| ಮೃತ್ಯುಂಜಯ ಕಪಗಲ್ ಬೆಂಗಳೂರು
ಪರಿಸರಸ್ನೇಹಿ ಸೋಲಾರ್ ವಿದ್ಯುತ್ ಉತ್ಪಾದನಾ ವಲಯಕ್ಕೆ ಗೃಹ ಬಳಕೆದಾರರನ್ನು ಜೋಡಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಗಂಭೀರ ಚಿಂತನೆ ನಡೆಸಿದೆ.ಮನೆಗಳ ಛಾವಣಿ ಮೇಲೆ ಸೌರಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆಗೆ ಉತ್ತೇಜಿಸಲು ಮುಂದಾಗಿದ್ದು, ಆಂದೋಲನ ಮಾದರಿ ಕ್ರಮ ಕೈಗೊಳ್ಳಲು ತೀರ್ವನಿಸಿದೆ. ಸೋಲಾರ್ ಪ್ರಯೋಜನದ ಕುರಿತು ಬೆಸ್ಕಾಂ ಇಂಜಿನಿಯರ್​ಗಳಿಗೆ ಮನವರಿಕೆ ಮಾಡಿ ಕೊಟ್ಟು, ಆಂದೋಲನದ ಉದ್ದೇಶ ಈಡೇರಿಸಲು ಭೂಮಿಕೆ ಸಿದ್ಧಪಡಿಸಿದೆ.
ಛಾವಣಿ ಮೇಲೆ ಸೋಲಾರ್ ಅಳವಡಿಸುವುದರಿಂದ ಗ್ರಾಹಕರು ವಿದ್ಯುತ್ ವೆಚ್ಚ ತಗ್ಗಿಸಿಕೊಳ್ಳಬಹುದು. ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಆದಾಯ ಮೂಲವನ್ನೂ ಕಂಡುಕೊಳ್ಳಬಹುದು. ಸೌರಫಲಕದಿಂದ ಉತ್ಪಾದಿಸಿದ ವಿದ್ಯುತ್​ನಲ್ಲಿ ಗ್ರಾಹಕರು ತಮಗೆ ಬೇಕಾದಷ್ಟು ಬಳಸಿಕೊಂಡು, ಹೆಚ್ಚುವರಿ ವಿದ್ಯುತ್ ಬೆಸ್ಕಾಂಗೆ ಮಾರಾಟ ಮಾಡಲು ಅವಕಾಶವಿದೆ. ‘ರೂಫ್ ಟಾಪ್ ಸೋಲಾರ್’ ಉಪಕ್ರಮದ ಈ ಎರಡು ಪ್ರಯೋಜನಗಳಿಗೆ ಹೆಚ್ಚಿನ ಒತ್ತು ನೀಡಿ, ಗ್ರಾಹಕ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
300 ಮೆಗಾವಾಟ್ ಗುರಿ:ಬೆಂಗಳೂರು ಮಹಾನಗರದಲ್ಲಿ ಸೋಲಾರ್ ಮೂಲದಿಂದ 300 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿರುವ ಬೆಸ್ಕಾಂ, ಉಪ ವಿಭಾಗವಾರು ಹಂಚಿಕೆ ಮಾಡಿ, ಪ್ರತಿಯೊಬ್ಬ ಇಂಜಿನಿಯರ್​ಗೆ ಕನಿಷ್ಠ 5 ಮನೆಗಳ ಭೇಟಿಯನ್ನು ನಿಗದಿಪಡಿಸಿದೆ. ತಾರಸಿ ಮೇಲೆ ಸೌರಫಲಕ ಅಳವಡಿಸುವ ಗ್ರಾಹಕರಿಗೆ ಸಹಾಯಧನ ಸೌಲಭ್ಯದ ಜತೆಗೆ ಹೆಚ್ಚುವರಿ ವಿದ್ಯುತ್ ಮಾರಾಟದ ಮಾಹಿತಿಯುಳ್ಳ ಕರಪತ್ರ ಹಂಚಲಾಗು ತ್ತಿದೆ. ಪ್ರಾಥಮಿಕ ಹಂತದ ಪ್ರಯತ್ನಕ್ಕೆ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದ್ದು, ಈಗಾಗಲೇ ಹೆಸರು ನೋಂದಣಿಯಾದ ಪ್ರಕಾರ ಎರಡು ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಿಸಿದೆ. ಮನೆ ಮೇಲೆ ಖಾಲಿ ಜಾಗ ಹೊಂದಿರುವ ಎಲ್ಲ ಗ್ರಾಹಕರು ಮುಂದೆ ಬಂದರೆ 300 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿಯನ್ನು ಅಲ್ಪಾವಧಿಯಲ್ಲೇ ತಲುಪಲಿದ್ದೇವೆ ಎಂದು ಬೆಸ್ಕಾಂ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ವಿದ್ಯುತ್ ಖರೀದಿ ಒಪ್ಪಂದಒಂದು ಕಿಲೋವಾಟ್ ಸೌರಫಲಕ ಸ್ಥಾಪನೆಗೆ 10 ಚದರ ಮೀಟರ್ ಜಾಗ ಬೇಕು. ಒಂದು ಕಿಲೋವಾಟ್ ಸೌರ ಘಟಕದಿಂದ 4 ಯೂನಿಟ್ ವಿದ್ಯುತ್ ಉತ್ಪಾದನೆ ಅಂದಾಜಿಸಲಾಗಿದೆ. ನೆಟ್/ ಗ್ರಾಹಕ ಮೀಟರಿಂಗ್ ಅಡಿಯಲ್ಲಿ 25 ವರ್ಷಗಳ ತನಕ ಬೆಸ್ಕಾಂ ಜತೆಗೆ ವಿದ್ಯುತ್ ಖರೀದಿ ಒಪ್ಪಂದ ಮಾಡಿ ಕೊಳ್ಳಬಹುದಾಗಿದೆ. 2024ರ ಮಾರ್ಚ್ 31ರ ಅಂತ್ಯದವರೆಗೆ ದರದ ಪ್ರಕಾರ ಸಬ್ಸಿಡಿ ಯೋಜನೆಯ ವಸತಿ ಗ್ರಾಹಕರಿಗೆ (1 ರಿಂದ 10 ಕಿವಾ) ಪ್ರತಿ
ಯೂನಿಟ್​ಗೆ 2.97 ರೂ. ಪಾವತಿಸಲಾಗುತ್ತದೆ. ಸಬ್ಸಿಡಿರಹಿತ ಯೋಜನೆಯಡಿ ವಸತಿ ಗ್ರಾಹಕರಿಗೆ (1ರಿಂದ 10 ಕಿಲೋವಾಟ್​ವರೆಗೆ) ಪ್ರತಿ ಯೂನಿಟ್​ಗೆ 4.50 ರೂ. ನಿಗದಿಯಾಗಿದೆ. ಇತರ ಗ್ರಾಹಕರಿಗೆ 1ರಿಂದ 2 ಸಾವಿರ ಕಿಲೋವಾಟ್​ವರೆಗೆ ಪ್ರತಿ ಯೂನಿಟ್​ಗೆ 3.74 ರೂ. ನಿಗದಿಪಡಿಸಲಾಗಿದೆ.
ಏನೆಲ್ಲ ಅನುಕೂಲತೆಗಳಿವೆ?
* ಸೋಲಾರ್ ರೂಫ್​ಟಾಪ್ ಯೋಜನೆಯಡಿ ಮನೆ ಮೇಲಿನ ಖಾಲಿ ಜಾಗ ಬಳಕೆ.
* ಮಾಸಿಕ ವಿದ್ಯುತ್ ಬಿಲ್​ನಲ್ಲಿ ಉಳಿತಾಯ.
* ಹೆಚ್ಚುವರಿ ವಿದ್ಯುತ್ ಮಾರಾಟದಿಂದ ಆದಾಯ.
* ಬೆಸ್ಕಾಂನ ಎಲ್ಲ ಗ್ರಾಹಕರು ಈ ಯೋಜನೆಗೆ ಅರ್ಹರು.
* ಗೃಹ ಬಳಕೆದಾರರು ಮಾತ್ರವಲ್ಲದೆ ವಾಣಿಜ್ಯ, ಕೈಗಾರಿಕೆ ಹಾಗೂ ಶೈಕ್ಷಣಿಕ ಮತ್ತಿತರ ವಲಯಗಳ ಕಟ್ಟಡಗಳ ತಾರಸಿಯನ್ನು ಈ ಯೋಜನೆಗೆ ಬಳಸಿಕೊಳ್ಳಲು ಅವಕಾಶವಿದೆ.
* ವಸತಿ ಗ್ರಾಹಕರು ಒಂದು ಕಿಲೋವಾಟ್​ನಿಂದ 3 ಕಿಲೋವಾಟ್ ವಿದ್ಯುತ್ ಉತ್ಪಾದಿಸುವ ಸೌರಫಲಕ ಅಳವಡಿಸಿಕೊಂಡರೆ, ಪ್ರತಿ ಕಿವಾಗೆ 18 ಸಾವಿರ ರೂ. ಸಬ್ಸಿಡಿ ಲಭಿಸಲಿದೆ.
* ಸೌರ ಸಾಮರ್ಥ್ಯವು ಮಂಜೂರಾತಿ ಹೊರೆಯವರೆಗೆ ಈ ಯೋಜನೆ ಸೀಮಿತವಾಗಿದೆ.
* 3ರಿಂದ 10 ಕಿಲೋವಾಟ್​ವರೆಗೆ ಉತ್ಪಾದಿಸಲು ಅವಕಾಶವಿದ್ದು, ಪ್ರತಿ ಕಿವಾಗೆ ಹೆಚ್ಚುವರಿ 9 ಸಾವಿರ ರೂ. ಸಬ್ಸಿಡಿ ದೊರೆಯಲಿದೆ.
* ವಸತಿ ಕಲ್ಯಾಣ ಸಂಘ ಗ್ರಾಹಕರು 500 ಕಿಲೋವಾಟ್​ವರೆಗೆ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಬಹುದಾಗಿದ್ದು, ಪ್ರತಿ ಕಿಲೋವಾಟ್​ಗೆ 9 ಸಾವಿರ ರೂ. ಸಹಾಯಧನ ಸಿಗಲಿದೆ.
ಮಾಹಿತಿಗೆ ಇಲ್ಲಿ ಸಂರ್ಪರ್ಕಿಸಿಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಸಂಬಂಧ ಮಾಹಿತಿಗೆ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080- 22340816 ಅಥವಾ ಇಮೇಲ್[email protected]ಅಥವಾ[email protected]ಸಂಪರ್ಕಿಸಿ.
ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್​ನಲ್ಲಿ ಇಟ್ಟರೆ ಏನಾಗುತ್ತದೆ? ಇಲ್ಲಿದೆ ಆಘಾತಕಾರಿ ಮಾಹಿತಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + nineteen =
Remember me
