ಬೆಂಗಳೂರು:ರಾಜ್ಯದ ಎರಡೂವರೆ ಲಕ್ಷ ರೈತರ ಪಂಪ್​ಸೆಟ್​ಗಳಿಗೆ ಸೋಲಾರ್ ವಿದ್ಯುತ್, ಏಳು ಜಿಲ್ಲೆಗಳಲ್ಲಿ ಹೈಬ್ರಿಡ್ ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪನೆ, ಪ್ರಥಮ ಬಾರಿಗೆ ವಿದ್ಯುತ್ ದಾಸ್ತಾನು ಘಟಕ ಸ್ಥಾಪನೆಯೂ ಸೇರಿದಂತೆ ಮುಂದಿನ ಎಂಟು ತಿಂಗಳೊಳಗೆ ಇಂಧನ ಇಲಾಖೆಯಲ್ಲಿ ಹಲವು ಸುಧಾರಣಾ ಕ್ರಮಗಳು ಜಾರಿಗೊಳ್ಳಲಿವೆ.
ವಿಜಯವಾಣಿ ಬುಧವಾರ ಹಮ್ಮಿಕೊಂಡ ಸಂವಾದದಲ್ಲಿ ಇಂಧನ ಸಚಿವ ವಿ.ಸುನೀಲ್ ಕುಮಾರ್ ಇಲಾಖೆ ಈವರೆಗೆ ಸಾಧಿಸಿದ ಪ್ರಗತಿ, ಕೈಗೊಂಡ ತೀರ್ವನಗಳ ಅನುಷ್ಠಾನ, ಮುಂದೆ ಕೈಗೊಳ್ಳಲು ಉದ್ದೇಶಿಸಿರುವ ಉಪಕ್ರಮಗಳನ್ನು ತೆರೆದಿಟ್ಟರು.
ಮುಖ್ಯವಾಗಿ ಕುಸುಮ್​ಸಿ (ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್) ಅನ್ವಯ ರೈತರ ನೀರಾವರಿ ಪಂಪ್​ಸೆಟ್​ಗಳಿಗೆ ಸೋಲಾರ್ ವಿದ್ಯುತ್ ಪೂರೈಸುವ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಎರಡೂವರೆ ಲಕ್ಷ ಪಂಪ್​ಸೆಟ್​ಗಳಿಗೆ ಈ ಸೌಲಭ್ಯ ಒದಗಿಸಲಿದ್ದು, ತಾಂತ್ರಿಕ ಕಾರ್ಯವೈಖರಿ, ಕ್ಷಮತೆ ಎಲ್ಲವನ್ನೂ ಪರಿಶೀಲಿಸಿದ ಬಳಿಕ ಹಂತಹಂತವಾಗಿ ಉಳಿದ ಪಂಪ್​ಸೆಟ್​ಗಳಿಗೂ ಯೋಜನೆ ಯನ್ನು ವಿಸ್ತರಿಸುವ ಚಿಂತನೆ ಇದೆ ಎಂದರು.
ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆಯಿಂದ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಸಬೇಕೆಂಬ ರೈತರ ದೀರ್ಘಕಾಲೀನ ಬೇಡಿಕೆ ಈಡೇರಿಸುವ ಜತೆಗೆ ನಿರಂತರವಾಗಿ ಏಳು ತಾಸು ವಿದ್ಯುತ್ ಖಾತ್ರಿ ಕೂಡ ಸಾಧ್ಯವಾಗಲಿದೆ. ಅಲ್ಲದೇ ಹಗಲಿನಲ್ಲಿ ಸೌರ ಮೂಲದಿಂದ ಸಿಗುವ ವಿದ್ಯುತ್ ಸಂಪೂರ್ಣವಾಗಿ ಬಳಕೆಯಾಗಲಿದೆ. ಜತೆಗೆ, ಸೌರ ಮೂಲದ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಅನುಕೂಲವಾಗಲಿದೆ. ಹಾಗೆಯೇ, ಹಗಲಿನಲ್ಲಿ ಬೇಡಿಕೆ ಇಲ್ಲವೆಂಬ ಕಾರಣಕ್ಕೆ ಸೌರ ವಿದ್ಯುತ್ ಪೋಲಾಗುವುದು ತಪ್ಪಲಿದೆ ಎಂದು ಹೇಳಿದರು. 15 ದಿನಗಳಲ್ಲಿ ಟೆಂಡರ್ ಕರೆದು ತಡಮಾಡದೇ ಯೋಜನೆ ಕಾರ್ಯಗತಗೊಳಿಸುತ್ತೇವೆ. ಹಾಗೆಯೇ, ಚಾಲ್ತಿ ಫೀಡರ್ ಮತ್ತು ಮಾರ್ಗಗಳನ್ನೇ ಬಳಸಿಕೊಂಡು ಸೌರ ವಿದ್ಯುತ್ ಒದಗಿಸಲಾಗುತ್ತದೆ ಎಂದರು.
ಹೈಬ್ರಿಡ್ ವಿದ್ಯುತ್ ಘಟಕ:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಹಸಿರು ವಿದ್ಯುತ್​ಗೆ ಒತ್ತು ನೀಡಿ, 2022-23ರ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯದ ಏಳು ಕಡೆ ಹೈಬ್ರಿಡ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಪ್ರಕ್ರಿಯೆ ಆರಂಭವಾಗಿದೆ. ಕೊಪ್ಪಳ, ತುಮಕೂರು, ದಾವಣಗೆರೆ, ಬಾಗಲಕೋಟೆ, ಗದಗ, ಹಾವೇರಿ, ಚಿತ್ರದುರ್ಗದಲ್ಲಿ ಈ ಹೈಬ್ರಿಡ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಸೌರ ಹಾಗೂ ಪವನ ವಿದ್ಯುತ್ ಘಟಕ ಒಂದೇ ಕಡೆ ಸ್ಥಾಪನೆಯಾಗಲಿದೆ. ಏಳು ಘಟಕಗಳ ಒಟ್ಟಾರೆ ಸಾಮರ್ಥ್ಯ ಒಂದು ಸಾವಿರ ಮೆಗಾವಾಟ್ ಆಗಿರಲಿದೆ ಎಂದು ಸಚಿವ ಸುನೀಲ್​ಕುಮಾರ್ ವಿವರಿಸಿದರು.
ಪರಿಸರಸ್ನೇಹಿ ಹಸಿರು ವಿದ್ಯುತ್ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡುವ ಭಾಗವಾಗಿಯೇ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಚಾಲ್ತಿಯಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳ ಭವಿಷ್ಯಕ್ಕೆ ಅಪಾಯವಿಲ್ಲ ಎಂದೂ ಸ್ಪಷ್ಟಪಡಿಸಿದರು. ಹಾಗೆಯೇ, ಹಸಿರು ವಿದ್ಯುತ್ ಉತ್ಪಾದನೆಗೆ ಕರೆಯುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ನಿಗಮಕ್ಕೂ ಪಾಲ್ಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಖಾಸಗೀಕರಣ ಒಪ್ಪಲ್ಲ:ಕಾಪೋರೇಟ್ ಕೈಗೆ ವಿದ್ಯುತ್ ಕ್ಷೇತ್ರ ಕೊಡಲು ಇಂಧನ ಕಾಯ್ದೆಗೆ ತಿದ್ದುಪಡಿ ತರಲು ಪ್ರಧಾನಿ ಮುಂದಾಗಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಆಧಾರರಹಿತ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ರಾಜ್ಯ ಖಾಸಗೀಕರಣ ಒಪ್ಪಲ್ಲ. ಅಂತಹ ಚಿಂತನೆ, ಪ್ರಸ್ತಾವವೂ ಇಲ್ಲ. ನಾವು ಕೂಡ ವಿದ್ಯುತ್ ಸರಬರಾಜು ಕಂಪನಿ ನೌಕರರಿಗೆ ಭರವಸೆ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು. ಶಾಖೋತ್ಪನ್ನ ಘಟಕಗಳನ್ನು ಮುಚ್ಚುವುದಿಲ್ಲ. ಕೇಂದ್ರದಿಂದ ನಮಗೆ ಆ ರೀತಿಯ ಯಾವುದೇ ಸೂಚನೆಯೂ ಬಂದಿಲ್ಲವೆಂದು ಹೇಳಿದರು.
ವಿದ್ಯುತ್ ದಾಸ್ತಾನು:ಮೊದಲ ಬಾರಿಗೆ ವಿದ್ಯುತ್ತಿನ ದಾಸ್ತಾನು ವ್ಯವಸ್ಥೆ ಪ್ರಾಯೋ ಗಿಕವಾಗಿ ಜಾರಿಗೆ ಬರಲಿದೆ. ಪಾವಗಡ ಸೋಲಾರ್ ಪಾರ್ಕ್ ನಲ್ಲಿ 50 ಮೆಗಾ ವಾಟ್ ಹಸಿರು ವಿದ್ಯುತ್ ಸಂಗ್ರಹ ಘಟಕ ಸ್ಥಾಪಿಸುವ ಹೊಣೆ ಯನ್ನು ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ (ಕ್ರೆಡೆಲ್) ಒಪ್ಪಿಸಲಾಗಿದೆ ಎಂದು ಸುನೀಲ್​ಕುಮಾರ್ ತಿಳಿಸಿದರು.
ಹೋಲ್ಡಿಂಗ್ ಕಂಪನಿ ಸ್ಥಾಪನೆ:ವಿದ್ಯುತ್ ಕ್ಷೇತ್ರದ ಕಾರ್ಯ ಮತ್ತು ಪಾಲನೆಯಲ್ಲಿ ಶಿಸ್ತು, ಏಕರೂಪತೆ ತರುವ ಉದ್ದೇಶದಿಂದ ಹೋಲ್ಡಿಂಗ್ ಕಂಪನಿ ಸ್ಥಾಪಿಸುವ ಪ್ರಯತ್ನ ಮಹತ್ವದ ಘಟ್ಟದಲ್ಲಿದೆ. ಗುಜರಾತ್ ಮಾದರಿಯನ್ನು ಅಧ್ಯಯನ ಮಾಡಿದ್ದೇವೆ. ಶೀಘ್ರವೇ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಒಳಗೊಂಡ ಹೋಲ್ಡಿಂಗ್ ಕಂಪನಿ ರಚಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು. ಇದಕ್ಕೆ ಪೂರಕವಾಗಿ ಗುರುಚರಣ್ ಸಮಿತಿ ಕೂಡ ಕೆಲವು ಶಿಫಾರಸು ಮಾಡಿದ್ದು, ಅದನ್ನೂ ಪರಿಗಣಿಸುತ್ತೇವೆ. ಹೋಲ್ಡಿಂಗ್ ಕಂಪನಿ ಮಾಡುವ ಮುಖ್ಯ ಉದ್ದೇಶವೆಂದರೆ ವಿದ್ಯುತ್ ಖರೀದಿ ಮತ್ತು ಮಾರಾಟದಲ್ಲಿ ಏಕರೂಪತೆ ತರುವುದು, ನೇಮಕ ಮತ್ತು ಬಡ್ತಿಗಳಲ್ಲಿನ ವ್ಯತ್ಯಾಸ ಸರಿದೂಗಿಸುವುದಾಗಿದೆ ಎಂದರು.
Fact Check: ರಾಷ್ಟ್ರಧ್ವಜ ಖರೀದಿಸದಿದ್ದರೆ ರೇಷನ್ ಕೊಡಲ್ವಾ?; ಇಲ್ಲಿದೆ ಸತ್ಯಾಂಶ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
