ವಸಂತ ಋತುವಿನ ಕಡೇ ದಿನದ ಅಮಾವಾಸ್ಯೆಯನ್ನು“ಬಾದಾಮಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ. ಅದು ದೇವಿ ಪೂಜೆಗೆ ಅತ್ಯಂತ ಪ್ರಶಸ್ತವಾದ ದಿನ. ಈ ದಿನವಾದ ಗುರುವಾರ, ವೀರಭದ್ರನ ದರ್ಶನ ಹಾಗೂ ಪೂಜೆ ಅತ್ಯಂತ ಸೂಕ್ತವಾದದ್ದು. ಜತೆಗೆ ಈ ಅಮಾವಾಸ್ಯೆಯನ್ನು “ಶನಿ ಅಮಾವಾಸ್ಯೆ’ ಎಂದೂ ಕರೆಯಲಾಗುತ್ತದೆ. ಸೂರ್ಯ ಪುತ್ರನಾದ ಶನೈಶ್ಚರನ ದರ್ಶನ ಹಾಗೂ ಪೂಜೆ, ಪ್ರಾರ್ಥನೆಗಳೊಂದಿಗೆ ಧ್ಯಾನಿಸುವುದರಿಂದ ಒಳಿತು ಉಂಟಾಗುತ್ತದೆ. ಶನಿ ಅಷ್ಟೋತ್ತರವನ್ನು ಪೂರಾ ಪಠಣ ಮಾಡುವುದು ಅತ್ಯುತ್ತಮ ವಾದದ್ದು. ಸಾಧ್ಯವಾದಲ್ಲಿ ಶನೈಶ್ಚರಾಯ ಶಾಂತಾಯ ಸರ್ವಾಭೀಷ್ಟ ಪ್ರದಾಯಿನೇ > ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋ ನಮಃ ಎಂಬ ಪ್ರಾರ್ಥನೆಯನ್ನಾದರೂ ಮಾಡಬೇಕು.
| ರಾಜಗುರು ಬಿ.ಎಸ್​. ದ್ವಾರಕಾನಾಥ್​ (ದೈವ ಚಿಂತಕರು)
ಬಾದಾಮಿ ಅಮಾವಾಸ್ಯೆಯ ಈ ಸೂರ್ಯ ಗ್ರಹಣ ಭಾರತದ ಅಂಚಿನಲ್ಲಿ ಹಾದು ಹೋಗುತ್ತದೆ. ಅಂದರೆ ಅರುಣಾಚಲ ಪ್ರದೇಶ ಹಾಗೂ ಲಡಾಖ್​ ಪ್ರದೇಶದಲ್ಲಿ ಸಣ್ಣ ಸಮಯಕ್ಕೆ ಸಂಭವಿಸುತ್ತದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.42ಕ್ಕೆ ಆರಂಭವಾಗುವ ಗ್ರಹಣ ಸಂಜೆ 4.15ಕ್ಕೆ ಮಧ್ಯಮಭಾಗ ತಲುಪುತ್ತದೆ. ಸಂಜೆ 6.41ಕ್ಕೆ ಮೋಕ್ಷವಾಗುತ್ತದೆ. ಮುಖ್ಯವಾಗಿ ಆಸ್ಟ್ರೆಲಿಯಾ, ಉತ್ತರ ಅಮೆರಿಕದ ಗ್ರೀನ್​ಲ್ಯಾಂಡ್​, ಕೆನಡಾದಲ್ಲಿ ಪ್ರಮುಖವಾಗಿ ಗೋಚರಿಸುತ್ತದೆ. ಆಸ್ಟ್ರೆಲಿಯಾದಲ್ಲಿ ಮುಖ್ಯವಾಗಿ ಕೆಲ ವಿಪತ್ತುಗಳು ಸಂಭವಿಸಬಹುದು. ಭಾರತದಲ್ಲಿ ಗೋಚರವಾಗುವ ಅರುಣಾಚಲ ಪ್ರದೇಶ, ಮುಖ್ಯವಾಗಿ ಚೀನಾ ಗಡಿಯನ್ನು ಹಂಚಿಕೊಂಡಿದೆ. ಜತೆಗೆ, ಲಡಾಖ್​ ಪ್ರದೇಶವೂ ದೇಶದ ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಪ್ರಮುಖವಾದದ್ದು. ಈ ಎರಡೂ ಪ್ರದೇಶಗಳಲ್ಲಿ ಬೇಹುಗಾರಿಕೆ ಹಾಗೂ ಗುಪ್ತಚರ ಇಲಾಖೆಗಳು ಬಹು ಎಚ್ಚರಿಕೆಯಿಂದ ಇರಬೇಕು. ನಮ್ಮ ಸೈನಿಕರು ಈಗಾಗಲೆ ತಮ್ಮೆಲ್ಲ ಪರಿಶ್ರಮದಿಂದ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ ಗ್ರಹಣದ ಸಮಯದಲ್ಲಿ ಚೀನಾ ಹಾಗೂ ಪಾಕಿಸ್ತಾನ ಕುತಂತ್ರ ಮಾಡುವ ಸಾಧ್ಯತೆ ಕಾರಣಕ್ಕೆ ಮತ್ತಷ್ಟು ಎಚ್ಚರಿಕೆ ವಹಿಸಬೇಕು. ಉತ್ತರ ಭಾರತದ ಕೆಲ ಪ್ರದೇಶಗಳಲ್ಲಿ ಸಂಕಷ್ಟ ತಲೆದೋರುತ್ತದೆ ಎಂಬುದನ್ನು ಹೊರತುಪಡಿಸಿ ಭಾರತದ ಯಾವುದೇ ಪ್ರದೇಶದಲ್ಲಿ ಗ್ರಹಣ ಆಚರಣೆ ಇಲ್ಲ, ದೋಷವೂ ಇಲ್ಲ.
ಆದರೆ, ನಾವೆಲ್ಲ “ವಸುಧೈವ ಕುಟುಂಬಕಂ’ ಎನ್ನುವವರು. ವಿಶ್ವದ ಯಾವುದೇ ಭಾಗದಲ್ಲಿ ಸಾವುನೋವುಗಳಾದರೂ ನಾವು ಸ್ಪಂದಿಸಬೇಕು. ಈ ಹಿನ್ನೆಲೆಯಲ್ಲಿ, ಗ್ರಹಣ ಸಂಭವಿಸುವ ಸಮಯದಲ್ಲಿ ಎಲ್ಲರೂ ಸೂರ್ಯ ಹಾಗೂ ಶನಿಯನ್ನು ಪ್ರಾರ್ಥಿಸೋಣ. ಸಮಸ್ತ ಮನುಕುಲಕ್ಕೆ ಒಳಿತಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳೋಣ.
ಈಗಾಗಲೆ ಕರೊನಾದಿಂದ ಅಪಾರ ಸಾವು &ನೋವುಗಳು ಸಂಭವಿಸುತ್ತಿವೆ. ಸರ್ಕಾರ ನೀಡುವ ಅಂಕಿ ಸಂಖ್ಯೆಗಳ ಮೇಲೆ ನಂಬಿಕೆ ಬರುತ್ತಿಲ್ಲ. ಇಷ್ಟೆಲ್ಲ ಸೋಂಕು ಇದ್ದರೂ ಭಾರತದಲ್ಲಿ, 80 ಕೋಟಿ ಜನರಿಗೆ ಆಹಾರ ನೀಡುವಷ್ಟು ದಾಸ್ತಾನು ಇದೆ ಎಂದರೆ ಅದಕ್ಕೆ ದೇಶದ ಬೆನ್ನೆಲುಬಾದ ರೈತರು, ಈ ಹಿಂದಿನ ಎಲ್ಲ ಸರ್ಕಾರಗಳೂ ಕೈಗೊಂಡ ಕ್ರಮಗಳೇ ಕಾರಣ. 70 ವರ್ಷದಲ್ಲಿ ಏನೂ ಮಾಡಿಲ್ಲ ಎಂದು ಹೇಳಬಾರದು. ದೇವಸ್ಥಾನಗಳಿಗಿಂತಲೂ ಆಣೆಕಟ್ಟುಗಳಿಗೆ ಪ್ರಾಮುಖ್ಯತೆ ನೀಡಿದ ನೆಹರು ಸೇರಿ ಎಲ್ಲ ಸರ್ಕಾರಗಳ ಕೊಡುಗೆಯೂ ದೇಶಕ್ಕಿದೆ. ಇದನ್ನು ಈಗಿನ ಸರ್ಕಾರವೂ ಅರ್ಥ ಮಾಡಿಕೊಳ್ಳಬೇಕು. ಅದಿತ್ಯಾತ್ಮಕ ರುದ್ರ ಎನ್ನುವಂತೆ, ಅಟ್ಟಹಾಸವನ್ನು ಮೆಟ್ಟುವವನೇ ದೇವರು. ತಾವೇ ದೊಡ್ಡವರು ಎಂದು ಮೆರೆಯುತ್ತಿದ್ದ ರಷ್ಯಾ, ಅಮೆರಿಕವನ್ನು ಕರೊನಾ ಎಂಬ ಮಹಾಮಾರಿ ಮಣಿಸಿದೆ. ಇದೇ ರೀತಿ ಭಾರತ ಸರ್ಕಾರವೂ ತನ್ನಿಂದಲೇ ಎಲ್ಲವೂ ಎನ್ನುವುದರ ಬದಲಿಗೆ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ, ದೇಶದ ಎಲ್ಲ ಜನರನ್ನೂ ಒಂದಾಗಿ ಕಾಣುವುದನ್ನು ರೂಢಿಸಿಕೊಳ್ಳಬೇಕು. ಸಂಕಷ್ಟಗಳನ್ನು ಕಳೆಯಲು ಪ್ರಧಾನಿ ಮೋದಿ ಅವರು ದೇವಲಗಾಣಗಾಪುರಕ್ಕೆ ಆಗಮಿಸಿ ದತ್ತಾತ್ರೇಯ ಗುರುಗಳ ದರ್ಶನ ಮಾಡಬೇಕು ಎಂದು 2017ರಿಂದಲೂ ಹೇಳುತ್ತಿದ್ದೇನೆ. ಈಗಲೂ ಅದೇ ಪರಿಹಾರ ಎಂದು ಹೇಳುವೆ. ಪ್ರಧಾನಿಯವರಲ್ಲಿ ಕಳಂಕ ಇಲ್ಲವಾದರೂ ಅನೇಕ ನಿರ್ಧಾರಗಳಲ್ಲಿ ಎಡವುತ್ತಿದ್ದು, ಅವುಗಳು ಪರಿಹಾರವಾಗುತ್ತವೆ. ಗಡಿಭಾಗದಲ್ಲಿ ಸಮಸ್ಯೆ ಎದುರಾಗುವುದರಿಂದ, ಬೇಹುಗಾರಿಕೆ ಯನ್ನು ಸದೃಢಗೊಳಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಸಶಕ್ತವಾಗಿಸಬೇಕು. ತಾತ್ಕಾಲಿಕ ನೌಕರರಿಂದಲೇ ತುಂಬಿ, ಯಾವುದೇ ಸಾಧನೆ ಮಾಡದ ಸಂಸ್ಥೆಯ ಸ್ವರೂಪವನ್ನು ಬದಲಿಸಲು ದೃಢ ಹೆಜ್ಜೆ ಇಡಲೇಬೇಕು. ಅಮಾವಾಸ್ಯೆಯ ಕರಿನೆರಳೂ ರಾಜ್ಯದ ಮೇಲೆ ಬೀಳದಿರಲಿ ಎಂದು ಎಲ್ಲರೂ ಪ್ರಾರ್ಥಿಸೋಣ.
ನಾಯಕತ್ವ ಬದಲಾಗದುಈ ಅಮಾವಾಸ್ಯೆ ವೇಳೆ ರಾಜ್ಯ ರಾಜಕಾರಣದಲ್ಲಿ ಒಡಕಿನ ಧ್ವನಿ ಇಲ್ಲದಂತೆ ನೋಡಿಕೊಳ್ಳಬೇಕು. ಈಗಿನ ನಾಯಕತ್ವವೇ ಮುಂದುವರಿಯಬೇಕು, ಮುಂದುವರಿ ಯುತ್ತದೆ. ಬದಲಾವಣೆ ಪ್ರಯತ್ನ ಪಕ್ಷದ ಮೇಲೆ ಭಾರಿ ದೊಡ್ಡ ಪರಿಣಾಮ ತರಲಿದೆ. ಸುಬ್ರಹ್ಮಣ್ಯನ ಆಶೀರ್ವಾದ ಪಡೆಯಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
