ವಾರದಲ್ಲಿ ಐದುದಿನ ಕೆಲಸ, ಶನಿವಾರ, ಭಾನುವಾರ ಬಂತೆಂದರೆ ಪಬ್‍ಕ್ಲಬ್‍, ಪ್ರವಾಸ. ಎಸಿ ಕೊಠಡಿಯಲ್ಲಿ ಕೆಲಸ, ಕೈತುಂಬ ಸಂಬಳ. ಇದು ಸಾಫ್ಟ್‌ವೇರ್ ಉದ್ಯೋಗಿ ಎಂದಾಗ ನಮ್ಮ ಕಣ್ಣುಮುಂದೆ ಹಾದುಹೋಗುವ ದೃಶ್ಯಾವಳಿಗಳು. ಇಂಜಿನಿಯರಿಂಗ್ ಮುಗಿಸಿದ ಬಹುತೇಕ ವಿದ್ಯಾರ್ಥಿಗಳ ಕನಸು ಸಾಫ್ಟ್‌ವೇರ್ ಉದ್ಯೋಗಿಯಾಗುವುದು. ರಾಜಕೀಯಕ್ಕೂ ಈ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ದೂರದೂರದ ಸಂಬಂಧ. ಚುನಾವಣೆ ಸಂದರ್ಭದಲ್ಲಿ ಮತಚಲಾಯಿಸಲಿ ಎಂದು ರಜೆ ನೀಡಿದರೆ ಮತದಾನ ಮಾಡದೆ ಪ್ರವಾಸ ಮಾಡುವವರ ಸಂಖ್ಯೆಯೇ ಜಾಸ್ತಿ. ಆದರೆ ಇವರೆಲ್ಲರ ಮಧ್ಯೆ ಒಬ್ಬರು ವಿಭಿನ್ನವಾಗಿ ನಿಲ್ಲುತ್ತಾರೆ. ಅವರೇ ಸಂಪತ್ ರಮಾನುಜಂ. ಸೀಗೆಹಳ್ಳಿ ಗ್ರಾಮ ಪಂಚಾಯ್ತಿ ಚುನಾವಣಾ ಅಭ್ಯರ್ಥಿ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿ, ಆರಂಕಿ ಸಂಬಳ, ಇಬ್ಬರು ಮಕ್ಕಳು, ಚಿಕ್ಕದಾದ ಚೊಕ್ಕ ಸುಂದರ ಸಂಸಾರ. ಮನುಷ್ಯನಿಗೆ ಜೀವನದಲ್ಲಿ ನೆಮ್ಮದಿಯಾಗಿರಲು ಇಷ್ಟು ಸಾಕು. ಆದರೆ, ಸಂಪತ್ ರಮಾನುಜಂಗೆ ಸಣ್ಣವಯಸ್ಸಿನಿಂದಲೂ ಸಮಾಜ ಸೇವೆಯಲ್ಲಿ ಹೆಚ್ಚಿನ ಒಲವು. ಶಾಲಾದಿನಗಳಿಂದಲೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸದಾ ಮುಂದಿರುತ್ತಿದ್ದರು. ಪ್ರತಿಷ್ಠಿತ ಕಂಪನಿಯಲ್ಲಿ ಕೈತುಂಬ ಸಂಬಳದ ಉದ್ಯೋಗ ದೊರೆತರೂ ಬೇರೆಯವರಂತೆ ಸಮಾಜ ಸೇವೆಯನ್ನು ಮರೆಯಲಿಲ್ಲ.
ರಾಜಕೀಯ ಎಂದರೆ ಅದು ಕೊಚ್ಚೆ, ಅದು ನಮ್ಮಂತವರಿಗಲ್ಲವೆಂದು ದೂರ ಹೋಗುವ ಟೆಕ್ಕಿಗಳಿಗೆ ರಾಜಕೀಯದ ಜ್ಞಾನ, ಮಹತ್ವ ಹಾಗೂ ಸ್ಫೂರ್ತಿಯ ಸೆಲೆಯಾಗಿ ಸಂಪತ್ ರಮಾನುಜಂ ಬೆಳೆಯುತ್ತಿದ್ದಾರೆ. ಬುದ್ದಿವಂತರು ಹಾಗೂ ವಿದ್ಯಾವಂತರು ರಾಜಕೀಯದಿಂದ ದೂರ ಉಳಿಯುವುದರಿಂದ ಅದಕ್ಷರು, ಅಪ್ರಮಾನಿಕರು, ಅಜ್ಞಾನಿಗಳು ನಮ್ಮನ್ನು ಆಳುತ್ತಾರೆ ಎಂಬುದು ಸಂಪತ್ ರಮಾನುಜಂ ಅನಿಸಿಕೆ, ಅದು ನಿಜವೂ ಹೌದು. ಉತ್ತಮ ಆಡಳಿತದ ಕುರಿತು ತಿಳಿಯಲು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ(ಬಿ.ಪ್ಯಾಕ್‍) ನಡೆಸಿಕೊಡುವ ಬಿ.ಕ್ಲಿಪ್ ಯೋಜನೆಯಲ್ಲಿ ಉತ್ತಮ ಆಡಳಿತದ ಕುರಿತು ತರಬೇತಿಯನ್ನೂ ಪಡೆದಿದ್ದಾರೆ.
ಅನ್ವಯ ಫೌಂಡೇಷನ್ ಮೂಲಕ ಸೇವಾಕಾರ್ಯ:ಸೇವಾಕಾರ್ಯಗಳು ಸುಸೂತ್ರವಾಗಿ ನಡೆಯಲು ಅನ್ವಯ ಫೌಂಡೇಷನ್ ಸ್ಥಾಪಿಸಿದ್ದಾರೆ. ಇದರ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಆರೋಗ್ಯ ಕುರಿತು ಅರಿವು ಮೂಡಿಸಲು ಸೈಕ್ಲಿಂಗ್ ಮಹತ್ವವನ್ನು ಸಾರಿ ಹೇಳಿದ್ದಾರೆ. ಫ್ರೀಡಂ ಪೆಡಲ್ ಎಂಬ ಅಭಿಯಾನ ಆರಂಭಿಸಿ ಅಪಾರ್ಟ್‍ಮೆಂಟ್‍ಗಳಲ್ಲಿ ಬಳಸದೆಬಿಟ್ಟ ಸೈಕಲ್‍ಗಳನ್ನು ಸಂಗ್ರಹಿಸಿ ರಿಪೇರಿ ಮಾಡಿಸಿ ಬಡ ವಿದ್ಯಾರ್ಥಿಗಳಿಗೆ ನೀಡುವ ಕಾರ್ಯ ಮಾಡಿದ್ದಾರೆ. ಇದುವರೆಗೆ 300ಕ್ಕೂ ಹೆಚ್ಚು ಸೈಕಲ್‍ಗಳನ್ನು ಬಡ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕ ತೀವ್ರವಾಗಿದ್ದಾಗ ತಮ್ಮ ಫೌಂಡೇಷನ್ ಮೂಲಕ ಬಡವರಿಗೆ, ಅಗತ್ಯ ದಿನಸಿ ಪದಾರ್ಥಗಳ ವಿತರಣೆ, ಬಹುಮಹಡಿ ವಸತಿ ಸಮುಚ್ಛಯಗಳಲ್ಲಿನ ನಿವಾಸಿಗಳಿಗೆ ಕಾಲಕಾಲಕ್ಕೆ ಕೋವಿಡ್ 19 ಕುರಿತ ಸಮಗ್ರ ಮಾಹಿತಿಯನ್ನು ನೀಡುವ ಕಾರ್ಯವನ್ನು ಮಾಡಿ ಮನೆಮಾತಾಗಿದ್ದಾರೆ. ಈ ಪ್ರದೇಶದ ಎಲ್ಲ ಜನರು ಸಂಪತ್ ರಮಾನುಜಂ ಅವರನ್ನು ಮುಖಾಮುಖಿ ನೋಡಿಲ್ಲವಾದರೂ ಸಂಪತ್ ರಮಾನುಜಂ ಹೆಸರು ಮಾತ್ರ ಜನಜನಿತ.
ನಾನ್ ಕನ್ನಡಿಗೆ ಟು ನಾನು ಕನ್ನಡಿಗಸದಾ ಸೇವಾಕಾರ್ಯಗಳಿಂದ ಚಟುವಟಿಕೆಯಿಂದಿರುವ ಸಂಪತ್ ರಮಾನುಜಂಗೆ ಕನ್ನಡ ಭಾಷೆಯೆಂದರೆ ಅತಿಯಾದ ವ್ಯಾಮೋಹ. ಸಾಫ್ಟ್‌ವೇರ್ ಉದ್ಯೋಗಿಯಾದರೂ ಎಲ್ಲರೊಂದಿಗೆ ಕನ್ನಡದಲ್ಲಿ ಮಾತನಾಡಲು ಇಷ್ಟಪಡುತ್ತಾರೆ. ಹೇಳಿ ಕೇಳಿ ಬೆಂಗಳೂರು ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ. ಹಲವು ಭಾಷೆ ಸಂಸ್ಕೃತಿಗಳ ಸಮ್ಮಿಳನದ ವಿಶಿಷ್ಟ ನಗರ. ಇಲ್ಲಿ ಕನ್ನಡ ಭಾಷೆಗಿಂತ ಇತರ ಬಾಷೆಗಳನ್ನೇ ಹೆಚ್ಚಾಗಿ ಮಾತನಾಡುತ್ತಾರೆ. ಐಟಿ-ಬಿಟಿ ಕಂಪನಿಗಳು ನೆಲೆನಿಂತಿರುವ ಮಹದೇವಪುರ, ವೈಟ್‍ಫೀಲ್ಡ್ ಪ್ರದೇಶಕ್ಕೆ ಕಾಲಿಟ್ಟರೆ ಇದು ಕನ್ನಡನಾಡೇನಾ ಎಂಬ ಭಾವನೆ ಬಾರದಿರದು. ಏಕೆಂದರೆ ಅಲ್ಲಿಕಾಣಸಿಗುವ ಬಹುತೇಕರು ಉದ್ಯೋಗವನ್ನರಸಿ ಬೇರೆ ಬೇರೆ ರಾಜ್ಯಗಳಿಂದ ಬಂದವರೇ ಜಾಸ್ತಿ.
ಬೇರೆ ರಾಜ್ಯಗಳಿಂದ ಬಂದು ನೆಲೆಸಿದವರಿಗೆ ಭಾಷಾ ಸಮಸ್ಯೆಯಾಗದಿರಲಿ ಎಂದು ನಾನ್ ಕನ್ನಡಿಗ ಟು ನಾನು ಕನ್ನಡಿಗ ಎಂಬ ಸಣ್ಣ ಅಭಿಯಾನವನ್ನು 2018 ರಲ್ಲಿ ಆರಂಭಿಸಿದರು. ವಿದ್ಯೆ, ಉದ್ಯೋಗವನ್ನರಸಿ ಬೇರೆಬೇರೆ ರಾಜ್ಯಗಳಿಂದ ಬಂದವರಿಗೆ ಕನ್ನಡ ಕಲಿಸಿ ಕನ್ನಡ ಭಾಷಾಭಿವೃದ್ಧಿಗೊಳಿಸುವುದು ಇದರ ಉದ್ದೇಶ. ಆರಂಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಿಸಿದರು. ಹೊರರಾಜ್ಯದವರು ಸ್ಥಳೀಯ ಭಾಷೆ ಕಲಿಯುವುದರಿಂದ ಸ್ಥಳಿಯರೊಂದಿಗೆ ಬೆರೆಯಲು ಸುಲಭವಾಗುತ್ತದೆ, ಇಬ್ಬರ ನಡುವೆ ಉತ್ತಮ ಬಾಂದವ್ಯ ಏರ್ಪಡುತ್ತದೆ. ಸ್ಥಳಿಯ ಭಾಷೆ ಕಲಿಕೆ ಅಲ್ಲಿನ ನಾಡು ನುಡಿಗೆ ನೀಡುವ ಗೌರವ ಎಂದು ಸಂಪತ್ ಭಾವಿಸಿದ್ದಾರೆ. ನಾನ್ ಕನ್ನಡಿಗ ಟು ನಾನು ಕನ್ನಡಿಗ ಕಾರ್ಯಕ್ರಮ ಮೂಲಕ 600ಕ್ಕೂ ಹೆಚ್ಚು ಮಂದಿಗೆ ಅನುಕೂಲ ಪಡೆದಿದ್ದು, ಕನ್ನಡ ಕೃಷಿಯನ್ನು ಮುಂದುವರೆಸಿದ್ದಾರೆ. ಇಷ್ಟೆಲ್ಲಾ ಸಮಾಜ ಸೇವಾ ಕಾರ್ಯಗಳು ಮಾಡಿರುವ ಸಂಪತ್ ರಮಾನುಜಂ ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕೇವಲ 3 ಮತಗಳ ಅಂತರದಿಂದ ಸೋಲನುಭವಿಸಿದ್ದರು.
ಬಿದ್ದಲ್ಲೇ ಏಳಬೇಕು, ಕಳೆದುಕೊಂಡಕಡೆನೇ ಹುಡುಕಬೇಕು ಎಂಬ ನಾನ್ನುಡಿಗಳಂತೆ ಸೋತಲ್ಲೇ ಗೆಲ್ಲಬೇಕು ಎಂಬ ಛಲದೊಂದಿಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದ್ದು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದಾರೆ. ನಿಸ್ವಾರ್ಥ ಸೇವೆ, ಉತ್ತಮ ಆಡಳಿತ ನೇಡಬೇಕೆಂಬ ಸದುದ್ದೇಶದೊಂದಿಗೆ ಚುನಾವಣೆ ಕಣಕ್ಕಿಳಿದಿರುವ ಸಂಪತ್ ರಮಾನುಜಂ ಅವರಿಗೆ ಗೆಲುವು ಸಿಗಲಿ ಎಂದು ಆಶಿಸೋಣ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 5 =
Remember me
