ಗದಗ:ರಜೆ ಮೇರೆಗೆ ಸ್ವಗ್ರಾಮಕ್ಕೆ ಬಂದ ಯೋಧರಿಬ್ಬರು ಜಮೀನಿನಲ್ಲಿ ಟೆಂಟ್​ ಹಾಕಿಕೊಂಡು ಸ್ವಯಂ ಕ್ವಾರಂಟೈನ್​ ಆಗಿರುವ ಎರಡು ಪ್ರತ್ಯೇಕ ಪ್ರಕರಣಗಳು ಇತರರಿಗೆ ಮಾದರಿಯಾಗಿವೆ.
ಅರುಣಾಚಲ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗದಗ ತಾಲೂಕಿನ ಅಂತೂರು​ ಜು.3ರಂದು ವಿಮಾನ ಮೂಲಕ ಬೆಂಗಳೂರಿಗೆ ಬಂದರು. ಅಲ್ಲಿಂದ ಜಿಲ್ಲೆಗೆ ಬಂದ ಕೂಡಲೇ ಪ್ರಕಾಶ್​, ಮನೆ ಹಾಗೂ ಗ್ರಾಮಕ್ಕೆ ಹೋಗದೆ ನೇರವಾಗಿ ಜಮೀನಿಗೆ ಬಂದಿದ್ದಾರೆ. ಟ್ರ್ಯಾಕ್ಟರ್​ ಟ್ರೇಲರ್​ ಮೇಲೆ ತಾಡಪತ್ರಿ ಹಾಕಿ, ಅದರ ಸುತ್ತು ಬೇಲಿ ಹಾಕಿಕೊಂಡು 5 ದಿನಗಳಿಂದ ತನ್ನಷ್ಟಕ್ಕೇ ತಾನೇ ದಿಗ್ಬಂಧನ ಹಾಕಿಕೊಂಡಿದ್ದಾರೆ.ಇದನ್ನೂ ಓದಿರಿಸಿಎಂ ಕಚೇರಿ-ನಿವಾಸದಲ್ಲಿ 7 ಮಂದಿಗೆ ಕರೊನಾ ಸೋಂಕು, ಹೋಂ ಕ್ವಾರಂಟೈನ್​ನಲ್ಲಿ ಯಡಿಯೂರಪ್ಪ
ನಿಯಮದಂತೆ ಯೋಧ ಪ್ರಕಾಶ​ ಕೋವಿಡ್​ ಪರೀಕ್ಷೆ ಮಾಡಿಸಿಕೊಂಡಿದ್ದು ವರದಿ ನೆಗೆಟಿವ್​ ಬಂದಿದೆ. ಆದರೂ, 14 ದಿನ ಹೋಂ ಕ್ವಾರಂಟೈನ್​ ಆಗಬೇಕೆಂದು ಆರೋಗ್ಯ ಇಲಾಖೆ ಸೂಚನೆ
ನೀಡಿದೆ. ಯೋಧ ಪ್ರಕಾಶ ಅವರದ್ದು ಅವಿಭಕ್ತ ಕುಟುಂಬ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು, ತಂದೆ, ತಾಯಿ ಸೇರಿ 15ಕ್ಕೂ ಹೆಚ್ಚು ಜನರಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರಿಗೆ ತೊಂದರೆ ಆಗಬಾರದೆಂದು 2 ಕಿಮೀ ದೂರದಲ್ಲಿರುವ ಸ್ವಂತ ಜಮೀನಿನಲ್ಲಿ ತಾತ್ಕಾಲಿಕ ಶೆಡ್​ ಹಾಕಿಕೊಂಡು ವಾಸವಾಗಿದ್ದಾರೆ.
ಪ್ರಕಾಶ ಅವರು 14 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲಡಾಖ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ 30 ದಿನಗಳ ರಜೆ ಮೇರೆಗೆ ಗ್ರಾಮಕ್ಕೆ ಆಗಮಿಸಿದ್ದಾರೆ. ಕ್ವಾರಂಟೈನ್​ ಸಮಯ ಮುಗಿದ ಬಳಿಕ ಮನೆಗೆ ತೆರಳಿ ಮಕ್ಕಳು ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.
ಇನ್ನು ಹಿರಿಯೂರಿನ ಖಂಡೇನಹಳ್ಳಿಯಲ್ಲೂ ಬಿಎಸ್​ಎಫ್​ ಯೋಧ ಯೋಗೇಶ್​ ಜಮೀನಿನಲ್ಲೇ ಕ್ವಾರಂಟೈನ್​ ಆಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗ್ರಾಮಸ್ಥರ ಸುರಕ್ಷತೆ ಹಾಗೂ ಸರ್ಕಾರದ ನಿಯಮ ಪಾಲಿಸಲು ಕರ್ನಾಟಕ ಮತ್ತು ಆಂಧ್ರ ಗಡಿಯ ಜಮೀನಿನಲ್ಲಿ ಟೆಂಟ್​ ನಿಮಿರ್ಸಿಕೊಂಡು ಸ್ವಯಂ ಕ್ವಾರಂಟೈನ್​ ಆಗಿರುವ ಯೋಗೇಶ್​, ಜು.5ರಂದು ರಜೆ ಮೇರೆಗೆ ಝಾನ್ಸಿಯಿಂದ ಸ್ವಗ್ರಾಮಕ್ಕೆ ಬಂದಿದ್ದಾರೆ.
ಕರೊನಾ ಸೋಂಕಿತನ ಬಾಯಿಗೆ ಬಾಯಿ ಇಟ್ಟರು, ಕಿರುನಾಲಿಗೆಯನ್ನು ಬರಿಗೈಲಿ ತಿಕ್ಕಿದರು… ಬೆಚ್ಚಿಬೀಳಿಸುತ್ತೆ ಪ್ರೈಮರಿ ಕಾಂಟ್ಯಾಕ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + twenty =
Remember me
