ಸೌಹಾರ್ದ ಆಕ್ಟ್​ನಲ್ಲಿ ಹೆಚ್ಚು ಲೋಪದೋಷಗಳಿವೆ. ಇವುಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು. 64ರಡಿ ದಾಖಲಾದ ಪ್ರಕರಣಗಳಲ್ಲಿ ಸಮರ್ಪಕವಾಗಿ ಯಾರಿಗೂ ಶಿಕ್ಷೆಯಾಗುತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಕಡಿಮೆಯಾಗಲು ಕಾನೂನಿನ ಲೋಪವಾಗಿದ್ದು, ತಿದ್ದುಪಡಿ ತರಬೇಕಿದೆ. ಕಮಿಷನ್ ಮತ್ತು ಲಂಚಕ್ಕಾಗಿ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಆಡಳಿತ ಮಂಡಳಿಗೆ ಭಯ ಹುಟ್ಟಿಸಿ 64 ಹಾಗೂ 65 ಪ್ರಕರಣ ದಾಖಲಿಸುತ್ತಿರುವ ಆರೋಪಗಳಿವೆ. ಇದನ್ನು ಸರಿಪಡಿಸಬೇಕಿದೆ. ಸದಸ್ಯರ ಖಾತೆಯಲ್ಲಿ ಪ್ರತಿ ವರ್ಷ ಹಣಕಾಸು ವಹಿವಾಟು ನಡೆಸಬೇಕೆಂಬ ಹೊಸ ಕಾನೂನು ತರಲಾಗಿದೆ. ಇದು ಅವ್ಯವಹಾರ ನಡೆಸಲು ಇನ್ನಷ್ಟು ಸಹಕಾರಿಯಾಗಿದೆ.
ಬೇಕಾಬಿಟ್ಟಿ ವರದಿ:ಸೊಸೈಟಿಗಳ ಹಣಕಾಸು ವ್ಯವಹಾರದ ಬಗ್ಗೆ ಸಮರ್ಪಕ ವಾಗಿ ಲೆಕ್ಕಪರಿಶೋಧನೆ ನಡೆಸಲಿಲ್ಲ ಎಂಬ ಕಾರಣ ಕ್ಕಾಗಿಯೇ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ 80 ಲೆಕ್ಕ ಪರಿಶೋಧಕರನ್ನು ಅನರ್ಹಗೊಳಿಸಲಾಗಿದೆ. ಅಲ್ಲದೇ, ಇವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಹಣದಾಸೆಗೆ ಲೆಕ್ಕ ಪರಿಶೋಧಕರು ಸಮರ್ಪಕವಾಗಿ ಮಾಹಿತಿಯನ್ನು ಪಡೆಯದೆ ಬೇಕಾಬಿಟ್ಟಿ ಅನುಪಾಲನಾ ವರದಿ ಗಳನ್ನು ಇಲಾಖೆಗೆ ನೀಡಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ.
ನಿರ್ದಿಷ್ಟ ಮಾನದಂಡ ಇಲ್ಲ:ಇತ್ತೀಚಿನ ವರ್ಷಗಳಲ್ಲಿ ಸೌಹಾರ್ದ ಕಾಯ್ದೆಯಡಿ ಹೆಚ್ಚು ಸೊಸೈಟಿಗಳು ನೋಂದಣಿ ಆಗುತ್ತಿವೆ. ಆದರೆ, ಈ ಸೊಸೈಟಿಗಳಿಗೆ ನಿರ್ದಿಷ್ಟ ಮಾನದಂಡ ಇಲ್ಲದಂತಾಗಿದೆ. ಸೊಸೈಟಿಗಳಲ್ಲಿ ನಾಮ್ೇವಾಸ್ತೆ ಎಂಬಂತೆ ದಾಖಲೆ ಪಡೆದು ಖಾತೆ ತೆರೆಯಲಾಗುತ್ತಿದೆ. ಈ ಖಾತೆಗಳಲ್ಲಿ ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ಕೋಟ್ಯಂತರ ರೂ. ವರ್ಗಾವಣೆ ಮಾಡಲಾಗುತ್ತಿದೆ. ಸೊಸೈಟಿಗಳಲ್ಲಿ ನಡೆಯುವ ಹಣ ದುರ್ಬಳಕೆ ಪ್ರಕರಣಗಳನ್ನು 64 ಹಾಗೂ 65ರಡಿ ವಿಚಾರಣೆ ನಡೆಸಲು ಆದೇಶಿಸುವಂತಿಲ್ಲ. ಇದರಿಂದ ಕೋಟ್ಯಂತರ ರೂ.ದುರ್ಬಳಕೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.
ಆರ್​ಬಿಐ ವ್ಯಾಪ್ತಿಗೆ ಬರಲ್ಲ:ಆರ್​ಬಿಐ ವ್ಯಾಪ್ತಿಗೆ ರಾಷ್ಟ್ರೀಕೃತ ಬ್ಯಾಂಕ್​ಗಳು, ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಷೆಡ್ಯೂಲ್ಡ್ ಬ್ಯಾಂಕ್​ಗಳು ಬರುತ್ತವೆ. 10 ಲಕ್ಷ ರೂ. ಗೂ ಹೆಚ್ಚು ಆರ್ಥಿಕ ವ್ಯವಹಾರ ನಡೆದರೆ ಆರ್​ಬಿಐಗೆ ಮಾಹಿತಿ ನೀಡುವುದು ಕಡ್ಡಾಯ. ಜತೆಗೆ, ಈ ಬ್ಯಾಂಕ್​ಗಳಿಗೆ ನಿರ್ದಿಷ್ಟ ನಿಯಮಗಳಿವೆ. ಆದರೆ, ಸೊಸೈಟಿಗಳು ಆರ್​ಬಿಐ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ ಲಕ್ಷಾಂತರ ರೂ. ಅರ್ಥಿಕ ವ್ಯವಹಾರ ನಡೆದರೂ ಆರ್​ಬಿಐ ಗಮನಕ್ಕೆ ಹೋಗುತ್ತಿಲ್ಲ.
ಕಾರ್ಮಿಕರಿಗೆ ಬೇಸರದ ಸಂಗತಿ: ಇಪಿಎಫ್​ಗೆ 40 ವರ್ಷಗಳಲ್ಲೇ ಅತಿ ಕಡಿಮೆ ಬಡ್ಡಿ!

ಅಭಿಮಾನಿಗಳು ಅಪ್ಪಲಿ ಎಂದೇ ಬಿಡುಗಡೆ ಆಗಲಿದೆ ಅಂದು ಅಪ್ಪು ಬೇಡ ಎಂದಿದ್ದ ಹಾಡು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 14 =
Remember me
