ಬೆಂಗಳೂರು:ಸಂಪುಟ ಸೇರಿರುವ ಹೊಸ ಸಚಿವರು ಯಾವ ಖಾತೆ ಕೊಟ್ಟರೂ ನಿಭಾಯಿಸುವುದಾಗಿ ಹೇಳುತ್ತಿದ್ದರೂ, ಒಳಗೊಳಗೆ ಇಂಥದ್ದೆ ಖಾತೆ ಬೇಕು ಎಂದು ಪಟ್ಟು ಹಿಡಿದು ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮತ್ತೆ ದೆಹಲಿಗೆ ತೆರಳಲಿರುವ ಸಿಎಂ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರನ್ನು ಭೇಟಿ ಮಾಡಿ ಖಾತೆ ಸಮಸ್ಯೆ ಬಗೆಹರಿಸಿಕೊಂಡು ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಸಿಎಂ ದೆಹಲಿಗೆ ಹೋಗುವ ನಿರೀಕ್ಷೆ ಇದೆ. ಮತ್ತೊಂದೆಡೆ 16 ಸಚಿವರ ಬಳಿ ಹೆಚ್ಚುವರಿಯಾಗಿದ್ದ ಖಾತೆಗಳನ್ನು ಹಿಂಪಡೆಯಲಾಗುತ್ತಿದ್ದು, ಆ ಖಾತೆಗಳಲ್ಲಿ ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳುವಂತೆಯೂ ತಾಕೀತು ಮಾಡಿದ್ದಾರೆ. ಜಲಸಂಪನ್ಮೂಲ ಖಾತೆ ಮೇಲೆ ರಮೇಶ್ ಜಾರಕಿಹೊಳಿ ಕಣ್ಣಿಟ್ಟಿದ್ದಾರಾದರೂ ಅವರಿಗೆ ಆ ಖಾತೆ ನೀಡಲು ಬಿಜೆಪಿ ಸಹಮತ ವ್ಯಕ್ತಪಡಿಸಿಲ್ಲ. ಗೃಹ ಖಾತೆಯನ್ನು ಹೊಂದಿರುವ ಬಸವರಾಜ ಬೊಮ್ಮಾಯಿ ಅವರಿಗೆ ಜಲಸಂಪನ್ಮೂಲ ನೀಡಿ, ಗೃಹ ಖಾತೆಯನ್ನು ಬೇರೆಯವರಿಗೆ ನೀಡಬೇಕು ಎನ್ನುವ ಚರ್ಚೆಗಳು ನಡೆದಿವೆ.
ಬೆಂಗಳೂರು ಅಭಿವೃದ್ಧಿ ಖಾತೆಗೂ ಭರ್ಜರಿ ಡಿಮಾಂಡ್ ಬಂದಿದ್ದು, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು ಮತ್ತು ಗೋಪಾಲಯ್ಯ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಉನ್ನತ ಶಿಕ್ಷಣ ಅಥವಾ ಇಂಧನ ಖಾತೆ ಮೇಲೆ ಡಾ.ಸುಧಾಕರ್ ಕಣ್ಣಿದೆ. ಕೃಷಿ, ತೋಟಗಾರಿಕೆ, ಅರಣ್ಯ ಸೇರಿ ಹಲವು ಪ್ರಮುಖ ಖಾತೆಗಳ ಮೇಲೆ ನೂತನ ಸಚಿವರ ಮನಸ್ಸಿದೆ.
ನೂತನ ಸಚಿವರಿಗೆ ಶನಿವಾರ ಖಾತೆ ಹಂಚಿಕೆ ಮಾಡಲಾಗುವುದು. ಬೆಂಗಳೂರಿಗೆ ಹೋಗಿ ಚರ್ಚೆ ನಡೆಸಿ ಎಲ್ಲ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವೆ.
| ಬಿ.ಎಸ್.ಯಡಿಯೂರಪ್ಪ ಸಿಎಂ (ಬೀದರ್​ನಲ್ಲಿ ಹೇಳಿದ್ದು)
ಶೀಘ್ರದಲ್ಲಿಯೆ ವಿಜಯನಗರ ಜಿಲ್ಲೆ ಘೊಷಣೆಯಾಗುವ ನಂಬಿಕೆಯಿದೆ. ನನಗೆ ಸಚಿವ ಸ್ಥಾನಕ್ಕಿಂತ ವಿಜಯನಗರ ಜಿಲ್ಲೆ ಘೊಷಣೆಯೆ ಮುಖ್ಯ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಶ್ರೀರಾಮುಲುಗೆ ನೀಡಬೇಕು. ಒಂದು ವೇಳೆ ಸಿಎಂ ಮತ್ತು ಶ್ರೀರಾಮುಲು ನೀನೇ ಆಗಬೇಕು ಎಂದು ಅಪ್ಪಣೆ ಕೊಟ್ಟರೆ ಉಸ್ತುವಾರಿ ವಹಿಸುವೆ.
| ಆನಂದಸಿಂಗ್ ಸಚಿವ
ಕುಮಾರಸ್ವಾಮಿಯವರಿಗೆ ಬಿಜೆಪಿಗೆ ಬರುವ ಆಸೆ ಇದ್ದರೆ ಹೇಳಲಿ. ನಾವೇ ಅವರೊಂದಿಗೆ ಮಾತನಾಡಿ ಪಕ್ಷಕ್ಕೆ ಕರೆ ತರುತ್ತೇವೆ. ಬಿಜೆಪಿ ಶಾಸಕರ ಬಗ್ಗೆ ಏಕೆ ಚಿಂತೆ? ಮೊದಲು ಜೆಡಿಎಸ್ ಶಾಸಕರನ್ನು ಉಳಿಸಿಕೊಳ್ಳಲಿ. ಎಚ್​ಡಿಕೆ ಆಕಸ್ಮಿಕವಾಗಿ ಸಿಎಂ ಆಗಿದ್ದನ್ನು ನೆನ ಪಲ್ಲಿಟ್ಟುಕೊಂಡಿರಬೇಕು.
| ಬಿ.ಸಿ. ಪಾಟೀಲ್ ಸಚಿವ
ಎಲ್ಲರೂ ಸಂವಿಧಾನದ ಅನುಸಾರವಾಗಿಯೇ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಜನರಿಂದ ಮತ ಪಡೆದ ಗೆದ್ದ ನಂತರವೇ ಮಂತ್ರಿಗಳಾಗಿದ್ದಾರೆ. ವಿರೋಧ ಪಕ್ಷದ ನಾಯಕರಾದ ಮಾತ್ರಕ್ಕೆ ಪ್ರತಿಯೊಂದನ್ನು ಟೀಕೆ ಮಾಡುವುದು ಸರಿಯಲ್ಲ. ಎಲ್ಲರೂ ಹಣ ನೀಡಿ ಗೆದ್ದು ಬಂದಿ ದ್ದಾರೆಂಬುದರ ಅರ್ಥವೇನು ? ಹಾಗಾದರೆ ಸಿದ್ದರಾಮಯ್ಯ ಕೂಡ ಹಣ ನೀಡಿಯೇ ಗೆದ್ದು ಬಂದಿದ್ದಾರಾ?
| ಎಚ್.ವಿಶ್ವನಾಥ್ ಮಾಜಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 11 =
Remember me
