ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸುವ ಪ್ರಮುಖ ಇಲಾಖೆಯಲ್ಲಿ ಒಂದಾದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮೇಲಿಂದ ಮೇಲೆ ಹೊಸ ಪದ್ಧತಿಯನ್ನು ಜಾರಿಗೆ ತಂದು ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಇತ್ತೀಚೆಗೆ ದಸ್ತಾವೇಜು ನೋಂದಣಿಗಾಗಿ ಟೈಮ್ ಸ್ಲಾಟ್ ಪದ್ಧತಿಗೆ ಜನರು ಮತ್ತು ಅಧಿಕಾರಿ ವರ್ಗ ಹೊಂದಿಕೊಳ್ಳುವ ಹೊತ್ತಿಗೆ ಮತ್ತೆ ‘ನೋಂದಣಿ ಪೂರ್ವ ಸ್ವಯಂಚಾಲಿತ ಆಡಿಟ್’ ಪದ್ಧತಿ ಅಳವಡಿಸಲಾಗಿದೆ.
ಕರ್ನಾಟಕ ಮುದ್ರಾಂಕ ಕಾಯ್ದೆ ಮತ್ತು ಭಾರತೀಯ ನೋಂದಣಿ ಕಾಯ್ದೆಯಲ್ಲಿ ಅವಕಾಶ ಇಲ್ಲದಿದ್ದರೂ ಇದನ್ನು ಜಾರಿಗೆ ತಂದಿರುವ ಪರಿಣಾಮ ರಿಜಿಸ್ಟ್ರೇಷನ್ ವಿಳಂಬವಾಗುತ್ತಿದೆ. ಪಾಸ್​ಪೋರ್ಟ್ ಮಾದರಿ ಸೇವೆ ನೀಡುವುದಾಗಿ ನೀಡಿದ್ದ ಭರವಸೆಯೂ ಹುಸಿಯಾಗಿದೆ. ಪರಿಣಾಮ, ಜನಸಾಮಾನ್ಯರು ತಮ್ಮದಲ್ಲದ ತಪ್ಪಿಗೆ ಸಮಸ್ಯೆ ಅನುಭವಿಸುವಂತಾಗಿದೆ.
ಪ್ರತಿ ಕಚೇರಿಯಲ್ಲಿ ವರ್ಷಕ್ಕೆ ಅಂದಾಜು 24 ಲಕ್ಷ ದಸ್ತಾವೇಜುಗಳ ನೋಂದಣಿ ಮೂಲಕ, 19 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹವಾಗುತ್ತಿದೆ. ಇದರ ನಡುವೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಸೋರಿಕೆ ತಡೆಗಟ್ಟುವ ನೆಪದಲ್ಲಿ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ.
ಹೊಸ ಪದ್ಧತಿಯ ಪ್ರಕಾರ ದಸ್ತಾವೇಜು ಅಪ್​ಲೋಡ್ ಮಾಡಿದ ಮೇಲೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಸಬ್​ರಿಜಿಸ್ಟ್ರಾರ್ ಅನುಮೋದಿಸಿದ ಮೇಲೆ ಆ ದಸ್ತಾವೇಜು ಆನ್​ಲೈನ್​ನಲ್ಲಿ ಸ್ವಯಂಚಾಲಿತವಾಗಿ ರಾಜ್ಯದ ಬೇರೆ ಸಬ್ ರಿಜಿಸ್ಟ್ರಾರ್ ಖಾತೆಗೆ ರವಾನೆ ಆಗುತ್ತದೆ.
ಈ ದಸ್ತಾವೇಜು ಸ್ವೀಕರಿಸುವ ಅಧಿಕಾರಿ, ಈ ಆಸ್ತಿಗೆ ರಾಜಸ್ವ ವಿಧಿಸಿರುವುದು ಸರಿ ಇದೆಯೇ ಎಂದು ಪರಿಶೀಲನೆ ನಡೆಸಬೇಕು. ಲೋಪ ಕಂಡುಬಂದರೆ ಸಂಬಂಧಪಟ್ಟ ಸಬ್ ರಿಜಿಸ್ಟ್ರಾರ್ ಗಮನಕ್ಕೆ ತಿಳಿಸಿ ಕಾರಣ ಕೊಟ್ಟು ಪಕ್ಷಕಾರರ ಲಾಗಿನ್​ಗೆ ರವಾನೆ ಮಾಡುತ್ತಿದ್ದಾರೆ. ಕೆಲ ಅಧಿಕಾರಿಗಳು ಮಾರ್ಗಸೂಚಿಯನ್ನು ಉಲ್ಲಂಘಿಸಿ ಮಾಡುವ ತಪ್ಪಿಗೆ ಇಡೀ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಶಿಕ್ಷೆ ವಿಧಿಸಿದಂತೆ ಆಗಿದೆ.
ದಿನನಿತ್ಯದ ಕೆಲಸದ ನಡುವೆ ಮಾರ್ಗಸೂಚಿ ಪಟ್ಟಿ ತೆರೆದು ಸರ್ವೆ ನಂಬರ್, ಸೈಟ್, ರಸ್ತೆ, ಲೇಔಟ್, ಗ್ರಾಮ ಹುಡುಕಿ ಶುಲ್ಕ ಸರಿ ಇದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕಿದೆ. 3 ಕೋಟಿ ರೂ. ಮೇಲ್ಪಟ್ಟ ಕ್ರಯಪತ್ರ ಮತ್ತು 5 ಕೋಟಿ ರೂ. ಮೇಲ್ಪಟ್ಟ ಜಂಟಿ ಅಭಿವೃದ್ಧಿ ಒಪ್ಪಂದ ಪತ್ರಕ್ಕೆ ಮಾತ್ರ ಅನ್ವಯ ಮಾಡಿದರೆ ಒಳಿತು. ಉಳಿದಂತೆ ಜಿಪಿಎ, ದಾನಪತ್ರ, ಹಕ್ಕು ಬಿಡುಗಡೆ ಪತ್ರ, ಕಂಪನಿ ನೋಂದಣಿ, ಟ್ರಸ್ಟ್ ನೋಂದಣಿ, ವರ್ಗಾವಣೆ ಪತ್ರ, ವಿಭಾಗ ಪತ್ರಗಳ ನೋಂದಣಿಗೂ ಅನ್ವಯ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಮತ್ತೊಂದೆಡೆ ಕಾವೇರಿ 2.0 ತಂತ್ರಾಂಶ ಜಾರಿಯಿಂದ ಆನ್​ಲೈನ್ ಸೇವೆ ಬಂದರೂ ಕಚೇರಿಗಳಲ್ಲಿ ಅವೈಜ್ಞಾನಿಕ ವ್ಯವಸ್ಥೆಯಿಂದ ಯಾವುದೇ ಕೆಲಸ ನಡೆಯುತ್ತಿಲ್ಲ.
ಇಲಾಖೆಯ ಮುಖ್ಯಸ್ಥರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ಕೊಟ್ಟು ಅಲ್ಲಿನ ವಾಸ್ತವ ಸಮಸ್ಯೆಯನ್ನು ಅರಿತು, ಪರಿಹಾರ ಒದಗಿಸಿದರೆ ಜನಸ್ನೇಹಿ ಸೇವೆ ಸಾಕಾರವಾಗಬಹುದು.
ಸಿಕ್ಕಿಂ ಮುಖ್ಯಮಂತ್ರಿಯಾಗಿ ಜೂನ್​ 10ಕ್ಕೆ ತಮಾಂಗ್ ಪ್ರಮಾಣ ವಚನ!

ಎನ್‌ಡಿಎ ಅಭಿವೃದ್ಧಿಯ ಧ್ಯೇಯ ಹೊಂದಿರುವ ಸರ್ಕಾರವನ್ನು ರಚಿಸಲಿದೆ: ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 20 =
Remember me
