ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್​ಗಳನ್ನು (ಎಚ್​ಎಸ್​ಆರ್​ಪಿ) ಅಳವಡಿಸಲು ಸರ್ಕಾರ ಮತ್ತೊಮ್ಮೆ ಗಡುವು ವಿಸ್ತರಿಸಿದ್ದು, ಸೆಪ್ಟೆಂಬರ್ 16ರವರೆಗೆ ಸಮಯಾವಕಾಶ ನೀಡಿದೆ. ಅಲ್ಲದೆ, ಸೆ.15ರ ನಂತರ ಯಾವುದೇ ಕಾರಣಕ್ಕೂ ಗಡುವು ವಿಸ್ತರಿಸುವುದಿಲ್ಲ, ಇದು ಕೊನೆಯ ಅವಕಾಶ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಎಚ್​ಎಸ್​ಆರ್​ಪಿ ಅಳವಡಿಸಲು ಜನರು ನಿರಾಸಕ್ತಿ ತೋರುತ್ತಿರುವುದು ಹೌದಾದರೂ, ಅದಕ್ಕೆ ಪ್ರಮುಖ ಕಾರಣ ತಾಂತ್ರಿಕ ಸಮಸ್ಯೆ ಮತ್ತು ಸರಿಯಾದ ಮಾಹಿತಿ ಇಲ್ಲದಿರುವುದು. ಈ ತೊಡಕುಗಳನ್ನು ನಿವಾರಿಸದೆ ಎಷ್ಟೇ ಬಾರಿ ಗಡುವು ವಿಸ್ತರಿಸಿದರೂ ಪ್ರಯೋಜನವಿಲ್ಲ ಎಂಬ ವಾಸ್ತವವನ್ನು ಸರ್ಕಾರ ಅರ್ಥ ಮಾಡಿಕೊಂಡು, ಸೂಕ್ತ ಕ್ರಮಕ್ಕೆ ಮುಂದಾದರೆ ಅರ್ಧಸಮಸ್ಯೆ ಮುಕ್ತಾಯಗೊಂಡಂತೆ.
2019ರ ಏಪ್ರಿಲ್ 1ರ ನಂತರ ಖರೀದಿ ಮಾಡಿದ ಎಲ್ಲ ವಾಹನಗಳಿಗೆ ಡಿಲೆವರಿ ಮಾಡುವ ಹೊತ್ತಲ್ಲೇ ಡೀಲರ್​ಗಳು ಎಚ್​ಎಸ್​ಆರ್​ಪಿ ಹಾಕಿಸಿ ಕೊಡುತ್ತಿದ್ದಾರೆ. ಇದಕ್ಕೂ ಮುಂಚೆ ಖರೀದಿ ಮಾಡಿದ ವಾಹನಗಳಿಗೆ ಈ ಬಗೆಯ ನಂಬರ್ ಪ್ಲೇಟ್ ಇರಲಿಲ್ಲ. ಹಾಗಾಗಿಯೇ, 2019 ಏಪ್ರಿಲ್ 1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್​ಗಳನ್ನು (ಎಚ್​ಎಸ್​ಆರ್​ಪಿ) ಅಳವಡಿಸಲು ಸೂಚಿಸಲಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ 4,000ಕ್ಕೂ ಅಧಿಕ ಡೀಲರ್ ಪಾಯಿಂಟ್​ಗಳನ್ನು ಸಾರಿಗೆ ಇಲಾಖೆ ಗುರುತಿಸಿದೆ.
ರಾಜ್ಯದಲ್ಲಿ ಅಂದಾಜು 1.70 ಕೋಟಿ ಹಳೆಯ ವಾಹನಗಳಿದ್ದು, ಅದರಲ್ಲಿ ಈವರೆಗೆ 40 ಲಕ್ಷ ವಾಹನಗಳಿಗಷ್ಟೇ ಎಚ್​ಎಸ್​ಆರ್​ಪಿ ಅಳವಡಿಸಲಾಗಿದೆ. ವಾಹನಕ್ಕೆ ಒಮ್ಮೆ ಎಚ್​ಎಸ್​ಆರ್​ಪಿ ಹಾಕಿಸಿದರೆ ಅದನ್ನು ಬದಲಿಸಲು, ತಿದ್ದಲು ಸಾಧ್ಯವಿಲ್ಲ. ಅಲ್ಲದೆ, ಈ ನಂಬರ್ ಪ್ಲೇಟ್ ನಕಲಿ ಮಾಡಲು ಆಗುವುದಿಲ್ಲ. ವಾಹನ ಕಳ್ಳತನವಾದರೆ, ಯಾವುದೇ ಅಪರಾಧ ಕೃತ್ಯದಲ್ಲಿ ಬಳಸಿದರೆ ಅದನ್ನು ಗುರುತಿಸುವುದು ಸುಲಭ. ಮಾತ್ರವಲ್ಲ, ವೈಯಕ್ತಿಕ ಭದ್ರತೆ ಮತ್ತು ದೇಶದ ಭದ್ರತೆ ದೃಷ್ಟಿಯಿಂದ ಎಚ್​ಎಸ್​ಆರ್​ಪಿ ತುಂಬ ಮುಖ್ಯ. ಸರ್ಕಾರ ತರುವ ಪ್ರಮುಖ ನಿಯಮಗಳನ್ನು ಜನರು ಚಾಚೂ ತಪ್ಪದೆ ಪಾಲಿಸುತ್ತಾರೆ. ಆದರೆ, ಈ ವಿಷಯದಲ್ಲಿ ಜನರ ನಿರಾಸಕ್ತಿಗೆ ಅವರನ್ನು ದೂರಿ ಪ್ರಯೋಜನವಿಲ್ಲ. ದಂಡದ ಭೀತಿ ತೋರಿಸಿ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಕಾರಣ, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್​ಗೆ ನೋಂದಣಿ ಮಾಡುವ ಪ್ರಕ್ರಿಯೆಯಲ್ಲೇ ತಾಂತ್ರಿಕ ತೊಡಕುಗಳು ಎದುರಾಗುತ್ತಿದ್ದು, ನೋಂದಣಿ ಸಲೀಸಾಗಿ ಆಗುತ್ತಿಲ್ಲ. ಕರ್ನಾಟಕ ಸಾರಿಗೆ ಇಲಾಖೆಯ ವೆಬ್​ಸೈಟ್ ಮತ್ತು ಎಸ್​ಐಎಂಎಂ ವೆಬ್​ಸೈಟ್​ಗಳಲ್ಲಿ ಮಾತ್ರ ನೋಂದಣಿಗೆ ಅವಕಾಶವಿದೆ. ಈ ವೆಬ್​ಸೈಟ್​ಗಳಿಗೆ ದಟ್ಟಣೆ ಹೆಚ್ಚುತ್ತಿರುವುದರಿಂದ ಆರಂಭಿಕ ಹಂತದಲ್ಲೇ ನೋಂದಣಿ ಪ್ರಕ್ರಿಯೆ ವಿಫಲವಾಗುತ್ತಿದೆ. ಇಲ್ಲದಿದ್ದರೆ, ವಾಹನದ ವಿವರಗಳು ಭರ್ತಿ ಮಾಡಿ, ಸಲ್ಲಿಸುವ ವೇಳೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದೆ. ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ, ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಡೀಲರ್ ಗುರುತಿಸುವುದು. ಮನೆ/ಕಚೇರಿ ಹತ್ತಿರದ ಡೀಲರ್​ಗಳನ್ನು ಆಯ್ಕೆ ಮಾಡಲು ಹೋದರೆ, ಅದು ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ, ಗಡುವು ವಿಸ್ತರಿಸುವ ಜತೆಗೆ ನೋಂದಣಿ ಪ್ರಕ್ರಿಯೆಗಳಲ್ಲಿನ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು. ಜನರಿಗೆ ಈ ಬಗ್ಗೆ ಸೂಕ್ತ ಮಾಹಿತಿಯನ್ನು ಸಾರಿಗೆ ಇಲಾಖೆ ನೀಡಬೇಕು.
ಪಾಕಿಸ್ತಾನ: ಗುಂಡಿಕ್ಕಿ ಪತ್ರಕರ್ತನ ಹತ್ಯೆ ಮಾಡಿದ ಆಗಂತುಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
