ತುಮಕೂರು:ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಸುದ್ದಿಗೋಷ್ಠಿ ಕರೆದಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದರು.
ಈ ಸಂದರ್ಭ ಅವರು “ನಾನು ನನ್ನ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ಕೊಡ್ತಿನಿ. ರಾಜ್ಯದ ಅಧ್ಯಕ್ಷರಿಗೆ ಇ ಮೇಲ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ನಂತರ ಅವರು “ನನ್ನ ಅನುಭವಕ್ಕೆ ಬಂದಿರುವಂತೆ ನಾನು ಇಡೀ ಜಿಲ್ಲೆಯ ಒಳಗೆ ಇರುವ ಜನರ ಕಷ್ಟ ಸುಖಕ್ಕೆ ಸ್ಪಂದಿಸಿದಿನಿ. ಕೆಲವರು ತಮ್ಮ ಕಷ್ಟವನ್ನ ಹೇಳಿಕೊಳ್ತಾರೆ. ನಾನು ನನ್ನ ಬಂಧುಗಳಿಗೆ, ಹಿತೈಷಿಗಳಿಗೆ ಹೇಳೋದು ಇಷ್ಟೇ. ನಿಮ್ಮ ಸೇವೆ ಹಗಲು ರಾತ್ರಿ ಎನ್ನದೆ‌‌ ನನಗೆ ಸಹಾಯ ಮಾಡಿದ್ದೀರಾ. ಮನಸ್ಸಿಗೆ ನೋವು ತಂದುಕೊಳ್ಳಬೇಡಿ” ಎಂದು ಹೇಳಿದರು.
ಇದನ್ನೂ ಓದಿ:ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ಕ್ರೀಡಾಪಟುಗಳ ಪ್ರತಿಭಟನೆ
ಇವತ್ತು ರಾಜಕೀಯಕ್ಕೆ ಬೇಕಾಗಿರೋದು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ. ನಮ್ಮ ಕಾರ್ಯಕರ್ತರು ನೀವು ರಾಜಕಾರಣದಲ್ಲಿ ಇರರ್ಬೇಕು ಅಂತ ಹೇಳಿದ್ದಾರೆ. ನಾನು ಎಂದು ಕೂಡಾ ಜಾತಿ ರಾಜಕೀಯ ಮಾಡಲ್ಲ. ಭ್ರಷ್ಟಾಚಾರ ಇಲ್ಲ. ನನಗೆ ಜಾತಿ ಅನ್ನೋದೆ ಗೊತ್ತಿಲ್ಲ. ಮುಸ್ಲಿಮರ, ಕ್ರೈಸ್ತರ‌ ಮನೆಗೆ ಹೋದ್ರೂ ನನಗೆ ಯಾವುದೇ ಭೇದಭಾವ ಇಲ್ಲ. ನಾನು ಒಂದು ತರ ಅಲೆಮಾರಿ ಇದ್ದ ಹಾಗೆ. ಜಿಲ್ಲೆಯ ಜನರ ಕಷ್ಟ ಸುಖ ಎಲ್ಲಾ ಗೊತ್ತು.
ರಾಜಕಾರಣದಲ್ಲಿ ಇವತ್ತು ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅದರಲ್ಲೂ ನಮ್ಮ ಬಿಜೆಪಿಯಲ್ಲಿ ಹೆಚ್ಚಾಗಿದೆ. ಗೌರವದಿಂದ ನಡೆದುಕೊಳ್ಳಬೇಕು. ಇವತ್ತಿನ‌ ಪರಿಸ್ಥಿತಿ ನೋಡಿದ್ರೆ‌ ನಮಗೆ ಮತ ಹಾಕಿದವರ ಮನೆಗೆ ಹೋಗೋಕೆ ಆಗ್ತಿಲ್ಲ. ಸಾಯಿಬಾಬ ದೇವಸ್ಥಾನದಲ್ಲಿ ಎಲ್ಲಾ ವ್ಯವಹಾರ ಆಗುತ್ತೆ ಎಂದು ನಮಗೆ ಅಧಿಕಾರಿಗಳು ಬಂದು ಹೇಳ್ತಾರೆ ಎಂದು ಪರೋಕ್ಷವಾಗಿ ಸಂಸದ ಜಿಎಸ್ ಬಸವರಾಜ್ ವಿರುದ್ಧ ಸೊಗಡು ಹರಿಹಾಯ್ದರು.
ನಾನು ಇರೋವರೆಗೂ ರಾಜಕೀಯದಲ್ಲಿ ಇರ್ತಿನಿ. ನಾನು ಸ್ಪರ್ಧೆ ಮಾಡೋದು ಖಚಿತ‌. ಸ್ವತಂತ್ರವಾಗಿ ಸ್ಪರ್ಧೆ ಮಾಡ್ಬೇಕಾ.. ಇಲ್ಲ ಯಾವುದಾದ್ರು ಪಕ್ಷದಿಂದ ಸ್ಪರ್ಧೆ ಮಾಡ್ಬೇಕಾ ಅಂತ. ನಮ್ಮ‌ ಕಾರ್ಯಕರ್ತರ ಜೊತೆ ಸಭೆ ನಡೆಸಿ ತಿರ್ಮಾನ ಮಾಡ್ತಿನಿ. ನಗರದ ನಾಗರೀಕ ಬಂಧುಗಳಿಗೆ ನಾನು ಮನವಿ ಮಾಡ್ತಿನಿ. ಕೆಟ್ಟದ್ದಕ್ಕೆ ಸಹಕಾರ ಕೋಡ್ಬೇಡಿ. ಭ್ರಷ್ಟಾಚಾರವನ್ನ ಕಿತ್ತು ಹಾಕೋದಿಕ್ಕೆ ಸಹಕಾರ ಕೊಡಿ” ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 5 =
Remember me
